ಆಸಿಯಾರನ್ನ ಅಣಕಿಸಿದ ಸೌಂದರ್ಯ – ವಿಮಾನದಲ್ಲಿ ಶುರುವಾಯ್ತು ಹುಡುಗಿಯರ ಹಠ

ಆಸಿಯಾರನ್ನ ಅಣಕಿಸಿದ ಸೌಂದರ್ಯ – ವಿಮಾನದಲ್ಲಿ ಶುರುವಾಯ್ತು ಹುಡುಗಿಯರ ಹಠ

ಬಿಗ್​ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆ ಜೋರಾದರೆ, ಇತ್ತ ವಿಮಾನದಲ್ಲಿ ಹುಡುಗಿಯರ ಹಠ ನೋಡಿ ಸಹ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಟಾಸ್ಕ್ ವಿಚಾರವಾಗಿ ನಡೆದ ಜಗಳ ಅಣಕಿಸುವ ಮಟ್ಟಕ್ಕೂ ಹೋಗಿದೆ.

ಇದನ್ನೂ ಓದಿ:ಏಕವಚನದಲ್ಲಿ ಗಗನ್ ಮಾತಾಡಿದರೆ ಓಕೆ – ಬೇರೆಯವರು ಗೌರವ ಕೊಡದಿದ್ದರೆ ಸಿಟ್ಯಾಕೆ?

ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಇನ್ನು ಕೆಲವರು ವಿಮಾನದಲ್ಲೇ ಇದ್ದಾರೆ. ಟಾಸ್ಕ್‌ನಲ್ಲಿ ಗೆದ್ದು ದೊಡ್ಮನೆ ಪ್ರವೇಶ ಮಾಡಲು ಕಾಯುತ್ತಿದ್ದಾರೆ. ಇದೀಗ ಟಾಸ್ಕ್ ವಿಚಾರವಾಗಿ ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ಜಗಳ ಮಾಡಿದ್ದಾರೆ. ಎರಡೂ ತಂಡದ ಪೈಕಿ ತಮ್ಮ ತಂಡದ ಮೂವರನ್ನು ರಕ್ಷಿಸುವ ಮೊದಲ ತಂಡ ಈ ಟಾಸ್ಕ್ ಗೆಲ್ಲುತ್ತದೆ ಎಂದು ಬಿಗ್​ಬಾಸ್ ಅನೌನ್ಸ್ ಮಾಡುತ್ತದೆ. ಇವತ್ತಿನವರೆಗೆ ಯಾವ ಟಾಸ್ಕೂ ಆಡಿಲ್ಲ, ನಾನೇ ಆಡ್ತೀನಿ ಎಂದು ಆಸಿಯಾ ಹೇಳುತ್ತಾರೆ. ನಾನು ಬಿಡ್ಕೊಟ್ಟಿಲ್ವ ಎಂದು ಸೌಂದರ್ಯ ಶೆಟ್ಟಿ ಹೇಳುತ್ತಾರೆ. ವೋಟ್ ಹಾಕೋಣ ಎನ್ನುವ ಮಾತಿಗೆ ಆಸಿಯಾ ವೋಟ್ ಹಾಕೋಕೆ ನಾನು ಬಿಡಲ್ಲ ಎನ್ನುತ್ತಾರೆ. ನೀವು ಹಠ ಹಿಡಿಬೇಡಿ. ಡೋಂಟ್ ಟೆಲ್​ ಮಿ ದಿಸ್ ಎಂದು ಆಸಿಯಾ ಗಲಾಟೆ ಮಾಡುತ್ತಾರೆ. ನಮ್ಮನ್ನು ಈ ಫ್ಲೈಟ್ ಒಳಗೆ ಕಾರ್ನರ್ ಮಾಡ್ತಿದ್ದಾರೆ. ನಂಗೆ ಟಾಸ್ಕ್ ಕೊಡ್ತಿಲ್ಲ. ನಾನು ಸುಳ್ಳುಗಾತಿ. ನಂಗೆ ಟಾಸ್ಕ್ ಕೊಡಿ ಬಿಗ್​ಬಾಸ್ ಎಂದು ಸೌಂದರ್ಯ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಆದರೆ, ಸೌಂದರ್ಯ ಶೆಟ್ಟಿ ಕಣ್ಣೀರಿಟ್ಟಿದ್ದಲ್ಲ. ಆಸಿಯಾರನ್ನು ಇಮಿಟೇಟ್ ಮಾಡಿರುವುದು. ಈ ಮೂಲಕ ಸೌಂದರ್ಯ ತನ್ನ ಅಸಲಿ ಆಟ ಶುರುಮಾಡಿದ್ದಾರೆ.

ತಮಗೆ ಟಾಸ್ಕ್ ಕೊಡದೆ ಮೂಲೆಗುಂಪು ಮಾಡಿದ್ದನ್ನು ಆಸಿಯಾ ಪ್ರಶ್ನಿಸಿದ್ದನ್ನು ಅಣಕಿಸಿ ಸೌಂದರ್ಯ ಅಳುವಂತೆ ನಟಿಸಿದ್ದಾರೆ. ಸೌಂದರ್ಯಾ ಶೆಟ್ಟಿ ಮೊದಲೆರೆಡು ದಿನ ಸೈಲೆಂಟ್ ಆಗಿದ್ದರು. ಇದೀಗ ಸಹ ಸ್ಪರ್ಧಿ ಆಸಿಯಾ ಅವರನ್ನು ಅಣಕಿಸುವ ಮೂಲಕ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದ್ದಾರೆ.

Sulekha

Leave a Reply

Your email address will not be published. Required fields are marked *