ಏಷ್ಯಾಕಪ್ ಫಿನಾಲೆಗೆ ಭಾರತ – ಸಿಂಹಿಣಿಯರ ಸದ್ದಿಗೆ ಬಾಂಗ್ಲಾ ಸುಸ್ತು
ಈ ಸಲನೂ ಕಪ್ ನಮ್ದೇ?

ಏಷ್ಯಾಕಪ್ ಫಿನಾಲೆಗೆ ಭಾರತ – ಸಿಂಹಿಣಿಯರ ಸದ್ದಿಗೆ ಬಾಂಗ್ಲಾ ಸುಸ್ತುಈ ಸಲನೂ ಕಪ್ ನಮ್ದೇ?

ಮಹಿಳಾ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಆಟಗಾರ್ತಿಯರು ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಸತತವಾಗಿ 10ನೇ ಅವ್ರುತ್ತಿಯಲ್ಲೂ ಅನ್ನೋದು ಗ್ರೇಟ್ ಥಿಂಗ್. ಬಾಂಗ್ಲಾ ವಿರುದ್ಧದ ಸೆಮಿಫೈನಲ್ ಗೆದ್ದು ಟ್ರೋಫಿ ಸುತ್ತಿಗೆ ಕಾಲಿಟ್ಟಿದು ಭಾನುವಾರ ಫೈನಲ್ ಮ್ಯಾಚ್ ಇದೆ.

ಇದನ್ನೂ ಓದಿ : ಹರ್ಷಿತ್ ರಾಣಾ T20Iಯಿಂದ OUT! CSK ಕೋಚ್..20 ಕೋಟಿಗೆ ಡೀಲ್?

ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮೀಸ್​ಗೆ ನುಗ್ಗಿದ್ದ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧವೂ ಗೆದ್ದು ಫೈನಲ್​ಗೇರಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮಹಿಳಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 149 ರನ್ ಕಲೆಹಾಕಿತು. ತಂಡದ ಪರ ಶಫಾಲಿ ವರ್ಮಾ 64 ರನ್​ಗಳ ಬೆಸ್ಟ್ ಇನ್ನಿಂಗ್ಸ್ ಆಡಿದ್ರು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ, ಟೀಂ ಇಂಡಿಯಾದ ಬೌಲಿಂಗ್ ಅಟ್ಯಾಕ್​ಗೆ ಸರೆಂಡರ್ ಆಗಿ 20 ಓವರ್​ಗಳಲ್ಲಿ 109 ರನ್ ಬಾರಿಸಲಷ್ಟೇ ಸಾಧ್ಯವಾಯ್ತು. 40 ರನ್​ಗಳಿಂದ ಸೋಲೊಪ್ಪಿಕೊಂಡಿತು. ಹಾಗೇ ಇಲ್ಲಿ ಬಾಂಗ್ಲಾ ಪ್ಲೇಯರ್ಸ್ ಮಿಸ್ಟೇಕ್ಸ್ ಕೂಡ ಇದೆ.

ಬ್ಯಾಟಿಂಗ್.. ಬೌಲಿಂಗ್ & ಫೀಲ್ಡಿಂಗ್ ನಲ್ಲೂ ಬಾಂಗ್ಲಾ ಫೇಲ್!

ಅಷ್ಟಕ್ಕೂ ಟೀಂ ಇಂಡಿಯಾ ಬ್ಯಾಟಿಂಗ್​ ಶುರು ಮಾಡಿದಾಗ ಒಳ್ಳೆ ಓಪನಿಂಗ್ ಸಿಕ್ಕಿರ್ಲಿಲ್ಲ. ಆದ್ರೆ ಶೆಫಾಲಿ ಅವ್ರ ಜವಾಬ್ದಾರಿಯುತ ಇನ್ನಿಂಗ್ಸ್​ನಿಂದಾಗಿ 149 ರನ್ಸ್ ಕಲೆ ಹಾಕಿದ್ದು. ಶಫಾಲಿಗೆ ಅದೃಷ್ಟವೂ ಕೈಹಿಡಿದಿತ್ತು. ಯಾಕಂದ್ರೆ ಪಂದ್ಯದಲ್ಲಿ ಸಿಕ್ಕಿದ್ದು ಬರೋಬ್ಬರಿ 4 ಜೀವದಾನಗಳು ಇದರಲ್ಲಿ ಮೂರು ಸುಲಭ ಕ್ಯಾಚ್​ಗಳಾದರೆ, ಇನ್ನೊಂದು ಸುಲಭ ರನೌಟ್. ಈ ನಾಲ್ಕು ಅವಕಾಶಗಳನ್ನು ಬಾಂಗ್ಲಾದೇಶ ತಂಡ ಕೈಚೆಲ್ಲಿತು. ಇಲ್ಲದೇ ಇದ್ರೂ ಇನ್ನೂ ಕಡಿಮೆ ಮೊತ್ತಕ್ಕೆ ಬಹುಶಃ ಭಾರತವನ್ನ ಕಟ್ಟಿ ಹಾಕ್ತಿದ್ರೇನೋ. ಇದರ ಲಾಭ ಪಡೆದ ಶಫಾಲಿ ವರ್ಮಾ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 64 ರನ್​ಗಳ ಇನ್ನಿಂಗ್ಸ್ ಆಡಿದರು. ಇನ್ನು ಬೌಲಿಂಗ್ ನಲ್ಲಿ ದೀಪ್ತಿ ಶರ್ಮಾ ಮೂರು ವಿಕೆಟ್ಸ್ ತೆಗೆದ್ರೆ ನಂದನಿ ಶರ್ಮಾ 2 ವಿಕೆಟ್, ಶ್ರೀಚರಣಿ ಮತ್ತು ಪ್ರೇಮಾ ರಾವತ್ ತಲಾ ಒಂದೊಂದು ವಿಕೆಟ್ಸ್ ಬೇಟೆಯಾಡಿದ್ರು. ಭಾರತದ ಇನ್ನೊಂದು ಪ್ಲಸ್ ಪಾಯಿಂಟ್ ಅಂದ್ರೆ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲೂ ಒನ್ ಸೈಡೆಡ್ ಆಗಿ ವಿನ್ ಆಗಿದ್ದಾರೆ. ಎಲ್ಲಿಯೂ ಕೂಡ ಕ್ಲೋಸ್ ಗೇಮ್ ಕೂಡ ಆಗಿಲ್ಲ. ಇವತ್ತು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ 2ನೇ ಸೆಮಿಫೈನಲ್ ಪಂದ್ಯ ಇದ್ದು ಇಲ್ಲಿ ಗೆದ್ದವ್ರು ಫೈನಲ್​ಗೆ ಬರ್ತಾರೆ. ಈಗಾಗ್ಲೇ ಪಾಕಿಸ್ತಾನವನ್ನ ಗ್ರೂಪ್ ಸ್ಟೇಜ್​ನಲ್ಲಿ 55 ರನ್​ಗಳಿಗೆ ಆಲೌಟ್ ಮಾಡಿದ್ದ ಭಾರತ ಫೈನಲ್​ನಲ್ಲಿ ಮುಖಾಮುಖಿಯಾದ್ರೆ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗುತ್ತೆ. ಇನ್ನು ಲಂಕಾ ಪಡೆ ಈ ಆವೃತ್ತಿಯಲ್ಲಿ ಅವ್ರೂ ಕೂಡ ಸ್ಟ್ರಾಂಗ್ ಇದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮಹಿಳಾ ತಂಡವು ಗ್ರೂಪ್‌-ಬಿ ನಲ್ಲಿ ಅಜೇಯವಾಗಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. ಯುಎಇಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಚಮಾರಿ ಅಟಪಟ್ಟು ನೇತೃತ್ವದ ಲಂಕಾ ಪಡೆ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿದೆ. ಹೀಗಾಗಿ ಪಾಕ್ ವಿರುದ್ಧ ಅವ್ರೇ ಗೆದ್ದು ಫೈನಲ್​ಗೆ ಬರೋ ಚಾನ್ಸಸ್ ಜಾಸ್ತಿ ಇದೆ. ಭಾರತ-ಲಂಕಾ ಫೈನಲ್​ನಲ್ಲಿ ಮುಖಾಮುಖಿಯಾದ್ರೆ ಹೈವೋಲ್ಟೇಜ್ ಮ್ಯಾಚ್ ಆಗೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *