AFG ಚೋಕ್.. ಉರಿದುಬಿದ್ದ PAK – ಸರಣಿ ಪ್ರೋಮೋದಲ್ಲಿ ಕಾಶ್ಮೀರ ಕ್ಯಾತೆ
ಆಫ್ಘನ್ ವಿರುದ್ಧ ಭಾರತೀಯರು ಕೆಂಡ!

AFG ಚೋಕ್.. ಉರಿದುಬಿದ್ದ PAK – ಸರಣಿ ಪ್ರೋಮೋದಲ್ಲಿ ಕಾಶ್ಮೀರ ಕ್ಯಾತೆಆಫ್ಘನ್ ವಿರುದ್ಧ ಭಾರತೀಯರು ಕೆಂಡ!

ಭಾರತ ಮತ್ತು ಆಫ್ಘನಿಸ್ತಾನ ನಡುವೆ ಸೆಪ್ಟೆಂಬರ್ 13ರಿಂದ ಟಿ-20ಐ ಸರಣಿ ಶುರುವಾಗ್ತಿದೆ. ಏಷ್ಯನ್ ಗೇಮ್ಸ್​ಗೂ ಮುನ್ನ ನಡೀತಿರೋ ಈ ಸಿರೀಸ್ ಎರಡೂ ತಂಡಗಳಿಗೆ ತುಂಬಾನೇ ಮುಖ್ಯ. ಈ ಸರಣಿಯ ಪ್ರಚಾರಕ್ಕಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಒಂದು ವಿಡಿಯೋವನ್ನ ತನ್ನ ಅಫಿಶಿಯಲ್ ಪೇಜ್​ನಲ್ಲಿ ಅಪ್​ಲೋಡ್ ಮಾಡಿದೆ. ಆದ್ರೆ ಈ ವಿಡಿಯೋ ನೋಡಿ ಪಾಕಿಸ್ತಾನ ಉರಿದು ಬಿದ್ದಿದೆ. ಅರೆ ಭಾರತ-ಅಫ್ಘನ್ ಸರಣಿಯ ಪ್ರಚಾರದ ವಿಡಿಯೋ ನೋಡಿ ಪಾಕಿಸ್ತಾನ ಯಾಕೆ ಸಿಟ್ಟಾಗ್ಬೇಕು ಅಂದ್ರೆ ಅದಕ್ಕೆ ಕಾರಣ ಮ್ಯಾಪ್.. ಕಾಶ್ಮೀರದ ನಕ್ಷೆ.

ಇದನ್ನೂ ಓದಿ : ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ತಾನ ಆತಿಥೇಯ ದೇಶವಾಗಿದ್ದರೂ, ಪಂದ್ಯಗಳು ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಈ ಸರಣಿಯ ಪ್ರಚಾರದ ವಿಡಿಯೋದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬಳಸಿರುವಂಥ ಭಾರತದ ನಕ್ಷೆಯೇ ಈಗ ಪಾಕಿಸ್ತಾನ ಶೇಕ್ ಆಗುವಂತೆ ಮಾಡಿದೆ. ಸೆಪ್ಟೆಂಬರ್ 13 ರಿಂದ 17 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಈ ಸರಣಿಗಾಗಿ ರಿಲೀಸ್ ಮಾಡಿರೋ ಪ್ರೋಮೋದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳನ್ನು ಭಾರತದ ಗಡಿಯೊಳಗೆ ತೋರಿಸಲಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ವಿದೇಶಾಂಗ ಇಲಾಖೆಯ ಮೂಲಕ ಅಧಿಕೃತ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ.  ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ವಲಯದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ.

ಪ್ರಚಾರದ ವಿಡಿಯೋದಲ್ಲಿ ತಪ್ಪು ಮಾಡಿದ ಅಫ್ಘಾನಿಸ್ತಾನ!

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರೋ ಪ್ರಚಾರದ ವಿಡಿಯೋದಲ್ಲಿ ಇಡೀ ಕಾಶ್ಮೀರವನ್ನು ಭಾರತದ ಭಾಗ ಅಂತಾ ತೋರಿಸಲಾಗಿದೆ. ಇದು ಪಾಕಿಸ್ತಾನದ ಸಿಟ್ಟಿಗೆ ಕಾರಣವಾಗಿದೆ. ಹಾಗೇ ನಕ್ಷೆಯನ್ನು ನೋಡಿದ ತಕ್ಷಣವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಸ್ಲಾಮಾಬಾದ್‌ನಲ್ಲಿರುವ ತನ್ನ ವಿದೇಶಾಂಗ ಕಚೇರಿಯನ್ನು ಸಂಪರ್ಕಿಸಿ, ಅಫ್ಘಾನಿಸ್ತಾನದ ವಿರುದ್ಧ ರಾಜತಾಂತ್ರಿಕ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದೆ. ಹಾಗೇ ವಿದೇಶಾಂಗ ಇಲಾಖೆ ಜೊತೆಯೂ ಈ ಬಗ್ಗೆ ಚರ್ಚಿಸಿದೆ. ಯಾವಾಗ ವಿವಾದ ಭುಗಿಲೇಳೋದು ಗೊತ್ತಾಯ್ತೋ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮತ್ತೊಂದು ಎಡವಟ್ಟು ಮಾಡ್ಕೊಂಡಿದೆ.

ಭಾರತದ ನಕ್ಷೆ ಬದಲಿಸಿ ಮತ್ತೆ ಪೇಚಿಗೆ ಸಿಲುಕಿದ ಆಫ್ಘನ್!

ಪ್ರೋಮೋ ವಿಡಿಯೋ ವಿರುದ್ಧ ಪಾಕಿಸ್ತಾನ ತನ್ನ ಪ್ರತಿಭಟನೆ ದಾಖಲು ಮಾಡ್ತಿದ್ದಂತೆ ಅಫ್ಘನಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತೊಂದು ಎಡವಟ್ಟು ಮಾಡ್ಕೊಂಡಿದೆ. ತನ್ನ ವಿಡಿಯೋದ ಮುಂದಿನ ಫ್ರೇಮ್‌ಗಳಲ್ಲಿ ನಕ್ಷೆಯನ್ನು ಬದಲಾಯಿಸಿ ಅಪ್​ಲೋಡ್ ಮಾಡಿದೆ. ಅಂದ್ರೆ ವಿಡಿಯೋ ಝೂಮ್ ಆದಂತೆಲ್ಲಾ ಭಾರತದ ನಕ್ಷೆಯಿಂದಲೂ ಕಾಶ್ಮೀರ ಮರೆಯಾಗಿದೆ. ಇದೇ ಚೇಂಜಸ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ವಿರುದ್ಧ ಟೀಕೆಗಳನ್ನ ಮಾಡ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ, ಮತ್ತು ಯಾವುದೇ ತಪ್ಪು ತಿಳುವಳಿಕೆ ಅಥವಾ ತಪ್ಪು ನಿರೂಪಣೆಯನ್ನು ತಪ್ಪಿಸಲು ನಕ್ಷೆಯನ್ನು ಅದಕ್ಕೆ ಅನುಗುಣವಾಗಿ ನವೀಕರಿಸಬೇಕೆಂದು ನಾವು ಗೌರವದಿಂದ ಕೇಳುತ್ತೇವೆ ಎಂದು ಪೋಸ್ಟ್​ಗಳನ್ನ ಮಾಡಿದ್ದಾರೆ. ಇನ್ನೂ ಕೆಲವ್ರು ಪ್ರೋಮೋ ವಿಡಿಯೋವನ್ನೇ ಡಿಲೀಟ್ ಮಾಡಿ ಅಂತಾ ಕಮೆಂಟ್ಸ್ ಮಾಡಿದ್ದಾರೆ. ಒಟ್ನಲ್ಲಿ ಸರಣಿಯ ಪ್ರಚಾರದ ಪ್ರೋಮೋದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಾಲು ಸಾಲು ವಿವಾದ ಮಾಡ್ಕೊಂಡಿದೆ.

Shantha Kumari

Leave a Reply

Your email address will not be published. Required fields are marked *