ಬಾಂಗ್ಲಾ ಬೆಂಡೆತ್ತಲು ಭಾರತ ಸಿದ್ಧ – ಸೆಮೀಸ್ ಗೆದ್ರೆ PAK ವಿರುದ್ಧ ಫೈನಲ್?
ಏಷ್ಯಾಕಪ್ ನಲ್ಲಿ ಮತ್ತೆ ಟ್ರೋಫಿ ಫೈಟ್?

2026ರ ಮಹಿಳಾ ಏಷ್ಯಾಕಪ್ ಟೂರ್ನಿ ರೋಚಕ ಘಟ್ಟದಲ್ಲಿದೆ. ಮೂರಕ್ಕೆ ಮೂರೂ ಪಂದ್ಯಗಳನ್ನ ಒನ್ ಸೈಡೆಡ್ ಆಗಿ ಗೆದ್ದು ಅಜೇಯವಾಗಿ ಸೆಮೀಸ್ಗೆ ಲಗ್ಗೆ ಇಟ್ಟಿರೋ ಭಾರತೀಯ ಮಹಿಳಾ ತಂಡ ಇವತ್ತು ಬಾಂಗ್ಲಾದೇಶದ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ.
ಇದನ್ನೂ ಓದಿ : PAKನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ – ಹಣಕ್ಕಾಗಿ ಪಂದ್ಯಗಳನ್ನ ಸೋತ್ರಾ?
ಗ್ರೂ ಎನಲ್ಲಿ ಹ್ಯಾಟ್ರಿಕ್ ವಿಕ್ಟರಿಯೊಂದಿಗೆ ಟೇಬಲ್ ಟಾಪರ್ ಆಗಿ ಸೆಮೀಸ್ಗೆ ನುಗ್ಗಿರೋ ಭಾರತ ಒಂದ್ಕಡೆ.. ಯುಎಇ ವಿರುದ್ಧ 34 ರನ್‌ಗಳ ಜಯ ಸಾಧಿಸಿ ಗ್ರೂಪ್ ‘ಬಿ’ ನಿಂದ ಎರಡನೇ ತಂಡವಾಗಿ ನಾಕೌಟ್ಗೆ ಸೆಲೆಕ್ಟ್ ಆಗಿರೋ ಬಾಂಗ್ಲಾದೇಶ ಇನ್ನೊಂದ್ಕಡೆ. ಇವತ್ತು ಈ ಎರಡೂ ಮಹಿಳಾ ತಂಡಗಳು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಫೈನಲ್ ಟಿಕೆಟ್ಗಾಗಿ ಫೈಟ್ ನಡೆಸಲಿದ್ದಾರೆ.
ಇವತ್ತು ಭಾರತ-ಬಾಂಗ್ಲಾ ಸಮರ.. ನಾಳೆ ಪಾಕ್-ಲಂಕಾ ಕದನ!
ಮಹಿಳಾ ಏಷ್ಯಾಕಪ್ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್ನಲ್ಲಿದ್ದು, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಸೆಮೀಸ್ಗೆ ಕಾಲಿಟ್ಟಿವೆ. ಈ ಎರಡೂ ಸೆಮಿಫೈನಲ್ ಪಂದ್ಯಗಳು ಯುಎಇಯ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇವತ್ತು ಭಾರತ ಹಾಗೇ ಬಾಂಗ್ಲಾ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದ್ದು ಇವತ್ತು ಗೆದ್ದವ್ರು ಸೆಪ್ಟೆಂಬರ್ 13 ಅಂದ್ರೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸೆಲೆಕ್ಟ್ ಆಗ್ತಾರೆ. ಌಂಡ್ ನಾಳೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ಇದ್ದು ಅಲ್ಲಿ ಗೆದ್ದವ್ರು ಫೈನಲ್ಗೆ ಬರ್ತಾರೆ. ಆದ್ರೆ ಈ ನಾಲ್ಕು ತಂಡಗಳ ಪೈಕಿ ಭಾರತವೇ ಈ ಸಲವೂ ಟ್ರೋಫಿ ಗೆಲ್ಲುವಂಥ ಡೇಂಜರಸ್ ತಂಡವಾಗಿ ಕಾಣ್ತಿದೆ. ಇತಿಹಾಸವೂ ಕೂಡ ಅದನ್ನೇ ಹೇಳ್ತಿದೆ.
9 ಆವೃತ್ತಿಗಳ ಪೈಕಿ 7 ಸಲ ಪ್ರಶಸ್ತಿ ಗೆದ್ದಿರುವ ಭಾರತ!
ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ಮತ್ತು ಬಲಿಷ್ಠ ತಂಡವಾಗಿದೆ. ಇದುವರೆಗೆ ನಡೆದಿರುವ 9 ಆವೃತ್ತಿಗಳಲ್ಲಿ ಭಾರತ ದಾಖಲೆಯ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2004 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಭಾರತ ತಂಡವು ಇದುವರೆಗೆ 7 ಬಾರಿ (2004, 2005-06, 2006, 2008, 2012, 2016, 2022) ಟ್ರೋಫಿ ಗೆದ್ದುಕೊಂಡಿದೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತದ ಮಿತಾಲಿ ರಾಜ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರೆ, ನೀತೂ ಡೇವಿಡ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಇನ್ನು ಬಾಂಗ್ಲಾದೇಶ ಮಹಿಳಾ ತಂಡ ಏಷ್ಯಾಕಪ್ನಲ್ಲಿ ಇದುವರೆಗೆ ಒಂದು ಸಲ ಮಾತ್ರವೇ ವಿನ್ ಆಗಿದೆ. ಹೀಗಾಗಿ ಈ ಸಲವೂ ಭಾರತವೇ ಗೆಲ್ಲುವಂಥ ಸ್ಟ್ರಾಂಗ್ ಟೀಂ ಆಗಿ ಕಾಣ್ತಿದೆ. ಪ್ರಸ್ತುತ ಸೀಸನ್ನಲ್ಲಿ ಭಾರತ ಟೂರ್ನಿಯಲ್ಲಿ ಇನ್ನೂ ಅಜೇಯವಾಗಿದ್ದು, ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಕಾಂಬಿನೇಷನ್‌ನೊಂದಿಗೆ ಸೆಮಿಫೈನಲ್‌ಗೆ ಬಂದಿದೆ. ಸ್ಮೃತಿ ಮಂಧಾನಾ ಈಗಾಗಲೇ ಟೂರ್ನಿಯಲ್ಲಿ ಭರ್ಜರಿ ಶತಕದೊಂದಿಗೆ ಗಮನ ಸೆಳೆದಿದ್ದಾರೆ. ಸೋ ಬಾಂಗ್ಲಾ ವಿರುದ್ಧವೂ ಭಾರತ ಮತ್ತೊಮ್ಮೆ ಗೆದ್ದು ಬೀಗೋ ಸಾಧ್ಯತೆಗಳಿವೆ.

ನೋಡಿರಿ

