BCCI ಹತ್ತಿರಕ್ಕೂ ಬಾಳಲ್ಲ PCB – ಟೀಂ ಇಂಡಿಯಾ 40 ಪಟ್ಟು ಗ್ರೇಟ್
ಹೇಗಿದೆ ಕ್ರಿಕೆಟ್ ಮಂಡಳಿಗಳ ಮೌಲ್ಯ?

ಬಲಿಷ್ಠ ಭಾರತದ ಜೊತೆ ತನ್ನನ್ನ ತಾನು ಕಂಪೇರ್ ಮಾಡಿಕೊಳ್ಳೋ ಪಾಕಿಸ್ತಾನ ಬಡಾಯಿ ಕೊಚ್ಚಿಕೊಳ್ತಾನೇ ಇರುತ್ತೆ. ಆದ್ರೆ ರಿಯಾಲಿಟಿ ಏನಂದ್ರೆ ಭಾರತ ಯಾವತ್ತೂ ಟಾಪ್ನಲ್ಲೇ ಇದೆ. ಕ್ರಿಕೆಟ್ ಅಂತಾ ಬಂದಾಗಂತೂ ಜಗತ್ತಿನ ಯಾವುದೇ ಬೋರ್ಡ್ಗೂ ಬಿಸಿಸಿಐ ಹತ್ತಿರಕ್ಕೆ ಬರೋಕೂ ಆಗಲ್ಲ.
ಇದನ್ನೂ ಓದಿ : ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!
ಕ್ರಿಕೆಟ್ ಅಂತಾ ಬಂದಾಗ ಬಿಸಿಸಿಐನೇ ಬಾಸ್.. ಬಿಸಿಸಿಐನೇ ದೊಡ್ಡಣ್ಣ.. ಬೇರೆಲ್ಲಾ ತಂಡಗಳು ಭಾರತದ ಅರ್ಧದಷ್ಟೂ ಆದಾಯ ಇಲ್ಲ. ಅದ್ರಲ್ಲೂ ಪಾಕಿಸ್ತಾನ ಇನ್ನೂ ದೂರದ ಮಾತು. ಬ್ಯುಸಿನೆಸ್ ಟುಡೇ ರಿವೀಲ್ ಮಾಡಿರೋ ರಿಪೋರ್ಟ್ ಪ್ರಕಾರ ಈ ವರ್ಷವೂ ಬಿಸಿಸಿಐನೇ ಮುಂದಿದೆ. ಭಾರತದ ಕ್ರಿಕೆಟ್ ಮಂಡಳಿ $2.2 ಬಿಲಿಯನ್ ಮೌಲ್ಯ ಹೊಂದಿದ್ರೆ ಪಾಕಿಸ್ತಾನ 55 ಮಿಲಿಯನ್ ಮೌಲ್ಯದ್ದಾಗಿದೆ. ಪಿಸಿಬಿಗೆ ಕಂಪೇರ್ ಮಾಡಿದ್ರಂತೂ ತುಂಬಾನೇ ಡಿಫ್ರೆನ್ಸಸ್ ಇದೆ.
ಪಿಸಿಬಿಗಿಂತ ಬಿಸಿಸಿಐ ಬರೋಬ್ಬರಿ 40 ಪಟ್ಟು ಶ್ರೀಮಂತ!
ಭಾರತದ ಪರ ಮೆನ್ಸ್, ವುಮೆನ್ಸ್ ಟೀಂ ಅಷ್ಟೇ ಅಲ್ಲದೇ ಜೂನಿಯರ್ ಕ್ರಿಕೆಟ್ ಹೀಗೆ ಆಟಗಾರರು ಎಲ್ಲಾ ಮಾದರಿಗಳಲ್ಲೂ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಫೈನಾನ್ಶಿಯಲ್ ವಿಚಾರದಲ್ಲಿ ಏರಿಕೆ ಆಗ್ತಾನೇ ಇರುತ್ತೆ. ಹಾಗೇ ವಿಶ್ವದ ಅತ್ಯಂತ ಜನಪ್ರಿಯ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲೂ ದುಡ್ಡಿನ ಹೊಳೆಯೇ ಹರಿದು ಬರುತ್ತೆ. ಐಪಿಎಲ್ನಲ್ಲಿ ಮಾಧ್ಯಮ ಹಕ್ಕುಗಳು, ಪ್ರಾಯೋಜಕತ್ವಗಳು ಮತ್ತು ವ್ಯೂವರ್ಶಿಪ್ನಲ್ಲೂ ಐಪಿಎಲ್ ಅಗ್ರಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಪಂದ್ಯಗಳಲ್ಲೂ ಬಿಗ್ ಡೀಲ್‌ಗಳನ್ನ ಮಾಡಿಕೊಳ್ಳಲಾಗುತ್ತೆ. ಹೀಗೆ ಭಾರತ ವರ್ಷದಿಂದ ವರ್ಷಕ್ಕೆ ರೈಸ್ ಆಗ್ತಿದ್ರೆ ಅತ್ತ ಪಾಕಿಸ್ತಾನ ತುಂಬಾನೇ ದೂರದಲ್ಲಿದೆ.
ಗಳಿಕೆಯಲ್ಲಿ ಭಾರತವೇ ಬಾಸ್!
ಸಂಖ್ಯೆ ಮಂಡಳಿ ಮೌಲ್ಯ(ರೂ.ಗಳಲ್ಲಿ)
1 ಬಿಸಿಸಿಐ ₹18,760 ಕೋಟಿ
2 ಕ್ರಿಕೆಟ್ ಆಸ್ಟ್ರೇಲಿಯಾ ₹674 ಕೋಟಿ
3 ಇಸಿಬಿ ₹503 ಕೋಟಿ
4 ಪಿಸಿಬಿ ₹469 ಕೋಟಿ
5 ಬಿಸಿಬಿ ₹435 ಕೋಟಿ
6 ಕ್ರಿಕೆಟ್ ದಕ್ಷಿಣ ಆಫ್ರಿಕಾ ₹401 ಕೋಟಿ
7 ಜಿಂಬಾಬ್ವೆ ಕ್ರಿಕೆಟ್ ₹324 ಕೋಟಿ
8 ಶ್ರೀಲಂಕಾ ಕ್ರಿಕೆಟ್ ₹171 ಕೋಟಿ
9 ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ₹128 ಕೋಟಿ
10 ನ್ಯೂಜಿಲೆಂಡ್ ಕ್ರಿಕೆಟ್ ₹77 ಕೋಟಿ
ಇಲ್ಲಿ ನೆಟ್ ವರ್ತ್ ನೋಡಿದ್ರೆ ಭಾರತದ ಹತ್ತಿರ ಇರ್ಲಿ ಸಾವಿರ ಕೋಟಿ ವಹಿವಾಟಿಗೂ ಯಾವುದೇ ತಂಡ ಹತ್ತಿರವೂ ಇಲ್ಲ. ಫಸ್ಟ್ ಪ್ಲೇಸ್ನಲ್ಲಿರೋ ಭಾರತ 18 ಕೋಟಿಗೂ ಹೆಚ್ಚು ನೆಟ್ ವರ್ತ್ ಹೊಂದಿದ್ರೆ ಸೆಕೆಂಡ್ ಪ್ಲೇಸ್ನಲ್ಲಿರೋ ಆಸ್ಟ್ರೇಲಿಯಾ 674 ಕೋಟಿಯಷ್ಟೇ ಇದೆ. ಹಾಗಾದ್ರೆ ಕ್ರಿಕೆಟ್ ಮಂಡಳಿಗಳ ಆದಾಯ ಮೂಲ ಏನು ಅನ್ನೋದನ್ನ ನೋಡಿದ್ರೆ ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವಗಳು, ಟಿಕೆಟ್ ಮಾರಾಟ ಮತ್ತು ಇಂಟರ್ ನ್ಯಾಷನಲ್ ಕ್ರಿಕೆಟ್ ಕಾಂಬಿನೇಷನ್ ಮೇಲೆ ಡಿಪೆಂಡ್ ಆಗಿದೆ. ಅಷ್ಟೇ ಅಲ್ಲದೆ ಫ್ರಾಂಚೈಸಿ ಲೀಗ್ಗಳು, ಟೆಲಿವಿಷನ್, ಡಿಜಿಟಲ್ ರೈಟ್ಸ್, ಜೆರ್ಸಿ ಪ್ರಾಯೋಜಕತ್ವಗಳು, ಕ್ರೀಡಾಂಗಣ ಜಾಹೀರಾತು, ಗೂಡ್ಸ್ ಌಂಡ್ ಹಾಸ್ಪಿಟಾಲಿಟಿಯಲ್ಲೂ ಹಣ ಗಳಿಸುತ್ತವೆ. ಈ ವಿಚಾರದಲ್ಲಿ ಭಾರತ ಎಲ್ರಿಗಿಂತಲೂ ತುಂಬಾನೇ ಮೇಲಿದೆ. ಇಷ್ಟೆಲ್ಲಾ ರಿಪೋರ್ಟ್ಸ್ ಕಣ್ಮುಂದೆ ಇದ್ರೂ ಪಾಕ್ ಮಾತ್ರ ಬಡಾಯಿ ಕೊಚ್ಚಿಕೊಳ್ಳೋದನ್ನ ಬಿಡಲ್ಲ.

ನೋಡಿರಿ

