ಪಡಿಕ್ಕಲ್ ಕ್ಯಾಪ್ಟನ್.. ರಜತ್ ಗೂ ಚಾನ್ಸ್ – AUS ಸರಣಿಗೆ ಹಾರ್ದಿಕ್ ಕಂ ಬ್ಯಾಕ್
ಭಾರತ ಗೆಲ್ಲಿಸ್ತಾರಾ IPL ಸ್ಟಾರ್ಸ್?

ಆಸ್ಟ್ರೇಲಿಯಾ ಎ ವಿರುದ್ಧದ ತವರಿನ ಸರಣಿಗಾಗಿ ಭಾರತ ಎ ತಂಡಗಳನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಈ ಸರಣಿಯಲ್ಲಿ 2 ಮಲ್ಟಿ ಡೇ ಮ್ಯಾಚಸ್ ಇದ್ರೆ 3 ಏಕದಿನ ಪಂದ್ಯಗಳಿರುತ್ವೆ. ಪುದುಚೇರಿಯಲ್ಲಿ ನಡೆಯಲಿರೋ ಈ ಸರಣಿಗೆ 4 ದಿನಗಳ ಪಂದ್ಯಗಳಿಗೆ ದೇವದತ್ ಪಡಿಕ್ಕಲ್ ನಾಯಕನಾಗಿದ್ರೆ ರುತುರಾಜ್ ಗಾಯಕ್ವಾಡ್ ಏಕದಿನ ತಂಡವನ್ನು ಲೀಡ್ ಮಾಡ್ತಾರೆ. ಌಂಡ್ ಒನ್ ಮೋರ್ ಥಿಂಗ್ ಗಾಯದಿಂದ ಚೇತರಿಸಿಕೊಂಡ ಹಾರ್ದಿಕ್ ಪಾಂಡ್ಯ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : ಇಶಾನ್ ಕಿಶನ್ 350 ರನ್ಗಳ ಅಬ್ಬರ – ದುಲೀಪ್ ಟ್ರೋಫಿ ಫೈನಲ್ನಲ್ಲಿ ದಾಖಲೆ
ಪುದುಚೇರಿಯಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 26 ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡು Multi-Dayಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ಭಾರತ ಎ ತಂಡ ಆತಿಥ್ಯ ವಹಿಸಲಿದೆ. ಈ ಅನಧಿಕೃತ ಪಂದ್ಯಗಳಿಗಾಗಿ ಬಿಸಿಸಿಐ ಭಾರತ ಎ ತಂಡಗಳನ್ನ ಅನೌನ್ಸ್ ಮಾಡಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಹಾಗೂ ರುತುರಾಜ್ ಗಾಯಕ್ವಾಡ್ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾದಲ್ಲಿ ಅಬ್ಬರಿಸಿದ್ದ ಪಡಿಕ್ಕಲ್ ನಾಯಕ.. ಸುದರ್ಶನ್ ಉಪನಾಯಕ!
ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಡಿಕ್ಕಲ್, ದುಲೀಪ್ ಟ್ರೋಫಿಯಲ್ಲೂ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಅವರನ್ನ ಎ ತಂಡದ ನಾಯಕನನ್ನಾಗಿ ಮಾಡಲಾಗಿದೆ. ಹಾಗೇ ಇದೇ ತಂಡಕ್ಕೆ ಸಾಯಿ ಸುದರ್ಶನ್ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಅನಧಿಕೃತ ಟೆಸ್ಟ್ ತಂಡ!
ದೇವದತ್ತ್ ಪಡಿಕ್ಕಲ್, ಸಾಯಿ ಸುದರ್ಶನ್, ಅಮನ್ ಮೊಖಾಡೆ, ಆಯುಷ್ ಪಾಂಡೆ, ಯಶ್ ರಾಥೋಡ್, ಶೇಕ್ ರಶೀದ್, ಕುಮಾರ್ ಕುಶಾಗ್ರಾ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಅಂಶುಲ್ ಕಾಂಬೋಜ್, ಪ್ರಫುಲ್ ಹಿಂಗೆ, ಎನ್ ಜಗದೀಸನ್, ನಚಿಕೇತ್ ಭೂತೆ, ವಿಜಯ್ ಕುಮಾರ್ ವೈಶಾಕ್*
ಸೋ ಇದು ನಾಲ್ಕು ದಿನಗಳ ಸರಣಿಯ ಟೀಂ ಆಗಿದ್ರೆ ಅತ್ತ ಏಕದಿನ ಪಂದ್ಯಗಳಲ್ಲಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕರಾಗಿರುತ್ತಾರೆ. ದೇವದತ್ ಪಡಿಕ್ಕಲ್ ಏಕದಿನ ಸರಣಿಗೆ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಏಕದಿನ ತಂಡದಲ್ಲಿ ಜಾಯ್ನ್ ಮಾಡಿಸಿದ್ರೂ ಅವ್ರು ಆಡ್ತಾರಾ ಇಲ್ವಾ ಅನ್ನೋದು ಫಿಟ್ನೆಸ್ ಕ್ಲಿಯರೆನ್ಸ್ ಮೇಲೆ ನಿರ್ಧಾರವಾಗಲಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಕೂಡ ಈ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ.
ಭಾರತ ಎ ಏಕದಿನ ತಂಡ
ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ದೇವದತ್ತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಕುಮಾರ್ ಕುಶಾಗ್ರಾ, ನಿಶಾಂತ್ ಸಿಂಧು, ವಿಪ್ರಜ್ ನಿಗಮ್, ಅರ್ಶಿನ್ ಕುಲಕರ್ಣಿ, ಅರ್ಷದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ*, ಪ್ರಭಾಸಿಮ್ರಾನ್ ಸಿಂಗ್, ಗುರ್ಜನ್ಪೀತ್ ಸಿಂಗ್, ಯಶ್ ಠಾಕೂರ್
ಹೀಗೆ ಎರಡೂ ತಂಡಗಳಲ್ಲೂ ಐಪಿಎಲ್ನಲ್ಲಿ ಮಿಂಚಿದ್ದ ಪ್ಲೇಯರ್ಗಳಿಗೆ ಹೆಚ್ಚಿನ ಅವಕಾಶಗಳನ್ನ ನೀಡಿದ್ದಾರೆ. ಇದು ಟೀಂ ಇಂಡಿಯಾಗೆ ಅಫಿಶಿಯಲ್ ಮ್ಯಾಚ್ ಅಲ್ಲದೇ ಇದ್ರೂ ಕೂಡ ಆಟಗಾರರಿಗೆ ಮಾತ್ರ ಒಂದೊಳ್ಳೆ ವೇದಿಕೆಯಾಗಲಿದೆ. ಇಲ್ಲಿ ಮಿಂಚುವ ಪ್ಲೇಯರ್ಗಳು ಮುಂದಿನ ದಿನಗಳಲ್ಲಿ ಭಾರತದ ಪರ ಪಂದ್ಯಗಳನ್ನ ಆಡೋಕೆ ಅವಕಾಶಗಳೂ ಸಿಗಬಹುದು.

ನೋಡಿರಿ

