8 ತಿಂಗಳ ಹಿಂದೆ ವಿದ್ಯಾರ್ಥಿನಿಯರು ನಾಪತ್ತೆ – ಪತ್ತೆಯಾದ ಯುವತಿ ಈಗ ಗರ್ಭಿಣಿ

ಬೆಂಗಳೂರು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಪತ್ತೆಯಾಗಿದ್ದಾರೆ. ಆದರೆ, ನಾಪತ್ತೆಯಾಗಿದ್ದ ಈ ಇಬ್ಬರು ವಿದ್ಯಾರ್ಥಿನಿಯರ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 8 ತಿಂಗಳ ಹಿಂದೆ ಪತ್ತೆಯಾದ ಹುಡುಗಿಯರಲ್ಲಿ ಒಬ್ಬಳು ಗರ್ಭಿಣಿಯಾಗಿದ್ದಾಳೆ.
ಇದನ್ನೂ ಓದಿ:ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ದುರಂತ – ಸಂಪ್ಗೆ ಬಿದ್ದು ಒಂದೂವರೆ ವರ್ಷದ ಮಗು ಸಾ*ವು
ಜನವರಿ 30ರಂದು ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಫಸ್ಟ್ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿ ತೇಜಸ್ವಿನಿ ಮನೆ ಬಿಟ್ಟು ಹೋಗಿದ್ದರು. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದರು. ನಾಪತ್ತೆಯಾಗಿ ಆಗಿ ತಿಂಗಳುಗಳು ಕಳೆದ್ರೂ ಪೊಲೀಸರಿಗೆ ಯುವತಿಯರ ಸುಳಿವು ಸಿಕ್ಕಿರಲಿಲ್ಲ. ಈ ವೇಳೆ ತನಿಷ್ಕಾ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹೈಕೋರ್ಟ್ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಟೀಮ್ ಈ ಇಬ್ಬರು ಯುವತಿಯರಿಗಾಗಿ ಹುಡುಕಾಟ ನಡೆಸಿತ್ತು..
ವಿದ್ಯಾರಣ್ಯಪುರ ಪೊಲೀಸರ ತನಿಖೆ ವೇಳೆ ಯುವತಿಯರು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದು ಪತ್ತೆಯಾಗಿತ್ತು. ಅಲ್ಲಿಗೆ ತೆರಳಿ ಮಗು ಜೊತೆಗೆ ಆಟವಾಡಿದ್ದ ಇಬ್ಬರೂ ಒಂದು ಸೆಲ್ಫಿ ಫೋಟೋ ತೆಗೆದುಕೊಂಡಿದ್ದರು ಅಷ್ಟೇ. ಬಳಿಕ ಯುವತಿಯರ ಸುಳಿವೇ ಸಿಕ್ಕಿರಲಿಲ್ಲ. ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಈ ಇಬ್ಬರು ವಿದ್ಯಾರ್ಥಿನಿಯರು ಸಿಕ್ಕಿಬಿದ್ದಿದ್ದಾರೆ. ಆದರೆ, ಸಿಕ್ಕಿಬಿದ್ದ ಯುವತಿಯರು 8 ತಿಂಗಳ ಕಥೆಯನ್ನ ಬಾಯ್ಬಿಟ್ಟಿದ್ದಾರೆ.
8 ತಿಂಗಳಲ್ಲಿ ಪ್ರೀತಿ, ಮದುವೆ, ಗರ್ಭಿಣಿ
ಮಲೈ ಮಹದೇಶ್ವರ ಬೆಟ್ಟದಲ್ಲಿ ಈ ಇಬ್ಬರು ಯುವತಿಯರಿಗೆ ಯುವಕನೊಬ್ಬನ ಪರಿಚಯವಾಯ್ತಂತೆ. ಮನೆಯಲ್ಲಿನ ಒತ್ತಡದಿಂದಾಗಿ ಮನೆ ಬಿಟ್ಟು ಹೋಗಿರುವುದಾಗಿಯೂ ಯುವತಿಯರು ಹೇಳಿಕೊಂಡಿದ್ದಾರೆ. ನಂತರ ಯುವಕನ ಬಳಿ ನಮಗೆ ಅಪ್ಪ-ಅಮ್ಮ ಇಲ್ಲ ಅಂತ ಸುಳ್ಳು ಹೇಳಿದ್ದರು ಎನ್ನಲಾಗ್ತಿದೆ. ನಾನು ಹಾಗೂ ನನ್ನ ತಂಗಿ ಇಬ್ಬರೇ ಇದ್ದು, ನಮಗೆ ಅಪ್ಪ-ಅಮ್ಮ , ಕುಟುಂಬ ಯಾರೂ ಇಲ್ಲ ಎಂದಿದ್ದಾರೆ. ಬಳಿಕ ಆ ಯುವಕನ ಜೊತೆಗೆ ಇಬ್ಬರೂ ಹೋಗಿದ್ದರು. ಇಬ್ಬರು ಯುವತಿಯರಲ್ಲಿ ತನಿಷ್ಕಾ ಆ ಯುವಕನನ್ನೇ ಮದುವೆಯಾಗಿದ್ದಾಳೆ. ಸಂಸಾರ ಮಾಡಿಕೊಂಡ ತನಿಷ್ಕಾ ಈಗ ಗರ್ಭಿಣಿಯಾಗಿದ್ದಾಳೆ. ಆಧಾರ್ ಕಾರ್ಡ್ ನೀಡಿ ಸಿಮ್ ಖರೀದಿ ಮಾಡಲು ತನಿಷ್ಕಾ ಮುಂದಾಗಿದ್ದಳು. ಈ ವೇಳೆ ಸಿಐಡಿಗೆ ಆಧಾರ್ ಕಾರ್ಡ್ ನಂಬರ್ ಬಳಕೆ ಆಗಿರೋ ಬಗ್ಗೆ ಸರ್ವಿಸ್ ಪ್ರೊವೈಡರ್ ನಿಂದ ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ತೆರಳಿದ್ದ ಸಿಐಡಿ, ಪರಿಶೀಲನೆ ನಡೆಸಿದ ವೇಳೆ ಇಬ್ಬರೂ ಪತ್ತೆಯಾಗಿದ್ದಾರೆ. ಇಬ್ಬರನ್ನು ಹೈಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ.

ನೋಡಿರಿ

