ಟರ್ಕಿ ಭೂಕಂಪಕ್ಕೆ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ – ರಾಜ್ಯಸರ್ಕಾರದಿಂದ ನೆರವಿನ ಭರವಸೆ
080-22340676 ಸಹಾಯವಾಣಿ ನಂಬರ್‌ಗೆ ಕರೆ ಮಾಡಿ - ಸಿಎಂ ಮನವಿ
ಟರ್ಕಿಯಲ್ಲಿ ಭೀಕರ ಭೂಕಂಪಕ್ಕೆ ಸಿಲುಕಿ ಕಷ್ಟದಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಆರಂಭಕ್ಕೂ ಮೊದಲು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಭೂಕಂಪ ಪೀಡಿತ ಟರ್ಕಿಯಲ್ಲಿ ಸಿಲುಕಿರುವ ರಾಜ್ಯದ ಜನರ ನೆರವಿಗೆ ಸರ್ಕಾರ ಬರಲಿದೆ. ಅಲ್ಲಿನ ಕನ್ನಡಿಗರ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಂದನಿಗೆ ಉಸಿರು ನೀಡಿ ತಾಯಿ ಕೊನೆಯುಸಿರು – ಅವಶೇಷಗಳಡಿ ಹೊಕ್ಕುಳಬಳ್ಳಿ ಸಮೇತ ಸಿಕ್ಕ ಹಸುಗೂಸು!
ಫೆಬ್ರವರಿ 7ರಿಂದಲೇ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಯಾವುದೇ ಕರೆ ಬಂದಿಲ್ಲ. ಕರೆ ಬಂದ ತಕ್ಷಣ ಅಗತ್ಯ ಸಹಾಯಕ್ಕೆ ತಯಾರಾಗಿದ್ದೇವೆ. ಟರ್ಕಿ ಭೂಕಂಪನ ವಿಚಾರ ಸಂಬಂಧ, ಯಾರಿಗಾದ್ರು ಸಹಾಯ ಬೇಕಿದ್ದಲ್ಲಿ ತಕ್ಷಣ 080-22340676 ಸಹಾಯವಾಣಿ ನಂಬರ್‌ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.