ಬಿಗ್‌ಬಾಸ್ ಶೋನಲ್ಲಿ ಕೀಳು ಮಟ್ಟದ ಮಾತು – ರಿಯಾಲಿಟಿ ಶೋನಲ್ಲಿ ಇಂಥಾ ಕ*ಚ*ಡ ಮಾತು ಬೇಕಾ?

ಬಿಗ್ ಬಾಸ್ ರಿಯಾಲಿಟಿ ಶೋನ ಮೊದಲ ಎಪಿಸೋಡ್‌ನಲ್ಲಿ ಸ್ಪರ್ಧಿಗಳ ಬಾಯಲ್ಲಿ ಕೀಳು ಮಟ್ಟದ ಮಾತು ಕೇಳಿ ಬಂದಿದೆ. ಇದೊಂದು ರಿಯಾಲಿಟಿ ಶೋ ಆಗಿದ್ದು, ಸ್ಪರ್ಧಿಗಳು ನಾಲಗೆಗೆ ಲಗಾಮು ಇಲ್ಲದಂತೆ ಮಾತಾಡುವುದು ವೀಕ್ಷಕರಿಗೂ ಮುಜುಗರವುಂಟು ಮಾಡಿದೆ.
ಇದನ್ನೂ ಓದಿ:TOXIC ₹235 ಕೋಟಿ OTT ಡೀಲ್? ಸೇಫ್‌ಜೋನ್‌ಗೆ ಹೋದ್ರಾ ಪ್ರೊಡ್ಯೂಸರ್?
ಮಾತಾಡಲೆಂದೇ ಬಿಗ್‌ಬಾಸ್ ಗೆ ಬಂದವರು ಅನ್ನೋ ರೀತಿ ವರ್ತಿಸುತ್ತಿದ್ದಾದರೆ ಕಿರಣ್ ಶಾಸ್ತ್ರಿ ಮತ್ತು ಮಹಾಕವಿ ಮಂಜ. ಆದರೆ, ನಾಲಗೆಗೆ ಲಗಾಮಿಲ್ಲ. ವೀಕ್ಷಕರಿಗೆ ಕಿರಿಕಿರಿಯಾಗಬಹುದು ಅನ್ನೋ ಕಾಳಜಿಯೂ ಇಲ್ಲ. ಅದು ಕೂಡಾ ಕೀಳುಮಟ್ಟದ ಮಾತು. ಅಸಹ್ಯಕರ ಸಂಭಾಷಣೆ. ಮೊದಲ ದಿನವೇ ಎಪಿಸೋಡ್ ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸ್ನಾನದ ವಿಚಾರದಲ್ಲಿ ಕಿರಣ್ ಶಾಸ್ತ್ರಿ ಹಾಗೂ ವೈಷ್ಣವಿ ವಿ.ಕೌಂಡಿನ್ಯ ಕಿತ್ತಾಡಿದ್ದಾರೆ. ಇಡೀ ಮನೆಯ ಮಂದಿಗೆ ಒಂದೂವರೆ ಗಂಟೆ ಟೈಮ್ ಕೊಟ್ಟಿದ್ದಾರೆ. ಆದರೆ, ಕಿರಣ್ ಶಾಸ್ತ್ರಿ) ಬಾತ್ ರೂಮ್ ಅಲ್ಲಿ ಜಾಸ್ತಿ ಟೈಮ್ ತೆಗೆದುಕೊಂಡಿದ್ದಾರೆ. ಇದರಿಂದ ವೈಷ್ಣವಿ ಗರಂ ಆಗಿದ್ದಾರೆ. ಲೇಟ್ ಆಗಿ ಬಂದಿದ್ದಿಯಾ, ಕ್ಷಮೆ ಕೇಳೋಕೆ ಆಗೋದಿಲ್ವೇ? ಅಂತಲೇ ಜಗಳ ಆಡಿದ್ದಾರೆ. ಹುಚ್ಚಿ ತರ ಆಡ್ಬೇಡ ಯಾಕ್ ಹುಚ್ಚಿ ತರ ಯಾಕೆ ಚೀರತಾ ಇದ್ದೀಯಾ? ಎಂದು ಕಿರಣ್ ಶಾಸ್ತ್ರ ಹೇಳ್ತಾರೆ. ಇದರಿಂದ ಮತ್ತಷ್ಟು ಸಿಟ್ಟಾಗುವ ವೈಷ್ಣವಿ ಜಗಳಕ್ಕೆ ನಿಲ್ತಾರೆ. ಇದರಿಂದ ಇಡೀ ವಿಮಾನದಲ್ಲಿ ಇವರ ಜಗಳವೇ ಕೇಳಿಸುತ್ತದೆ. ಇತರ ಸ್ಪರ್ಧಿಗಳು ಇದನ್ನ ನಿಂತು ನೋಡ್ತಾ ಇರ್ತಾರೆ.
ದೊಡ್ಮನೆಯಲ್ಲಿ ಕಿರಣ್ ಶಾಸ್ತ್ರಿ ಅಷ್ಟೆ ಅಲ್ಲ, ಮಹಾಕವಿ ಮಂಜನ ನಾಲಗೆಗೂ ಲಗಾಮಿಲ್ಲ. ಬೇಡ ಅಂದ್ರೂ ಮಧ್ಯೆ ಮಾತ್ ಅಡ್ತಾರೆ. ಇದರಿಂದ ಮನೆ ಮಂದಿಗೆ ಬೇಸರ ಆಗಿದೆ. ಕಿರಣ್ ಶಾಸ್ತ್ರಿ ಮತ್ತು ಮಂಜನ ನಡುವೆಯೂ ಕಿರಿಕ್ ಆಗಿದೆ. ಕಿರಣ್ ಶಾಸ್ತ್ರಿ ಮಂಜನಿಗೆ ಕಚಡ ಅಂತ ಬೈದಿದ್ದಾರೆ. ಹಂದಿ ಅಂತಲೂ ಹೇಳಿದ್ದಾರೆ.
ಇವರೆಲ್ಲಾ ಬಿಗ್‌ಬಾಸ್ ಗೆ ಹೋಗಿದ್ದೇ ಜಗಳ ಮಾಡಲು. ಜಾಸ್ತಿ ಮಾತಾಡಿದರೆ ಮಾತ್ರ ಬಿಗ್‌ಬಾಸ್ ಮನೆಯಲ್ಲಿ ಮಜಾ ಬರುತ್ತೆ ಅನ್ನೋ ಮನಸ್ಥಿತಿ ಎದ್ದು ಕಾಣುತ್ತಿದೆ. ಆದರೆ, ಬೈಗುಳಕ್ಕೂ ಒಂದು ಅರ್ಥ ಬೇಕು. ಮನಸಿಗೆ ಬಂದದ್ದು ನಾಲಗೆಯಲ್ಲಿ ಬಂದರೆ ನೋಡುವ ವೀಕ್ಷಕರಿಗೂ ಕಿರಿಕಿರಿಯೇ.

ನೋಡಿರಿ

