RCB ಬ್ಯಾಟಿಂಗ್ ಬೆಸ್ಟ್.. ಬೌಲಿಂಗ್ – ಜಿತೇಶ್ ಗೆ ಬ್ಯಾಕಪ್ ಕೀಪರ್ ಯಾರು?
2027ರ ಗೇಟ್ ಪಾಸ್ ಲಿಸ್ಟ್ ಹೇಗಿದೆ?

ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನ ಗೆದ್ದಿರೋ ಆರ್ಸಿಬಿ ಈಗ ಹ್ಯಾಟ್ರಿಕ್ ಚಾಂಪಿಯನ್ಸ್ನ ಕ್ಯೂನಲ್ಲಿದೆ. ಇದುವರೆಗೆ ಯಾರಿಂದಲೂ ಸಾಧ್ಯವಾಗದ ಮಹಾಚರಿತ್ರೆಯನ್ನ ಬರೆಯೋ ಟಾರ್ಗೆಟ್ನಲ್ಲಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ಎಕ್ಸ್ಟ್ರಾರ್ಡಿನಡಿ ಪರ್ಫಾಮೆನ್ಸ್ ಬಂದಿದ್ರಿಂದ ನೆಕ್ಸ್ಟ್ ಸೀಸನ್ ಕೂಡ ಅದನ್ನೇ ಎಕ್ಸ್ಪೆಕ್ಟ್ ಮಾಡ್ತಾರೆ. ಬಟ್ ಅದಕ್ಕಿಂತ ಮುಂಚೆ ತಂಡದಲ್ಲಿ ಒಂದಷ್ಟು ಬದಲಾವಣೆಗಳೂ ಬೇಕಾಗುತ್ತೆ.
ಇದನ್ನೂ ಓದಿ : PAKನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ – ಹಣಕ್ಕಾಗಿ ಪಂದ್ಯಗಳನ್ನ ಸೋತ್ರಾ?
2027ರ ಐಪಿಎಲ್ಗೆ ಸಾಕಷ್ಟು ಟೈಂ ಇದ್ರೂ ಕೂಡ ಫ್ರಾಂಚೈಸಿಗಳಲ್ಲಿ ಆಲ್ರೆಡಿ ಪ್ರಿಪರೇಷನ್ಸ್ ಸ್ಟಾರ್ಟ್ ಆಗಿದೆ. ಒಂದಷ್ಟು ಟ್ರೇಡ್ಡೀಲ್ಗಳಾಗಿವೆ. ರಿಲೀಸ್ ಪ್ಲ್ಯಾನ್ಗಳಾಗಿವೆ. ಲಾಸ್ಟ್ ಸೀಸನ್ನಲ್ಲಿ ಇದ್ದ ವೀಕ್ನೆಸ್ಗಳನ್ನ ನೆಕ್ಸ್ಟ್ ಸೀಸನ್ಗೂ ಮೊದ್ಲೇ ಸ್ಟ್ರಾಂಗ್ ಮಾಡಿಕೊಳ್ತಿದ್ದಾರೆ. ಆರ್ಸಿಬಿ ಕೂಡ ಅದೇ ದಾರಿಯಲ್ಲೇ ಇದೆ. ಬಟ್ ಇಲ್ಲಿ ಮೆಗಾ ಆಕ್ಷನ್ ಇಲ್ಲದೇ ಇರೋದ್ರಿಂದ ಅಂಥಾ ದೊಡ್ಡ ಬದಲಾವಣೆ ಏನೂ ಆಗಲ್ಲ. ಬಟ್ 2026ರ ಐಪಿಎಲ್ಗೂ ಮುನ್ನ ಒಂದಷ್ಟು ಪ್ಲೇಯರ್ಸ್್ನ ಬಿಟ್ಟಿದ್ರಲ್ಲ ಹಂಗೇ ಈ ಸಲವೂ ಕೆಲವ್ರನ್ನ ಕೈಬಿಡಬೇಕಾಗುತ್ತೆ.
ಆರ್ ಸಿಬಿಯ ದೊಡ್ಡ ಶಕ್ತಿಯೇ ಬ್ಯಾಟಿಂಗ್!
ಆರ್ಸಿಬಿಯಲ್ಲಿ ಬ್ಯಾಟಿಂಗ್ ಕೋಚ್ ತುಂಬಾನೇ ಚೆನ್ನಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್, ಟಿಮ್ ಡೇವಿಡ್ ಹೀಗೆ ಎಲ್ರೂ ಕೂಡ ರೆಸ್ಪಾನ್ಸಿಬಿಲಿಟಿ ತಗೊಳ್ತಾರೆ. 2026ರ ಆರಂಭದಲ್ಲೇ RCBಯ ಟಾಪ್-6 ಬ್ಯಾಟಿಂಗ್ ರನ್ರೇಟ್ ಮತ್ತು ಸರಾಸರಿಯಲ್ಲಿ ಲೀಗ್ನ ಬೆಸ್ಟ್ ಆಗಿತ್ತು. ಸೋ ನೆಕ್ಸ್ಟ್ ಸೀಸನ್ಗೆ ಒಬ್ರು ಬ್ಯಾಟರ್ ಬೇಕು ಅಂದ್ರೂ ಕೂಡ ಅದು ಬೆಂಚ್ ಸ್ಟ್ರೆಂಥ್ ಹೆಚ್ಚಿಸುತ್ತೆ. ಬಟ್ ಬೌಲಿಂಗ್ ಅಂತಾ ಬಂದಾಗ ಬ್ಯಾಕಪ್ ಬೌಲರ್ಸ್ ಪಿಕ್ ಮಾಡ್ಬೇಕಾಗಿದೆ. ಪವರ್ ಪ್ಲೇ ವಿಕೆಟ್ ಬೇಕು.. ಮಧ್ಯಮ ಓವರ್ಗಳಲ್ಲಿ ರನ್ರೇಟ್ ಕಂಟ್ರೋಲ್ ಮಾಡಬೇಕು ಮತ್ತು ಡೆತ್ ಓವರ್ಗಳಲ್ಲಿ ಮ್ಯಾಚ್ ಫಿನಿಶರ್ ಬೇಕು. ಸದ್ಯಕ್ಕೆ ಭುವಿ ಮತ್ತು ಜೋಶ್ ಹೇಜಲ್ವುಡ್ ಮೇಲೆಯೇ ಡಿಪೆಂಡ್ ಆಗಿದ್ದಾರೆ. ಇದೇ ಕಾರಣಕ್ಕೆ 2026ರ ಮಿನಿ ಹರಾಜಿನಲ್ಲೇ ಜೇಕಬ್ ಡಫ್ಫಿಯನ್ನು ಹೇಜಲ್ವುಡ್ಗೆ ಬ್ಯಾಕಪ್ ಆಗಿ ತಂದಿತ್ತು.
ಆರ್ ಸಿಬಿಯ ಆಯ್ಕೆ ಏನು?
ಒಬ್ಬ ಕ್ವಾಲಿಟಿ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ನ ಅವಶ್ಯಕತೆ
19, 20ನೇ ಓವರ್ ನಲ್ಲಿ ರನ್ಸ್ ಕಂಟ್ರೋಲ್ ಮಾಡುವ ಬೌಲರ್
ಮೇನ್ ಬೌಲರ್ ಗಾಯವಾದ್ರೆ ಬ್ಯಾಕಪ್ ಆಗಿ ಇಂಡಿಯನ್ ಫಾಸ್ಟ್ ಬೌಲರ್
ಡೆತ್ ಬೌಲರ್, ಇಂಡಿಯನ್ ಪೇಸರ್ & ಕ್ವಾಲಿಟಿ ಸ್ಪಿನ್ನರ್ ಪ್ರಿಯಾರಿಟಿ
ಪ್ಲೇಯಿಂಗ್ 11 ಜೊತೆಗೆ ಬೆಂಚ್ ಸ್ಟ್ರೆಂಥ್ ಕೂಡ ಸೂಪರ್ ಸ್ಟ್ರಾಂಗ್
ಓಪನರ್, ಮಿಡಲ್ ಆರ್ಡರ್, ಬೌಲರ್ ಹೊರಬಿದ್ರೆ ಬೆಸ್ಟ್ ಬ್ಯಾಕಪ್
ಜಿತೇಶ್ ಶರ್ಮಾಗೆ ಒಬ್ಬ ಬೆಸ್ಟ್ ವಿಕೆಟ್ ಕೀಪರ್ ಬೆಂಚ್ ನಲ್ಲಿ ಬೇಕು
ಹೀಗೆ ಆರ್ಸಿಬಿಗೆ ತುಂಬಾ ದೊಡ್ಡ ದೊಡ್ಡ ವೀಕ್ನೆಸ್ ಅಂತಾ ಏನೂ ಇಲ್ಲದೇ ಇದ್ರೂ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಬೇಕಾಗುತ್ತೆ. ಌಂಡ್ ಮೇನ್ಲಿ ನಾವು 200 ರನ್ಸ್ ಹೊಡೆಯುತ್ತೇವೆ ಅನ್ನೋ ಬ್ಯಾಟರ್ಗಳಿಗಿಂತ 170, 180 ರನ್ಸ್ನ ಡಿಫೆಂಡ್ ಮಾಡಿಕೊಳ್ಳೋ ಬೌಲರ್ಗಳೇ ಮುಖ್ಯವಾಗ್ತಾರೆ. ಹೀಗಾಗಿ ಬೌಲಿಂಗ್ ಆಪ್ಶನ್ಸ್ ಬಗ್ಗೆ ಫ್ರಾಂಚೈಸಿ ಹೆಚ್ಚಿನ ಒತ್ತು ನೀಡಬಹುದು. ಹಾಗೇ ಲಾಸ್ಟ್ ಸೀಸನ್ನಲ್ಲಿ ಪ್ಲೇಯಿಂಗ್ 11ನಲ್ಲಿ ಅಷ್ಟೇನು ಸದ್ದು ಮಾಡದ ಜಿತೇಶ್ ಶರ್ಮಾ, ಸುಯಾಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್ಗೂ ಕೂಡ ರಿಪ್ಲೇಸ್ ಪ್ಲೇಯರ್ಗಳನ್ನ ಹುಡುಕಬಹುದು.

ನೋಡಿರಿ

