ರೋಹಿತ್ ಆಟಕ್ಕೆ ಅಜಿತ್ ಗಪ್ ಚುಪ್! – NON COMMITAL ತಿರುಗೇಟು ಹೇಗಿದೆ?
HITಮ್ಯಾನ್ ಟಿ-ಶರ್ಟ್ ಫುಲ್ ಟ್ರೆಂಡ್

ರೋಹಿತ್ ಆಟಕ್ಕೆ ಅಜಿತ್ ಗಪ್ ಚುಪ್! – NON COMMITAL ತಿರುಗೇಟು ಹೇಗಿದೆ?HITಮ್ಯಾನ್ ಟಿ-ಶರ್ಟ್ ಫುಲ್ ಟ್ರೆಂಡ್

ಕಳೆದ ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ಸ್ಟಾರ್ ರೋಹಿತ್ ಶರ್ಮಾ ಧರಿಸಿದ್ದ ಟಿ-ಶರ್ಟ್ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. ಹಾಗಂತ ಅದು ಟಿ-ಶರ್ಟ್ ಬ್ರ್ಯಾಂಡ್, ಡಿಸೈನ್ ಅಥವಾ ಕಲರ್ ಕಾರಣಕ್ಕೋ ಅಲ್ಲ. ಅದ್ರ ಮೇಲೆ ಬರೆದಿದ್ದ ಟೆಕ್ಸ್​ಟ್ ನಿಂದಾಗಿ. ಇದು ಯಾರಿಗೆ ಟಾಂಟ್ ಕೊಟ್ಟಿದ್ದಾರೆ ಅನ್ನೋದೇ ಹಾಟ್ ಟಾಪಿಕ್.

ಇದನ್ನೂಓದಿ : ವೈಭವ್ ಜೋಡಿ ಸಂಜುನಾ.. ಅಭಿನಾ?  – ಭಾರತದ ಬೌಲಿಂಗ್ ನಲ್ಲಿ ಬೂಮ್ರಾಸ್ತ್ರ

ಟೀಂ ಇಂಡಿಯಾ ಏಕದಿನ ತಂಡದಲ್ಲಿ ಮಾತ್ರ ಆಡ್ತಿರೋ ರೋಹಿತ್ ಶರ್ಮಾ ಕಿರುತೆರೆಗೂ ಕಾಲಿಟ್ಟಿದ್ದಾರೆ. ಕ್ರಿಕೆಟ್ ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ ಎಂಬ ಹೆಸರಿನ ಪ್ರೋಗ್ರಾಂ ಸೆಪ್ಟೆಂಬರ್ 19 ರಂದು ಟೆಲಿಕಾಸ್ಟ್ ಆಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಈ ಶೋನ ಸಾಕಷ್ಟು ಪ್ರೋಮೋಗಳು ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಟ್ರೆಂಡಿಂಗ್​ನಲ್ಲಿದೆ. ಅದ್ರಲ್ಲೂ ಇತ್ತೀಚಿನ ಪ್ರೋಮೋವೊಂದ್ರಲ್ಲಿ ರೋಹಿತ್ ಬಿಳಿ ಟೀ ಶರ್ಟ್ ಧರಿಸಿದ್ದು ಅದ್ರ ಮೇಲಿನ ಬರಹವೇ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಅದೂ ಕೂದ ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್​ಗೆ ಟಾಂಟ್ ಕೊಟ್ರಾ ಎನ್ನುವಂಥ ಪ್ರಶ್ನೆಗಳನ್ನ ಮೂಡಿಸಿದೆ.

ಟಿ-ಶರ್ಟ್ ಬರಹದ ಮೂಲಕವೇ ಅಗರ್ಕರ್ ಗೆ ತಿರುಗೇಟು!

2027ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಆಡ್ತಾರಾ ಇಲ್ವಾ ಅನ್ನೋ ಬಗ್ಗೆ ಪದೇಪದೆ ಚರ್ಚೆಯಾಗ್ತಾನೇ ಇರುತ್ತೆ. ಈ ಬಗ್ಗೆ ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ಮಾತನಾಡಿದ್ರು. ಅವರಿಬ್ಬರೂ 2027ರ ವಿಶ್ವಕಪ್ ಆಡುವ ಬಗ್ಗೆ ಸದ್ಯಕ್ಕೆ ನಾನ್-ಕಮಿಟೆಡ್ ಅಂದರೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಅಥವಾ ಫೈನಲ್ ಮಾಡಿಲ್ಲ ಅಂದಿದ್ರು. ಯಾವುದೇ ಕ್ಲಾರಿಟಿ ಇಲ್ಲ ಅನ್ನೋ ಅರ್ಥದಲ್ಲಿ ಮಾತನಾಡಿದ್ರು. ಇದು ಸಾಕಷ್ಟು ವಿರೋಧಗಳಿಗೂ ಕಾರಣವಾಗಿತ್ತು. ಇತ್ತೀಚೆಗಷ್ಟೇ ರೋಹಿತ್ ಶರ್ಮಾ ವಿಶ್ವಕಪ್​ನಲ್ಲಿ ಆಡ್ತೀರಾ ಇಲ್ವಾ ಅನ್ನೋ ಬಗ್ಗೆ ರಿಯಾಕ್ಟ್ ಮಾಡಿದ್ರು. 2027ರ ಅಕ್ಟೋಬರ್ ಬಹಳ ದೂರದಲ್ಲಿದೆ, ಅದರ ಬಗ್ಗೆ ನಂತರ ನೋಡೋಣ ಎಂದಿದ್ರು. ಹಾಗೇ ಟಿವಿ ಶೋನಲ್ಲಿ ಅಗರ್ಕರ್​ಗೂ ತಿರುಗೇಟು ಕೊಟ್ಟಿದ್ದಾರೆ. ಅಗರ್ಕರ್ ಅಂದು ಬಳಸಿದ್ದ ಅದೇ ಪದವನ್ನೇ ರೋಹಿತ್ ತಮ್ಮ ಟಿ-ಶರ್ಟ್ ಮೇಲೆ ಮುದ್ರಿಸಿಕೊಂಡು ಧರಿಸಿರುವುದನ್ನು ನೋಡಿದ ಫ್ಯಾನ್ಸ್ ಇದು ಅಜಿತ್ ಅಗರ್ಕರ್ ಬಾಯಿ ಮುಚ್ಚಿಸಲು ರೋಹಿತ್ ನೀಡಿದ ಸಖತ್ ತಿರುಗೇಟು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.  ಹಿಟ್‌ಮ್ಯಾನ್ ಮೈದಾನದ ಹೊರಗೂ ತಮಗೆ ಟೀಕಿಸಿದವರಿಗೆ ಹೇಗೆ ತಿರುಗೇಟು ನೀಡಬೇಕೆಂದು ಚೆನ್ನಾಗಿ ಬಲ್ಲರು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕ್ತಿದ್ದಾರೆ. ಒಟ್ನಲ್ಲಿ ಪಬ್ಲಿಕ್ ಫಿಗರ್​ನಲ್ಲಿರೋದು ಏನೇ ಮಾಡಿದ್ರೂ ಅದು ದೊಡ್ಡ ಸುದ್ದಿಯಾಗುತ್ತೆ. ಅವ್ರು ಹಾಕೋ ಬಟ್ಟೆ, ನೋಟ, ಬಿಹೇವಿಯರ್ ಹೀಗೆ ಎಲ್ಲವೂ ಚರ್ಚೆಗೆ ಬರುತ್ತೆ. ಈಗ ರೋಹಿತ್ ಟಿ-ಶರ್ಟ್ ಕೂಡ ಹೀಗೇ ಆಗಿದೆ.

Shantha Kumari

Leave a Reply

Your email address will not be published. Required fields are marked *