ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ!

ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ!

ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್‌ವೊಂದಿದೆ. ಇನ್ಮುಂದೆ ಬಿಎಂಟಿಸಿ ಬಸ್‌ ಎಲ್ಲಿದೆ? ಯಾವಾಗ ನಿಮ್ಮ ನಿಲ್ದಾಣಕ್ಕೆ ಬರಲಿದೆ ಅನ್ನೋದನ್ನ ಇನ್ಮುಂದೆ ಸುಲಭವಾಗಿ ತಿಳಿದುಕೊಳ್ಳಬಹುದು. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್ ಮುಂತಾದವುಗಳ ಮೂಲಕವೇ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್‌ ಟ್ರ್ಯಾಕ್ ಮಾಡಲು ಹಾಗೂ ಟಿಕೆಟ್ ಬುಕ್ ಮಾಡಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಅಡುಗೆ ಮನೆಯಲ್ಲಿದೆ ಪರಿಹಾರ! – ನಿತ್ಯ ಇಂಗು ಸೇವಿಸೋದ್ರಿಂದ ಎಷ್ಟೊಂದು ಲಾಭ!

ಬಿಎಂಟಿಸಿ ಬಸ್‌ ಪ್ರಯಾಣಿಕರು ಇನ್ಮುಂದೆ ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಓಲಾ, ಉಬರ್ ಮುಂತಾದವುಗಳ ಮೂಲಕವೇ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್‌ ಟ್ರ್ಯಾಕ್ ಮಾಡಲು ಹಾಗೂ ಟಿಕೆಟ್ ಬುಕ್ ಮಾಡಬಹುದು. ಈ ಸೇವೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಮೇಲ್ದರ್ಜೆಗೇರಿಸುತ್ತಿದ್ದು, ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0 ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಿದೆ.

ನಮ್ಮ ಬಿಎಂಟಿಸಿ ಆ್ಯಪ್ 2.0ನಲ್ಲಿ ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಸಹ ಇನ್ಮುಂದೆ ಆ್ಯಪ್‌ನಲ್ಲಿ ನಿಖರವಾಗಿ ಸಿಗಲಿದೆ. ಪ್ರಸ್ತುತ ಬಿಎಂಟಿಸಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು 6,200 ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಚಿಸಿದರು.

Shwetha M

Leave a Reply

Your email address will not be published. Required fields are marked *