ಇಶಾನ್ ಕಿಶನ್ 350 ರನ್‌ಗಳ ಅಬ್ಬರ – ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಾಖಲೆ

ಇಶಾನ್ ಕಿಶನ್ 350 ರನ್‌ಗಳ ಅಬ್ಬರ – ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಾಖಲೆ

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಬ್ಯಾಟ್ ಮತ್ತೊಮ್ಮೆ ಅಬ್ಬರಿಸಿದೆ. ಈಸ್ಟ್ ಝೋನ್ ತಂಡದ ನಾಯಕನಾಗಿರುವ ಇಶಾನ್, ಸೌತ್ ಝೋನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಬರೋಬ್ಬರಿ 350 ರನ್ ಕಲೆಹಾಕಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ ಭರ್ಜರಿ 270 ರನ್ ಸಿಡಿಸಿದರು. ಬರೋಬ್ಬರಿ 334 ಎಸೆತಗಳನ್ನು ಎದುರಿಸಿದ ಅವರು 30 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ ಬೃಹತ್ ಇನ್ನಿಂಗ್ಸ್ ಕಟ್ಟಿದರು. ಈ ಇನ್ನಿಂಗ್ಸ್‌ನಿಂದ ಈಸ್ಟ್ ಝೋನ್ 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲೂ ಇಶಾನ್ ತಮ್ಮ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು. 98 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ಮತ್ತೊಂದು ಅರ್ಧಶತಕ ದಾಖಲಿಸಿದರು. ಹೀಗಾಗಿ ಒಂದೇ ಫೈನಲ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ಸೇರಿ ಇಶಾನ್ ಅವರ ಒಟ್ಟು ಮೊತ್ತ 350 ರನ್‌ಗೆ ತಲುಪಿದೆ.

ಇದನ್ನೂ ಓದಿ: ಭಾರತಕ್ಕಿಲ್ಲ 5 STAR ಫೆಸಿಲಿಟಿ – ನಗೋಯಾದಲ್ಲೇ ಇರಬೇಕು ಪ್ಲೇಯರ್ಸ್

ಈ ಮೂಲಕ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅತಿ ಹೆಚ್ಚು ಒಟ್ಟು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಇಶಾನ್ ಹೆಸರಿಗೆ ಬಂದಿದೆ. ಜೊತೆಗೆ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‌ಕೀಪರ್ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ದಿನೇಶ್ ಕಾರ್ತಿಕ್ ಅವರ ಹೆಸರಲ್ಲಿತ್ತು.

ಇಶಾನ್ ಅವರ ಈ ಅದ್ಭುತ ಪ್ರದರ್ಶನ ಇದೀಗ ಮತ್ತೆ ಅವರ ಟೆಸ್ಟ್ ಕಮ್‌ಬ್ಯಾಕ್ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆಯ್ಕೆಗಾರರ ಗಮನ ಸೆಳೆಯುವಲ್ಲಿ 350 ರನ್‌ಗಳ ಈ ಸಾಧನೆ ಮಹತ್ವದ ಹೆಜ್ಜೆಯಾಗಿದೆ.

 

Kishor KV

Leave a Reply

Your email address will not be published. Required fields are marked *