PAKನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ – ಹಣಕ್ಕಾಗಿ ಪಂದ್ಯಗಳನ್ನ ಸೋತ್ರಾ?
ಅಡ್ಡದಾರಿಯಲ್ಲಿ ಬ್ಯಾನ್ ಆದವ್ರೆಷ್ಟು?

ಪಾಕಿಸ್ತಾನ ಕ್ರಿಕೆಟ್ನ ಅಧೋಗತಿಗೆ ಆಟಗಾರರು ಅಡ್ಡದಾರಿ ಹಿಡಿದಿರೋದೇ ಕಾರಣ ಅನ್ಸುತ್ತೆ. ಯಾಕಂದ್ರೆ ಈಗ ಮ್ಯಾಚ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಲಾರ್ಡ್ಸ್‌ನಲ್ಲಿ 194 ರನ್‌ಗಳ ಹೀನಾಯ ಸೋಲಿನ ಬೆನ್ನಲ್ಲೇ ಅರ್ಧಕ್ಕರ್ಧ ಆಟಗಾರರನ್ನ ಪಿಸಿಬಿ ಮನೆಗೆ ಕಳ್ಸಿತ್ತು. ಅದ್ರಲ್ಲಿ ಕೆಲವ್ರ ಮೊಬೈಲ್ ಫೋನ್‌ಗಳನ್ನು ಸೀಜ್ ಮಾಡಿ ವಿಚಾರಣೆ ನಡೆಸ್ತಿದ್ದಾರೆ. ಅದಕ್ಕೆ ಕಾರಣವೇ ಮ್ಯಾಚ್ ಫಿಕ್ಸಿಂಗ್ ಗಾಳಿ.
ಇದನ್ನೂ ಓದಿ : BCCI ಹತ್ತಿರಕ್ಕೂ ಬಾಳಲ್ಲ PCB – ಟೀಂ ಇಂಡಿಯಾ 40 ಪಟ್ಟು ಗ್ರೇಟ್
ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ಪಾಕಿಸ್ತಾನ ಕ್ರಿಕೆಟ್ನ ಬಿಟ್ಟೂ ಬಿಡದೆ ಕಾಡ್ತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡುವೆ ಪಾಕ್ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್ ಉಲ್ ಹಕ್ ಅವ್ರ ಮೊಬೈಲ್ಗಳನ್ನ ವಶಕ್ಕೆ ಪಡೆದಿರೋ ಪಿಸಿಬಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಪಿಸಿಬಿ ಮಾಧ್ಯಮ ಮುಖ್ಯಸ್ಥ ಆಮಿರ್ ಮಿರ್ ಅವರು ಶಿಸ್ತು ಮತ್ತು ನಡವಳಿಕೆಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಇದು ನೇರವಾಗಿ ಮ್ಯಾಚ್ ಫಿಕ್ಸಿಂಗ್‌ಗೇ ಸಂಬಂಧಿಸಿದ್ದೇ ಅನ್ನೋದನ್ನ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹೀಗಿದ್ರೂ ಪಾಕ್ ನ ಕೆಲ ಮಾಧ್ಯಮಗಳು ಫಿಕ್ಸಿಂಗ್ ಆರೋಪದಿಂದಲೇ ತನಿಖೆ ನಡೆಯುತ್ತಿದೆ ಎಂದು ರಿಪೋರ್ಟ್ ಮಾಡಿವೆ. ಪಾಕಿಸ್ತಾನ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ವಿಚಾರ ಈ ಮಟ್ಟಿಗೆ ಸದ್ದು ಮಾಡೋಕೆ ಕಾರಣವೂ ಇದೆ. ಯಾಕಂದ್ರೆ ಈ ಹಿಂದೆ ದೊಡ್ಡ ದೊಡ್ಡ ಆಟಗಾರರೇ ಈ ದಂಧೆಯಲ್ಲಿ ಸಿಕ್ಕಿಬಿದ್ದಿದ್ರು.
ಪಾಕ್ ಕ್ರಿಕೆಟ್ ಗೆ ಬೆನ್ನತ್ತಿದ ಬೇತಾಳ ಫಿಕ್ಸಿಂಗ್!
ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಆಟಗಾರರೇ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಹಗರಣಗಳಲ್ಲಿ ಸಿಕ್ಕಿಬಿದ್ದು, ಐಸಿಸಿ ಹಾಗೂ ಪಿಸಿಬಿಯಿಂದ ನಿಷೇಧಕ್ಕೊಳಗಾಗಿದ್ದಾರೆ. 2010ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಮೊಹಮ್ಮದ್ ಅಮೀರ್, ಮೊಹಮ್ಮದ್ ಆಸಿಫ್ ಮತ್ತು ಸಲ್ಮಾನ್ ಬಟ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಇದು ಕೇವಲ ಕ್ರಿಕೆಟ್ ನಿಷೇಧಕ್ಕೆ ಸೀಮಿತವಾಗಲಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದ ಕ್ರಿಮಿನಲ್ ಪ್ರಕರಣದಲ್ಲೂ ಮೂವರು ತಪ್ಪಿತಸ್ಥರೆಂದು ಘೋಷಿಸಿ ಜೈಲು ಶಿಕ್ಷೆಗೂ ಒಳಗಾಗಿದ್ರು. ನೆಕ್ಸ್ಟ್ 2017ರ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಶರ್ಜೀಲ್ ಖಾನ್ ಮತ್ತು ಖಾಲಿದ್ ಲತೀಫ್ ಸಿಕ್ಕಿ ಬಿದ್ದಿದ್ರು. PSL spot-fixing ಪ್ರಕರಣದಲ್ಲಿ ನಾಸಿರ್ ಜಮ್ಶೆಡ್ ಕೂಡ ಪ್ರಮುಖ ಹೆಸರು. ಅಷ್ಟೇ ಅಲ್ಲದೆ ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ನವಾಜ್ ಮತ್ತು ಶಹಜೈಬ್ ಹಸನ್ ಸೇರಿದಂತೆ ಇತರ ಆಟಗಾರರ ಮೇಲೂ ಇದೇ ಆರೋದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಹೀಗೆ ಪಾಕಿಸ್ತಾನ ಕ್ರಿಕೆಟ್ನಲ್ಲಿ ಕೆಲವ್ರು ಡೈರೆಕ್ಟ್ ಆಗಿ ಫಿಕ್ಸಿಂಗ್ನಲ್ಲಿ ಭಾಗಿಯಾಗಿ ಶಿಕ್ಷೆಗೊಳಗಾದ್ರೆ ಮತ್ತೊಂದಷ್ಟು ಆಟಗಾರರು ತಮ್ಮನ್ನ ಬುಕ್ಕಿಗಳು ಕಾಂಟ್ಯಾಕ್ಟ್ ಮಾಡಿದ್ರೂ ಪಿಸಿಬಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವ್ರ ವಿರುದ್ಧವೂ ಕ್ರಮ ಕೈಗೊಂಡ ಪ್ರಸಂಗಗಳಿವೆ. ಬುಕ್ಕಿಗಳಿಂದ ಡೀಲ್ಗೆ ಒಳಗಾಗುವ ಆಟಗಾರರು ಅವ್ರಿಂದ ಹಣದ ರೂಪದಲ್ಲಿಯೋ ಅಥವಾ ದುಬಾರಿ ಗಿಫ್ಟ್ ಗಳನ್ನ ಪಡೆದು ಅವ್ರ ಹೇಳಿದಂತೆ ಕೇಳ್ತಾರೆ. ಅಥವಾ ಅವ್ರು ಫೇವರ್ ಆಗುವಂತೆ ನಡ್ಕೊಳ್ತಾರೆ
ತಂಡಕ್ಕೆ ಮೋಸ ಮಾಡುವ ಫಿಕ್ಸಿಂಗ್!
ಬ್ಯಾಟಿಂಗ್, ಬೌಲಿಂಗ್, ಫೀಲ್ಟಿಂಗ್ ನಲ್ಲಿ ಬೇಕೆಂದೇ ಕಳಪೆ ಪ್ರದರ್ಶನ
ನೋ ಬಾಲ್ ಅಥವಾ ವೈಡ್ ಬಾಲ್ ಗಳನ್ನ ಹಾಕಿ ತಂಡಕ್ಕೆ ಸಂಕಷ್ಟ
ಪ್ಲೇಯಿಂಗ್ 11, ಇಂಜುರಿ, ಪಿಚ್ ಕಂಡೀಷನ್ ಬಗ್ಗೆ ಮೊದಲೇ ಮಾಹಿತಿ
ಪಂದ್ಯಕ್ಕೆ ತಮ್ಮ ತಂಡದ ರಹಸ್ಯ ತಂತ್ರಗಳನ್ನ ರಿವೀಲ್ ಮಾಡುವುದು
ತಂಡದ ಬೇರೆ ಆಟಗಾರರನ್ನೂ ಫಿಕ್ಸಿಂಗ್ ಗೆ ಒಳಗಾಗಲು ಅಪ್ರೋಚ್
ಹೀಗೆ ಟಿ-20ಐನಿಂದ ಹಿಡ್ದು ಟೆಸ್ಟ್ವರೆಗೂ ಮ್ಯಾಚ್ ಫಿಕ್ಸಿಂಗ್ ಕರಿನೆರಳು ಆವರಿಸಿದೆ. ಈ ಭೂತ ಕೇವಲ ಒಬ್ಬ ಆಟಗಾರನನ್ನಷ್ಟೇ ಅಲ್ಲದೆ ಇಡೀ ಕ್ರಿಕೆಟ್ ವ್ಯವಸ್ಥೆಯನ್ನೇ ಹಾಳುಮಾಡಬಲ್ಲದು. ದೇಶದ ಹೆಸರು, ಸ್ಪಾನ್ಸರ್ಶಿಪ್, ಫ್ಯಾನ್ಸ್ ಎಮೋಷನ್ಸ್ ಹೀಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತೆ. ಬಹುಷಃ ಇದಕ್ಕೇ ಇರಬೇಕು ಅನ್ಸುತ್ತೆ ಪಾಕಿಸ್ತಾನ ಕ್ರಿಕೆಟ್ ಈಗ ಅಧೋಗತಿಗೆ ತಲುಪಿದ್ದು.

ನೋಡಿರಿ

