ನಖ್ವಿ ಕೈಯಿಂದ ಟ್ರೋಫಿ ತಗೊಳಲ್ವಾ ಕೌರ್ – ಬಿಸಿಸಿಐ ಮುಂದಿರೋ ಆಯ್ಕೆಗಳೇನು?

10ನೇ ಸೀಸನ್.. 10ನೇ ಸಲ ಫೈನಲ್.. 7 ಸಲ ಚಾಂಪಿಯನ್ಸ್.. ಮತ್ತೊಂದು ಟ್ರೋಫಿಗೆ ಕೌಂಟ್ಡೌನ್. ಮಹಿಳಾ ಏಷ್ಯಾಕಪ್ನಲ್ಲಿ ಭಾರತದ ಸಿಂಹಿಣಿಯರು ನಡೆದಿದ್ದೇ ದಾರಿ.. ಈವನ್ ಸಿಂಗಲ್ ಇಯರ್ ಕೂಡ ಫೈನಲ್ಸ್ ಮಿಸ್ ಮಾಡಿಕೊಂಡಿಲ್ಲ. ಈ ಸಲ ಕೂಡ ಟ್ರೋಫಿ ಬೇಟೆಯ ಸುತ್ತಿಗೆ ಕಾಲಿಟ್ಟಾಗಿದೆ. ಟೂರ್ನಮೆಂಟ್ನಲ್ಲಿ ಅಜೇಯವಾಗಿ ಫೈನಲ್ಗೆ ನುಗ್ಗಿರೋ ಭಾರತ ಕಪ್ ಗೆಲ್ಲೋಕೆ ಇನ್ನೊಂದೇ ಹೆಜ್ಜೆ ಬಾಕಿ. ಟ್ರೋಫಿ ಗೆಲುವಿನ ಫೇವರೆಟ್ ಟೀಂ ಕೂಡ. ಆದ್ರೆ ಭಾರತಕ್ಕೆ ಟ್ರೋಫಿ ಗೆದ್ರೂ ನೆಮ್ಮದಿ ಇರಲ್ಲ. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯೇ ಈ ಸಲವೂ ಟ್ರೋಫಿ ಎತ್ಕೊಂಡು ಹೋಗ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ. ಹಾಗೇ ಇಲ್ಲಿ ಭಾರತ ಇಕ್ಕಟ್ಟಿಗೆ ಸಿಲುಕಿದೆ.
ಇದನ್ನೂ ಓದಿ : ಇಶಾನ್ ಕಿಶನ್ 350 ರನ್‌ಗಳ ಅಬ್ಬರ – ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಾಖಲೆ
ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಏಷ್ಯಾಕಪ್ ಫೈನಲ್ ಆಡಲು ರೆಡಿಯಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈವೋಲ್ಟೇಜ್ ಮ್ಯಾಚ್ಗೆ ಸಿದ್ಧವಾಗಿದೆ. ಟೂರ್ನಮೆಂಟ್ ಇತಿಹಾಸದಲ್ಲಿ ಭಾರತವೇ ಅತೀಹೆಚ್ಚು ಟ್ರೋಫಿಗಳನ್ನ ಗೆದ್ದಿರೋದ್ರಿಂದ ಈ ಬಾರಿಯ ಫೈನಲ್ನಲ್ಲೂ ಕೂಡ ಭಾರತವೇ ಟ್ರೋಫಿ ಗೆಲ್ಲುವ ಬಲಿಷ್ಠ ತಂಡ. ಆದ್ರೆ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ರೂ ಟ್ರೋಫಿ ಭಾರತದ ವನಿತೆಯರ ಕೈ ಸೇರುತ್ತಾ ಅನ್ನೋದೇ ಅನುಮಾನ.
ಟ್ರೋಫಿ ಸ್ವೀಕಾರ ಮಾಡದ ಸೂರ್ಯ.. ಏನ್ ಮಾಡ್ತಾರೆ ಕೌರ್!
ಭಾರತದ ಪಾಲಿಗೆ ಈ ಸಂಡೇ ಕೂಡ ಸೂಪರ್ ಸಂಡೇ ಆಗೋದ್ರಲ್ಲಿ ಡೌಟೇ ಇಲ್ಲ. ಭಾರತದ ವನಿತೆಯರು ಏಷ್ಯಾಕಪ್ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸೋಕೆ ಸಜ್ಜಾಗಿದ್ದಾರೆ. ಆದ್ರೆ ಟ್ರೋಫಿ ಗೆದ್ಮೇಲೆ ದುಬೈ ಕ್ರೀಡಾಂಗಣ ಮತ್ತೊಂದು ಡ್ರಾಮಾಗೆ ಸಾಕ್ಷಿಯಾಗೋದಂತೂ ಪಕ್ಕಾ. ಕಳೆದ ವರ್ಷ ಪೆಹಲ್ಗಾಮ್ನಲ್ಲಿ ಭಾರತೀಯರ ಮೇಲೆ ನಡೆದ ದಾಳಿಯಲ್ಲಿ ಹಲವು ಅಮಾಯಕರು ಪ್ರಾಣ ಕಳ್ಕೊಂಡಿದ್ರು. ಈ ದಾಳಿಯ ಹಿಂದೆ ಪಾಪಿ ಪಾಕಿಸ್ತಾನದ ಕುಮ್ಮಕ್ಕು ಇದ್ದದ್ದು ಎಲ್ರಿಗೂ ಗೊತ್ತಿರೋದೇ. ಈ ದಾಳಿ ಆದ್ಮೇಲೆ ಏಷ್ಯಾಕಪ್ ನಡೆದಿದ್ದು ಅಲ್ಲಿ ಭಾರತ-ಪಾಕ್ ಪಂದ್ಯಗಳ ಚಿತ್ರಣವೇ ಬದಲಾಗಿತ್ತು. ಪರಸ್ಪರ ಆಟಗಾರರು ಕೈಕುಲಿಕಿರಲಿಲ್ಲ. ಪಂದ್ಯ ಮುಗಿದ ಮೇಲೆ ನೋ ಶೇಕ್ ಹ್ಯಾಂಡ್. ಇದಾದ್ಮೇಲೆ ಫೈನಲ್ನಲ್ಲೂ ಹೈಡ್ರಾಮಾ. ಪಿಸಿಬಿ, ಎಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಪಾಕಿಸ್ತಾನ ಆಂತರಿಕ ಸಚಿವನೂ ಆಗಿರೋ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕಾರ ಮಾಡಲ್ಲ ಅಂತಾ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯ ಭಾರತದ ಆಟಗಾರರು ನಿರಾಕರಿಸಿದ್ರು. ಮತ್ತೊಂದೆಡೆ ನಾನೇ ಎಸಿಸಿ ಅಧ್ಯಕ್ಷ ನನ್ನ ಕೈಯಿಂದಲೇ ಟ್ರೋಫಿ ತಗೊಳ್ಬೇಕು ಅಂತಾ ಮೊಂಡಾಟ ಮಾಡಿದ ನಖ್ವಿ ಆ ಬಳಿಕ ಸ್ಟೇಡಿಯಮ್ನಿಂದ ಟ್ರೋಫಿಯನ್ನೇ ಹೊತ್ತೊಯ್ದಿದ್ರು. ಸ್ಟಿಲ್ ಈವರೆಗೂ ಟ್ರೋಫಿ ಬಿಸಿಸಿಐ ಕೈಸೇರಿಲ್ಲ. ಹೀಗಿರುವಾಗ ಮಹಿಳಾ ಏಷ್ಯಾಕಪ್ನಲ್ಲಿ ಕಥೆ ಹೇಗೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ. ಌಂಡ್ ಇಲ್ಲಿ ಬಿಸಿಸಿಐ ಕಡೆಯಿಂದ ಯಾವ ರೀತಿಯ ಇನ್ಸ್ಟ್ರಕ್ಷನ್ ನೀಡಲಾಗಿದೆ ಅನ್ನೋದು ಕೂಡ ಹೊರಬಿದ್ದಿಲ್ಲ. ಹಾಗೇ ಹರ್ಮನ್ ಪ್ರೀತ್ ಕೌರ್ ಇಲ್ಲಿ ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಒಂದಷ್ಟು ಪ್ರಶ್ನೆಗಳೂ ಮೂಡಿವೆ.
ಟ್ರೋಫಿ ಗೆದ್ರೂ ಸಂಕಷ್ಟ!
ಸೂರ್ಯಕುಮಾರ್ ಟ್ರೋಫಿ ಸ್ವೀಕರಿಸಿಲ್ಲ.. ಕೌರ್ ಕೂಡ ಹೀಗೇ ಮಾಡ್ತಾರಾ?
ನಖ್ವಿ ಕೈಯಿಂದ ಟ್ರೋಫಿ ತಗೊಂಡ್ರೆ ಮೆನ್ಸ್ & ವುಮೆನ್ಸ್ ಟೀಂ ಬೇರೆ ಸಂದೇಶ
ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಿದ್ರೆ ಭಾರತ ವೀಕ್ ಆಯ್ತಾ ಅನ್ನೋ ಚರ್ಚೆ
ಸೂರ್ಯನಂತೆಯೇ ಟ್ರೋಫಿ ಸ್ವೀಕರಿಸದೇ ಇದ್ರೆ ಕ್ರೀಢಾಸ್ಪೂರ್ತಿ ಬಗ್ಗೆ ಮಾತು
ಟ್ರೋಫಿ ಸ್ವೀಕಾರ ವಿಚಾರದಲ್ಲಿ ಬಿಸಿಸಿಐ ಯಾವ ರೀತಿಯ ನಿರ್ಧಾರ ತಗೊಳ್ಳುತ್ತೆ?
ಹೀಗೆ ಭಾರತ ಫೈನಲ್‌ನಲ್ಲಿ ಟ್ರೋಫಿ ಗೆದ್ರೂ ತಲೆಬಿಸಿ ಮಾತ್ರ ತಪ್ಪಲ್ಲ. ಒಂದ್ಕಡೆ ತಮ್ಮ ರಾಷ್ಟ್ರದ ಆಟಗಾರ್ತಿಯರು ಹೀನಾಯವಾಗಿ ಸೋಲ್ತಿದ್ರೂ ತನಗಿರೋ ಪವರ್ನೇ ಅಡ್ವಾಂಟೇಜ್ ಮಾಡಿಕೊಂಡು ಭಾರತಕ್ಕೆ ತಾನೇ ತನ್ನ ಕೈಯ್ಯಾರೆ ಟ್ರೋಫಿ ಕೊಟ್ಟು ಬಿಲ್ಡಪ್ ಕೊಡ್ಬೇಕು ಅಂತಾ ಕಾಯ್ತಿರೋ ನಖ್ವಿ. ಆದ್ರೆ ಪಾಕ್ ಸಚಿವನ ಕೈಯಿಂದ ಟ್ರೋಫಿ ಬೇಡ ಎನ್ನುತ್ತಿರೋ ಭಾರತ ಟೀಂ. ಹೀಗಾಗಿ ಇವತ್ತಿನ ಫೈನಲ್ ಪಂದ್ಯ ಆಟಕ್ಕಿಂತ ಜಾಸ್ತಿ ಆಟದ ಬಳಿಕ ನಡೆಯೋ ನಾಟಕಗಳೇ ಜಾಸ್ತಿ ಇರುತ್ತೆ.

ನೋಡಿರಿ

