1 ದಿನ.. 2 ದೇಶ.. 2 ಪಂದ್ಯ – ಭಾರತಕ್ಕೆ ಡಬಲ್ ಗೇಮ್ ಸಂಕಷ್ಟ
T-20I, ODIಗೆ ಟೀಂ ಹೇಗಿರುತ್ತೆ?

ಟೀಂ ಇಂಡಿಯಾ ಆಟಗಾರರು ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಬ್ಯುಸಿ ಇರ್ತಾರೆ. ವರ್ಷದ ಎಲ್ಲಾ ತಿಂಗಳಲ್ಲೂ ಒಂದಿಲ್ಲೊಂದು ಮಾದರಿಯಲ್ಲಿ ಆಡ್ತಾನೇ ಇರ್ತಾರೆ. ಎಷ್ಟೋ ಸಲ ಆಟಗಾರರಿಗೆ ರೆಸ್ಟ್ ಸಿಗ್ತಿಲ್ಲ, ಇದ್ರಿಂದಲೇ ಇಂಜುರಿ ಆಗ್ತಿದ್ದಾರೆ ಅನ್ನೋ ಆರೋಪಗಳೂ ಇವೆ. ಹೀಗಿರುವಾಗ ಒಂದೇ ದಿನ ಭಾರತದ ಮೆನ್ಸ್ ಟೀಂ ಎರಡೆರಡು ದೇಶಗಳಲ್ಲಿ ಪಂದ್ಯ ಆಡ್ಬೇಕು ಅಂದ್ರೆ ಪರಿಸ್ಥಿತಿ ಹೆಂಗಿರಲ್ಲ. ಭಾರತಕ್ಕೆ ಇಂಥಾದ್ದೊಂದು ಚಾಲೆಂಜಿಂಗ್ ಸಿಚುಯೇಷನ್ ಎದುರಾಗಿದ್ದು, ಎರಡೂ ಕೂಡ ಮೋಸ್ಟ್ ಇಂಪಾರ್ಟೆಂಟ್ ಪಂದ್ಯಗಳೇ.
ಇದನ್ನೂ ಓದಿ : ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!
2026ರ ಅಕ್ಟೋಬರ್ 3 ಟೀಂ ಇಂಡಿಯಾ ಪಾಲಿಗೆ ಒಂದು ಸ್ಪೆಷಲ್ ಡೇ. ಯಾಕಂದ್ರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಪಂದ್ಯಗಳಿಗೆ ಸಾಕ್ಷಿಯಾಗುತ್ತೆ. ಅಂದ್ರೆ ಭಾರತದ ಪರ ಎರಡು ಮೆನ್ಸ್ ಟೀಂ ಒಂದೇ ದಿನ ಎರಡು ಬೇರೆ ಬೇರೆ ದೇಶಗಳಲ್ಲಿ ಪಂದ್ಯಗಳನ್ನಾಡಲಿವೆ. ಮೊದಲನೇದಾಗಿ ಅಕ್ಟೋಬರ್ 3ರಂದು ಭಾರತದ ನ್ಯೂಚಂಡೀಗಡ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವಾಡಬೇಕಿದೆ. ಌಂಡ್ ಇದೇ ದಿನ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ಫೈನಲ್ ಅಥವಾ ಕಂಚಿನ ಪದಕದ ಪಂದ್ಯ ನಿಗದಿಯಾಗಿದೆ. ಭಾರತ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್ ತಲುಪಿದರೆ.. ಅಕ್ಟೋಬರ್ 3ರಂದು ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದೆ. ಸೆಮಿಫೈನಲ್‌ನಲ್ಲಿ ಸೋತರೆ ಕಂಚಿನ ಪದಕದ ಪಂದ್ಯ ಆಡಬೇಕಾಗುತ್ತದೆ. ಒಂದ್ಕಡೆ ಏಕದಿನ ಮಾದರಿ ಪಂದ್ಯ ಇನ್ನೊಂದ್ಕಡೆ ಟಿ-20ಐ ಮಾದರಿ ಪಂದ್ಯ. ಇದೇ ಈಗ ಬಿಸಿಸಿಐಗೆ ದೊಡ್ಡ ತಲೆಬಿಸಿ ತಂದಿಟ್ಟಿದೆ.
ಭಾರತದ ಡಬಲ್ ಆಕ್ಷನ್ ಗೆ ಸಾಲು ಸಾಲು ಸವಾಲು!
ಒಂದ್ಕಡೆ ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯ.. ಮತ್ತೊಂದು ಕಡೆ ಜಪಾನ್‌ನಲ್ಲಿ ಏಷ್ಯನ್ ಗೇಮ್ಸ್ ಪದಕದ ಪಂದ್ಯ. ಈ ಡಬಲ್ ಆಕ್ಷನ್‌ನಿಂದಾಗಿ ಬಿಸಿಸಿಐ ಮ್ಯಾನೇಜ್ಮೆಂಟ್ಗೆ ಕೆಲ ಗೊಂದಲಗಳೂ ಎದುರಾಗಬಹುದು. ಈಗಾಗಲೇ ಏಷ್ಯನ್ ಗೇಮ್ಸ್ಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷ್‌ದೀಪ್ ಸಿಂಗ್ ಮತ್ತು ವೈಭವ್ ಸೂರ್ಯವನ್ಶಿ ಅವರನ್ನು ಒಳಗೊಂಡ ತಂಡವನ್ನ ಅನೌನ್ಸ್ ಮಾಡಲಾಗಿದೆ. ಌಂಡ್ ಇದ್ರಲ್ಲಿ ಕೆಲವ್ರು ಭಾರತದ ಪರ ಏಕದಿನ ಪಂದ್ಯಗಳಲ್ಲೂ ಆಡ್ತಿದ್ದಾರೆ. ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಏಷ್ಯನ್ ಗೇಮ್ಸ್ಗೆ ಸೆಲೆಕ್ಟ್ ಆಗಿರೋರ ಪೈಕಿ 8 ಆಟಗಾರರಿದ್ರು. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ನಿತೀಶ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಕೂಡ ಇದ್ರು. ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಈಗ ಏಷ್ಯನ್ ಗೇಮ್ಸ್ಗೆ ಸೆಲೆಕ್ಟ್ ಆಗಿರೋರನ್ನ ಬಿಟ್ಟು ಉಳಿದ ಆಟಗಾರರ ಪೈಕಿ ಟೀಂ ಘೋಷಣೆ ಮಾಡ್ಬೇಕಿದೆ.
1 ದಿನ.. 2 ಪಂದ್ಯ.. ತಲೆಬಿಸಿ!
ಶುಭ್ ಮನ್ ಗಿಲ್ & ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಪ್ರತ್ಯೇಕ ತಂಡ
ಹಿರಿಯ ಆಟಗಾರರು ಏಕದಿನ, ಯುವಪಡೆ ಏಷ್ಯನ್ ಗೇಮ್ಸ್ ನಲ್ಲಿ ಭಾಗಿ
ಕೆಲ ಆಟಗಾರರು ಎರಡೂ ಮಾದರಿ ಆಡೋದ್ರಿಂದ ಬಿಸಿಸಿಐಗೆ ತಲೆಬಿಸಿ
ಯಾರನ್ನು ಏಕದಿನಕ್ಕೆ, ಯಾರನ್ನ ಏಷ್ಯನ್ ಗೇಮ್ಸ್ ಗೆ ಆಯ್ಕೆ ಮಾಡಬೇಕು?
ವೆಸ್ಟ್ ಇಂಡೀಸ್ ಗೆ ಗಂಭೀರ್ ಕೋಚ್, ಏಷ್ಯನ್ ಗೇಮ್ಸ್ ಗೆ ವಿವಿಎಸ್ ಲಕ್ಷ್ಮಣ್
ಹೀಗೆ ಬಿಸಿಸಿಐ ಮುಂದೆ ಆಟಗಾರರ ಆಯ್ಕೆ.. workload management.. ಪ್ರಯಾಣ.. ಎರಡು ತಂಡಗಳ ಸಮನ್ವಯ ಹೀಗೆ ಸಾಕಷ್ಟು ವಿಚಾರಗಳಲ್ಲಿ ಪ್ರಶ್ನೆಗಳಿವೆ. ಹಾಗಂತ ಭಾರತ ತಂಡ ಈ ರೀತಿಯ ಪರಿಸ್ಥಿತಿ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 1998ರ ಸೆಪ್ಟೆಂಬರ್ 12ರಂದು ಭಾರತದ ಒಂದು ತಂಡವು ಕೌಲಾಲಂಪುರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ್ದರೆ, ಮತ್ತೊಂದು ತಂಡವು ಪಾಕಿಸ್ತಾನದ ವಿರುದ್ಧ ಸಹಾರಾ ಕಪ್ ಆಡಲು ಟೊರೊಂಟೊಗೆ ಹೋಗಿತ್ತು. ಕೌಲಾಲಂಪುರದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಅಜಯ್ ಜಡೇಜಾ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಭಾರತ ತಂಡವು ಕೆನಡಾವನ್ನು 112 ರನ್‌ಗಳಿಂದ ಸೋಲಿಸಿತು. ಅದೇ ದಿನ ಟೊರೊಂಟೊದಲ್ಲಿ ನಡೆದ ಸಹಾರಾ ಫ್ರೆಂಡ್‌ಶಿಪ್ ಕಪ್‌ನಲ್ಲಿ ಮತ್ತೊಂದು ಭಾರತೀಯ ತಂಡ ಪಾಕಿಸ್ತಾನವನ್ನು ಎದುರಿಸಿತು. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ನವಜೋತ್ ಸಿಂಗ್ ಸಿಧು, ಜಾವಗಲ್ ಶ್ರೀನಾಥ್ ಮತ್ತು ಅಜಿತ್ ಅಗರ್ಕರ್ ಅವರನ್ನೊಳಗೊಂಡ ತಂಡವನ್ನು ಮೊಹಮ್ಮದ್ ಅಜರುದ್ದೀನ್ ಮುನ್ನಡೆಸಿದರು, ಗಂಗೂಲಿ 54 ರನ್ ಗಳಿಸಿ ಮೂರು ವಿಕೆಟ್‌ಗಳನ್ನು ಪಡೆದು ಆರು ವಿಕೆಟ್‌ಗಳ ಜಯ ಸಾಧಿಸಿದರು. ಹೀಗಾಗಿ ಈ ಸಲವೂ ಕೂಡ ಒಂದೇ ದಿನ ಭಾರತದ ಎರಡು ತಂಡಗಳು ಗುಡ್ ನ್ಯೂಸ್ ಕೊಡ್ತಾರೆ ಅನ್ನೋದು ನಿರೀಕ್ಷೆ.

ನೋಡಿರಿ

