ಗಣೇಶ ಹಬ್ಬಕ್ಕೆ ಸಿಂಪಲ್ ಪಂಚಕಜ್ಜಾಯ – ಮನೆಯಲ್ಲೇ 10 ನಿಮಿಷದಲ್ಲಿ ರೆಡಿ!

ಗಣೇಶ ಹಬ್ಬಕ್ಕೆ ಸಿಂಪಲ್ ಪಂಚಕಜ್ಜಾಯ –  ಮನೆಯಲ್ಲೇ 10 ನಿಮಿಷದಲ್ಲಿ ರೆಡಿ!

ಗಣೇಶ ಹಬ್ಬ ಅಂದ್ರೆ ಗಣಪತಿಗೆ ನೈವೇದ್ಯ ಮಾಡೋದು ವಿಶೇಷ. ಅದರಲ್ಲೂ ಹೆಚ್ಚು ಸಮಯ ತೆಗೆದುಕೊಳ್ಳದೇ, ಮನೆಯಲ್ಲಿರುವ ವಸ್ತುಗಳಿಂದಲೇ ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಬೇಕು ಅಂದ್ರೆ ಅವಲಕ್ಕಿ ಪಂಚಕಜ್ಜಾಯ ಬೆಸ್ಟ್!

ಮೊದಲು ಬೇಕಾಗುವ ವಸ್ತುಗಳನ್ನು ನೋಡೋಣ.
ಒಂದು ಕಪ್ ದಪ್ಪ ಅವಲಕ್ಕಿ, ಅರ್ಧ ಕಪ್ ಒಣಕೊಬ್ಬರಿ ತುರಿ, ಅರ್ಧ ಕಪ್ ಬೆಲ್ಲ, ಎರಡು ಚಮಚ ಎಳ್ಳು, ಎರಡು ಚಮಚ ಹುರಿದ ಕಡಲೆಬೇಳೆ, ಸ್ವಲ್ಪ ಏಲಕ್ಕಿ ಪುಡಿ ಮತ್ತು ಒಂದು ಚಮಚ ತುಪ್ಪ ಬೇಕಾಗುತ್ತದೆ.

ಇನ್ನು ಮಾಡುವ ವಿಧಾನ ತುಂಬಾ ಸಿಂಪಲ್.

ಮೊದಲಿಗೆ ಬಾಣಲೆಗೆ ಅವಲಕ್ಕಿ ಹಾಕಿ, ಎಣ್ಣೆ ಅಥವಾ ತುಪ್ಪ ಹಾಕದೆ ಲಘುವಾಗಿ ಹುರಿದುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಹುರಿದ ಅವಲಕ್ಕಿ, ಒಣಕೊಬ್ಬರಿ, ಎಳ್ಳು ಮತ್ತು ಹುರಿದ ಕಡಲೆಬೇಳೆಯನ್ನು ಹಾಕಿ ಮಿಕ್ಸ್ ಮಾಡಿ.

ಇದಕ್ಕೆ ಸಣ್ಣದಾಗಿ ತುರಿದ ಬೆಲ್ಲವನ್ನು ಸೇರಿಸಿ. ನಂತರ ಏಲಕ್ಕಿ ಪುಡಿ ಹಾಗೂ ಒಂದು ಚಮಚ ತುಪ್ಪ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿ.

ಇಷ್ಟೇ! ರುಚಿಯಾದ ಗಣೇಶ ಹಬ್ಬದ ಪಂಚಕಜ್ಜಾಯ ರೆಡಿ.

ಗಣಪತಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಮನೆಯವರೆಲ್ಲರೂ ಪ್ರಸಾದವಾಗಿ ಸವಿಯಬಹುದು. ಕಡಿಮೆ ಸಮಯ, ಕಡಿಮೆ ಸಾಮಗ್ರಿ, ಆದರೆ ಹಬ್ಬದ ಸಂಭ್ರಮ ಮಾತ್ರ ಡಬಲ್!

 

Kishor KV

Leave a Reply

Your email address will not be published. Required fields are marked *