ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!

ಶಫಾಲಿ ವರ್ಮಾಗೆ ಸನ್ನೆ – PAK ಫಾತಿಮಾ ಸನಾಗೆ ICC ದಂಡ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾಕಪ್ ಪಂದ್ಯ ಮೈದಾನದಲ್ಲಿನ ಪೈಪೋಟಿಯ ಜೊತೆಗೆ, ಪಂದ್ಯದ ಬಳಿಕವೂ ಸುದ್ದಿಯಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕಿ ಫಾತಿಮಾ ಸನಾ, ಶಫಾಲಿ ವರ್ಮಾ ಅವರನ್ನು ಔಟ್ ಮಾಡಿದ ಬಳಿಕ ಮಾಡಿದ ಸನ್ನೆ ಇದೀಗ ಅವರಿಗೆ ದುಬಾರಿಯಾಗಿದೆ.

ಭಾರತದ ಚೇಸಿಂಗ್ ವೇಳೆ ಶಫಾಲಿ ವರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಫಾತಿಮಾ ಸನಾ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಶಫಾಲಿ ಔಟಾದ ಬಳಿಕ ಫಾತಿಮಾ ಪೆವಿಲಿಯನ್‌ನತ್ತ ಕೈ ಸನ್ನೆ ಮಾಡಿದ್ದರು. ಈ ವರ್ತನೆಯನ್ನು ICC ನಿಯಮ ಉಲ್ಲಂಘನೆ ಎಂದು ಪರಿಗಣಿಸಿದೆ.

ಇದನ್ನೂ ಓದಿ: ಇಶಾನ್ ಅಮೋಘ ದ್ವಿಶತಕ – ಲೈವ್‌ ಪಂದ್ಯದಲ್ಲೇ ವೈಭವ್‌ – ತಿಲಕ್‌ ಫೈಟ್!

ICCಯ ಆರ್ಟಿಕಲ್ 2.5 ಅಡಿಯಲ್ಲಿ, ಬ್ಯಾಟರ್ ಔಟಾದ ಬಳಿಕ ಅವರನ್ನು ಕೆರಳಿಸುವ ಅಥವಾ ಅವಹೇಳನಕಾರಿ ರೀತಿಯಲ್ಲಿ ಸನ್ನೆ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಫಾತಿಮಾ ಸನಾಗೆ ಅವರ ಪಂದ್ಯದ ಶುಲ್ಕದ 10 ಪ್ರತಿಶತ ದಂಡ ವಿಧಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಇದು ಕಳೆದ 24 ತಿಂಗಳಲ್ಲಿ ಫಾತಿಮಾ ಸನಾ ಮಾಡಿದ ಎರಡನೇ ಶಿಸ್ತು ಉಲ್ಲಂಘನೆ. ಇದಕ್ಕೂ ಮೊದಲು 2025ರ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ T20I ಪಂದ್ಯದಲ್ಲಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಬಂದಿತ್ತು. ಇದೀಗ ಅವರ ಒಟ್ಟು ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ ಎರಡಾಗಿದೆ.

ತಮ್ಮ ತಪ್ಪನ್ನು ಫಾತಿಮಾ ಸನಾ ಒಪ್ಪಿಕೊಂಡಿದ್ದು, ICC ವಿಧಿಸಿದ ಶಿಕ್ಷೆಯನ್ನೂ ಸ್ವೀಕರಿಸಿದ್ದಾರೆ. ಹೀಗಾಗಿ ಪ್ರತ್ಯೇಕ ವಿಚಾರಣೆ ನಡೆಸುವ ಅಗತ್ಯವೂ ಎದುರಾಗಲಿಲ್ಲ

Kishor KV

Leave a Reply

Your email address will not be published. Required fields are marked *