ನಾನು ನನ್ನ ಮನೆಯಲ್ಲಿದ್ದೇನೆ ಎಂದ ಕನ್ನಡಿಗ- ಡೆಲ್ಲಿ ಬಿಟ್ಟು ಬೇರೆ ತಂಡಕ್ಕೆ ಹೋಗಲ್ಲ KL ರಾಹುಲ್

ಐಪಿಎಲ್ 2027ಕ್ಕೂ ಮುನ್ನ ಕೆಎಲ್ ರಾಹುಲ್ ಅವರ ಭವಿಷ್ಯದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೆ ಇದೀಗ ಬಹುತೇಕ ತೆರೆ ಬಿದ್ದಿದೆ. ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಬೇರೆ ಫ್ರಾಂಚೈಸಿ ಸೇರುತ್ತಾರೆ, ಅದರಲ್ಲೂ ಕೆಕೆಆರ್ ತಂಡಕ್ಕೆ ಹೋಗಬಹುದು ಎಂಬ ಚರ್ಚೆಗಳು ಕಳೆದ ಕೆಲವು ದಿನಗಳಿಂದ ಜೋರಾಗಿದ್ದವು. ಆದರೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಕಡೆಯಿಂದಲೇ ಈ ವದಂತಿಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!
ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಕೆ.ಎಲ್. ರಾಹುಲ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಕೆಎಲ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕ್ಲಚ್ ಪ್ಲೇಯರ್. ಅವರು ತಂಡಕ್ಕಿಂತ ತಮ್ಮನ್ನು ಎಂದಿಗೂ ಮುಂದೆ ಇಡುವುದಿಲ್ಲ. ನಮ್ಮಿಬ್ಬರಿಗೂ ಇನ್ನೂ ಅಪೂರ್ಣ ಕೆಲಸವಿದೆ. ಡೆಲ್ಲಿಯನ್ನು ಹೆಮ್ಮೆಪಡುವಂತೆ ಮಾಡಲು ಒಟ್ಟಾಗಿ ಶ್ರಮಿಸುತ್ತೇವೆ” ಎಂಬ ಸಂದೇಶವನ್ನು ನೀಡಿದ್ದಾರೆ.
ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೂಡ ರಾಹುಲ್ ಅವರ ವಿಡಿಯೋವನ್ನು ಹಂಚಿಕೊಂಡಿದೆ. ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ನಾನು ನನ್ನ ಮನೆಯಲ್ಲಿದ್ದೇನೆ” ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದು, ತಂಡದೊಂದಿಗೆ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಬಳಿಕ ಜಿಂದಾಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಹುಲ್, ಮುಂದಿನ ಸೀಸನ್‌ಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಸದ್ಯದ ಬೆಳವಣಿಗೆ ನೋಡಿದರೆ, ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲೇ ಮುಂದುವರಿಯುವ ಸೂಚನೆ ಸಿಕ್ಕಿದೆ. ಕೆಕೆಆರ್ ಸೇರಿದಂತೆ ಬೇರೆ ತಂಡಗಳಿಗೆ ರಾಹುಲ್ ಹೋಗುತ್ತಾರೆ ಎಂಬ ಚರ್ಚೆಗೆ ಇದೀಗ ಬ್ರೇಕ್ ಬಿದ್ದಿದೆ.

ನೋಡಿರಿ

