80ರ ದಶಕದ ಫೋಟೋ ಟ್ರೆಂಡ್ ಡೇಂಜರ್- ರೆಟ್ರೋ ಲುಕ್ ಖುಷಿಗಾಗಿ ತಪ್ಪು ಮಾಡಬೇಡಿ..!

80s ಲುಕ್ ಕ್ರಿಯೇಟ್ ಮಾಡಿಕೊಂಡು ನಿಮ್ಮನ್ನೇ ನೀವು ನೋಡಿಕೊಂಡು ಮೈಮರೆತಿದ್ದೀರಾ.. ಹಾಗಾದ್ರೆ ಸ್ವಲ್ಪ ಹುಷಾರಾಗಿರಿ. ಸೈಬರ್ ತಜ್ಞರು ಈ ವಿಚಾರದ ಬಗ್ಗೆ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಕೋಡಿಮಠ ಶ್ರೀಗಳ ಮತ್ತೊಂದು ಭವಿಷ್ಯವಾಣಿ..! ದಕ್ಷಿಣ ಭಾರತಕ್ಕೆ ಪ್ರವಾಹದ ಎಚ್ಚರಿಕೆ
ವಾಟ್ಸಾಪ್ ಸ್ಟೇಟಸ್‌ನಲ್ಲಿ, ಇನ್ಸ್ಟಾ, ಫೇಸ್ಬುಕ್ ನಲ್ಲಿ ಎಲ್ಲಿ ನೋಡಿದರೂ 80ರ ದಶಕದ ವಿಂಟೇಜ್ ಶೈಲಿಯ ಫೋಟೋಗಳೇ ರಾರಾಜಿಸುತ್ತಿವೆ. AI ಟೆಕ್ನಾಲಜಿ ಬಳಸಿಕೊಂಡು ಫೋಟೋಗಳನ್ನ 80ರ ದಶಕದ ಪೋಸ್ಟರ್ನಂತೆ ಮಾಡಿಕೊಳ್ಳುವ ಕ್ರೇಜ್ ಜೋರಾಗಿಯೇ ಇದೆ. ಆದ್ರೆ ಟ್ರೆಂಡ್ ಆಗ್ತಿರುವ 80s ಫೋಟೋಸ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಸೈಬರ್ ಎಕ್ಸ್‌ಪರ್ಟ್ ಡಾ.ಶುಭಮಂಗಳ ಮಾತಾಡಿದ್ದು, ಈ ಫೋಟೋ, ಪೋಸ್ಟರ್ ಕ್ರಿಯೇಟ್ ಮಾಡೋ ಮುನ್ನ ಹುಷಾರ್ ಎಂದಿದ್ದಾರೆ. ಸೈಬರ್ ಕಿರಾತಕರಿಗೆ ನಿಮ್ಮ ಒರಿಜಿನಲ್ ಫೋಟೋಸ್ಗಳನ್ನ ನೀವೇ ಕೊಟ್ಟು ಅಪರಾಧ ಕೃತ್ಯಕ್ಕೆ ನಿಮ್ಮದೇ ಫೋಟೋ ಬಳಕೆಗೆ ದಾರಿ ಮಾಡಿಕೊಡಬೇಡಿ ಎಂದು ಸೈಬರ್ ಎಕ್ಸ್‌ಪರ್ಟ್ ಡಾ.ಶುಭಮಂಗಳ ಎಚ್ಚರಿಸಿದ್ದಾರೆ. 80s ಫೋಟೋ ರೂಪಿಸುವ ಬಗ್ಗೆ ಸೈಬರ್ ತಜ್ಞರು ಆತಂಕ ಹೊರಹಾಕಿದ್ದು, 80s ರೂಪ ತಾಳುವ ನಿಮ್ಮ ಆಸಕ್ತಿಯೇ ಸೈಬರ್ ಕಿರಾತಕರಿಗೆ ಬಂಡವಾಳವಾಗಿದೆ ಎಂದಿದ್ದಾರೆ. ಮುಖ್ಯವಾಗಿ ಯುವತಿಯರ ಫೋಟೋ 80sಗೆ ಕನ್ವರ್ಟ್ ಮಾಡುವ ಮುನ್ನ ಎಚ್ಚರವಾಗಿ ಇರಬೇಕಿದೆ. 80s ಟ್ರೆಂಡ್ನಿಂದ ನೀವೂ ಕೂಡ ಸಂಕಷ್ಟಕ್ಕೆ ಸಿಲುಕಬೇಡಿ ಎಂದಿದ್ದಾರೆ. ಇದ್ರಿಂದ ಸೈಬರ್ ಅಪರಾಧಿಗಳಿಗೆ ನಿಮ್ಮ ಡೇಟಾ ಸುಲಭವಾಗಿ ಸಿಗಲಿದೆ. ಆಪ್ ಲೋಡ್ ಮಾಡುವ ಒರಿಜಿನಲ್ ಫೋಟೋ ಸೈಬರ್ ಅಪರಾಧಿಗಳಿಗೆ ಸಿಕ್ಕಿ ವಿವಿಧೆಡೆ ಬಳಕೆಯಾಗೋ ಸಾಧ್ಯತೆ ಇದೆ. Face data exposure ಮೂಲಕ ವಿವಿಧ ಕೃತ್ಯಗಳಿಗೆ ನಿಮ್ಮ ಫೇಸ್ ಬಳಕೆ ಆಗುವ ಸಾಧ್ಯತೆ ಇದ್ದು, ಜೊತೆಗೆ Face Recognization ನಿಂದ ಡೇಟಾ ಕಳ್ಳತನ ಆಗುವ ಸಂಭವವಿದೆ. ಇದರ ಜೊತೆಗೆ ನಿಮ್ಮ ಫೋಟೋ ಡೀಫ್ ಫೇಕ್ ಆ್ಯಪ್ಗಳಿಗೂ ಬಳಕೆ ಆಗುವ ಸಾಧ್ಯತೆ ಇದೆ. ಹಾಗೇ ಡಾರ್ಕ್ ವೆಬ್ನಲ್ಲಿ ಫೋಟೋ ಮೂಲಕ ನಿಮ್ಮ ಮಾಹಿತಿ ಸಂಗ್ರಹ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆದಷ್ಟು ಇಂತಹ ಟ್ರೆಂಡ್ ಗಳಿಗೆ ಮಾರು ಹೋಗ್ಬೇಡಿ ಎಂದು ಸೈಬರ್ ಎಕ್ಸ್‌ಪರ್ಟ್ಸ್ ಎಚ್ಚರಿಕೆ ನೀಡಿದ್ದಾರೆ.

ನೋಡಿರಿ

