ಭಾರತಕ್ಕೀಗ ಓಪನರ್ಸ್ ಕನ್ಫ್ಯೂಷನ್ – ಪ್ಲೇಯಿಂಗ್ 11 ಕ್ಲಾರಿಟಿ ಸಿಗುತ್ತಾ?
AFG ಸರಣಿಯ ಸವಾಲು ಗೆಲ್ತಾರಾ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ-20ಐ ಸರಣಿ ಶುರುವಾಗಿದೆ. ಮೊದಲ ಪಂದ್ಯವೂ ಮುಗಿದಿದೆ. ಭಾರತಕ್ಕೆ ಈ ಸರಣಿ ಗೆಲುವು ತುಂಬಾನೇ ಮುಖ್ಯವಾಗಲಿದೆ. ಯಾಕಂದ್ರೆ ಈ ಸರಣಿ ಮುಗಿಯೋ ಹೊತ್ತಿಗೆಲ್ಲ ಏಷ್ಯನ್ ಗೇಮ್ಸ್ ಕೂಡ ಸ್ಟಾರ್ಟ್ ಆಗ್ತಿದೆ. ಹೀಗಾಗಿ ಆಫ್ಘನ್ ವಿರುದ್ಧ ಸರಣಿ ಗೆಲ್ಲೋದ್ರಿಂದ ಭಾರತಕ್ಕೆ ಸಾಕಷ್ಟು ಲಾಭಗಳೂ ಇದೆ.
ಇದನ್ನೂ ಓದಿ : PAKನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ – ಹಣಕ್ಕಾಗಿ ಪಂದ್ಯಗಳನ್ನ ಸೋತ್ರಾ?
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ಜಪಾನ್‌ನ ಐಚಿ ನಾಗೋಯಾದಲ್ಲಿ ಟೂರ್ನಮೆಂಟ್ ನಡೆಯಲಿದ್ದು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 3ರವರೆಗೆ ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಭಾರತದ ಪಾಲಿಗೆ ಕೇವಲ ಮತ್ತೊಂದು ದ್ವಿಪಕ್ಷೀಯ ಸರಣಿಯಲ್ಲ.. ಏಷ್ಯನ್ ಗೇಮ್ಸ್ ಟೂರ್ನಮೆಂಟ್ ಪ್ರಿಪರೇಷನ್ನ ವೇದಿಕೆ ಕೂಡ. ಇಲ್ಲಿ ಬರುವಂತ ರಿಸಲ್ಟ್, ತಂಡದ ಪರ್ಫಾಮೆನ್ಸ್, ಕಾಂಬಿನೇಷನ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ಕ್ಲಾರಿಟಿ ಸಿಗುತ್ತೆ.
ಏಷ್ಯನ್ ಗೇಮ್ಸ್ ಗೆಲ್ಲಬೇಕಂದ್ರೆ ಭಾರತ ಸರಣಿ ಗೆಲ್ಲಬೇಕು!
ಟಿ-20 ವಿಶ್ವಕಪ್ ಚಾಂಪಿಯನ್ ಆಗಿದ್ದ ಭಾರತ ಇತ್ತೀಚೆಗೆ ಐರ್ಲೆಂಡ್ ವಿರುದ್ಧ 0-2 ಮತ್ತು ಇಂಗ್ಲೆಂಡ್ ವಿರುದ್ಧ 0-4 ಅಂತರದಿಂದ ಸರಣಿ ಸೋಲುಗಳನ್ನು ಕಂಡಿದೆ. ಜಿಂಬಾಬ್ವೆ ವಿರುದ್ಧದ 3-0 ಗೆಲುವು ಸಮಾಧಾನ ತಂದಿದ್ದರೂ, ಬಲಿಷ್ಠ ತಂಡಗಳ ಎದುರು ಕಳೆದುಕೊಂಡಿರುವ ಲಯವನ್ನು ಮರಳಿ ಪಡೆಯೋಕೆ ಹಾಗೇ ಟಿ-20ಐ ರಿದಮ್ನ ಕಂಡುಕೊಳ್ಳೋಕೆ ಈ ಸರಣಿ ತುಂಬಾನೇ ಮುಖ್ಯ. ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೂ, ಇತ್ತೀಚಿನ ಪ್ರಮುಖ ಸರಣಿಗಳಲ್ಲಿನ ಪ್ರದರ್ಶನವು ತಂಡದ ಸ್ಥಿರತೆಯ ಬಗ್ಗೆ ಕೆಲವು ಆತಂಕಗಳನ್ನು ಸೃಷ್ಟಿಸಿದೆ. ಹಾಗೇ ಇಂಗ್ಲೆಂಡ್ ತಂಡವು ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು, ಭಾರತ ಸ್ವಲ್ಪ ಎಡವಿದ್ರೂ ಇಂಗ್ಲೆಂಡ್ ಅದರ ಲಾಭ ಪಡೆದುಕೊಳ್ಳಲಿದೆ. ಹೀಗಾಗಿ ಆಫ್ಘನ್ ವಿರುದ್ಧದ ಸಿರೀಸ್ನಲ್ಲೂ ಭಾರತ ಆ ಗ್ರಿಪ್ನ ಸಾಧಿಸಲಬೇಕು.
ಭಾರತಕ್ಕೆ ಸಿಗುತ್ತೆ ಕ್ಲಾರಿಟಿ!
ಏಷ್ಯನ್ ಗೇಮ್ಸ್ ಗೂ ಮುನ್ನ ತಂಡದ ಪ್ಲೇಯಿಂಗ್ 11 ಬಗ್ಗೆ ಕ್ಲಾರಿಟಿ
ಅಭಿಷೇಕ್, ವೈಭವ್ & ಸಂಜು ನಡುವೆ ಯಾರು ಓಪನರ್ಸ್ ಆದ್ರೆ ಬೆಸ್ಟ್
ಗಾಯದಿಂದ ರಿಕವರ್ ಆಗಿರುವವರ ಫಾರ್ಮ್ ಚೆಕ್ ಮಾಡಲು ವೇದಿಕೆ
ಏಷ್ಯನ್ ಗೇಮ್ಸ್ ನಲ್ಲಿ ಪ್ರಮುಖ ಎದುರಾಳಿಯ ವಿರುದ್ಧವೇ ತಾಲೀಮು
ಸರಣಿಯಲ್ಲಿ ಅಫ್ಘಾನ್ ಆಟಗಾರರ ಪ್ಲಸ್ & ಮೈನಸ್ ನೋಡಿ ತಂತ್ರಗಾರಿಕೆ
ಆಫ್ಘನ್ ವಿರುದ್ಧ ಸರಣಿ ಗೆಲ್ಲೋದ್ರಿಂದ ಏಷ್ಯನ್ ಗೇಮ್ಸ್ ಪ್ರೆಶರ್ ತಗ್ಗುತ್ತದೆ
ಸರಣಿ ಭಾರತದಲ್ಲೇ ನಡೆಯುತ್ತಿರೋದ್ರಿಂದ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆ
ಒಟ್ಟಾರೆಯಾಗಿ ಹೇಳುವುದಾದರೆ ಮುಂಬರುವ ದೊಡ್ಡ ದೊಡ್ಡ ಸರಣಿಗಳಿಗೆ ಮತ್ತು ಐಸಿಸಿ ಟೂರ್ನಿಗಳಿಗೂ ಮುನ್ನ ತಂಡದ ಗೊಂದಲಗಳನ್ನ ನಿವಾರಣೆ ಮಾಡ್ಬೋದು. ಹಾಗೇ ಬಲಿಷ್ಠ ಟೀಂ ಕಾಂಬಿನೇಷನ್ ಮಾಡೋಕೆ ಅವಕಾಶ ನೀಡಲಿದೆ. ಹೀಗಾಗಿ ಆಫ್ಘನ್ ಸರಣಿಯಲ್ಲಿ ಭಾರತ ಎಷ್ಟು ಡಾಮಿನೇಟ್ ಮಾಡುತ್ತೋ ನೆಕ್ಸ್ಟ್ ಜರ್ನಿ ಕೂಡ ಅಷ್ಟೇ ಸೂಪರ್ ಆಗಿರಲಿದೆ.

ನೋಡಿರಿ

