ಭಾರತ-ಪಾಕ್ ಸರಣಿಗೆ ಗ್ರೀನ್ ಸಿಗ್ನಲ್ – BCCI ಮುಂದೆ ICC ಬಿಗ್ ಆಫರ್
3 Or 4 ಟೀಂ ಸಿರೀಸ್ ಸಕ್ಸಸ್ ಆಗುತ್ತಾ?

ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳು ಅಂದ್ರೆನೇ ಹಾಗೇ.. ಆನ್ಫೀಲ್ಟ್ನಲ್ಲೂ ಫೈಯರ್.. ಆಫ್ ದಿ ಫೀಲ್ಡ್ನಲ್ಲೂ ವಾರ್.. ಮತ್ತೊಂದೆಡೆ ಐಸಿಸಿಗೂ ಬೇಜಾನ್ ಬ್ಯುಸಿನೆಸ್. ಹೀಗಿದ್ರೂ ಏಷ್ಯಾಕಪ್, ಏಷ್ಯನ್ ಗೇಮ್ಸ್ ಹಾಗೇ ಐಸಿಸಿ ಟೂರ್ನಮೆಂಟ್ಗಳಲ್ಲಿ ಮಾತ್ರವೇ ಮುಖಾಮುಖಿ ಆಗ್ತಿರೋದು. ಆದ್ರೆ ಇನ್ಮುಂದೆ ಸರಣಿಗಳಲ್ಲೂ ಉಭಯ ತಂಡಗಳು ಮುಖಾಮುಖಿಯಾಗೋ ಟೈಂ ಬರ್ತಿದೆ. ಇದಕ್ಕಾಗಿ ಐಸಿಸಿ ಬಿಗ್ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ : ಸೋತ್ರೂ PAK ನಾಯಕಿ ದೌಲತ್ತು – ಸೆಂಡ್ ಆಫ್ ಫಾತಿಮಾ ಟ್ರೋಲ್
ಇಂಡೋ-ಪಾಕ್ ವಾರ್ ಅಂತಾ ಬಂದಾಗ ಅಲ್ಲಿ ಟೀಂ ಇಂಡಿಯಾನೇ ಒನ್ ಸೈಡೆಡ್ ಆಗಿ ಮ್ಯಾಚ್ ವಿನ್ ಆಗುತ್ತೆ. ಮೆನ್ಸ್ ಌಂಡ್ ವುಮೆನ್ಸ್ ಟೀಮ್ನಲ್ಲೂ ಭಾರತವೇ ಬಾಸ್. ಲಾಸ್ಟ್ 10 ಇನ್ನಿಂಗ್ಸ್ಗಳಲ್ಲಿ ಭಾರತದ ಮೆನ್ಸ್ ಟೀಂ ಪಾಕ್ ವಿರುದ್ಧ ಒಂದೇ ಒಂದು ಪಂದ್ಯ ಸೋತಿಲ್ಲ. ಅತ್ತ ನಾಲ್ಕು ವರ್ಷದಿಂದ ಪಾಕಿಸ್ತಾನದ ಮಹಿಳಾ ತಂಡ ಭಾರತದ ವಿರುದ್ಧ ಗೆದ್ದಿಲ್ಲ. ಮೊನ್ನೆಯಷ್ಟೇ 55ಕ್ಕೆ ಆಲೌಟ್ ಆಗಿ ಹೀನಾಯವಾಗಿ ಸೋತಿದ್ದಾರೆ. ಎರಡೂ ಕಡೆ ಫ್ಯಾನ್ಸ್ಗೂ ಭಾರತನೇ ಗೆಲ್ಲುತ್ತೆ ಅನ್ನೋದು ಗೊತ್ತಿದ್ರೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಸೋ ಇದನ್ನೇ ಬಂಡವಾಳ ಮಾಡ್ಕೊಂಡಿರೋ ಐಸಿಸಿ ಹೊಸ ಬ್ಯುಸಿನೆಸ್ ಪ್ಲ್ಯಾನ್ ಮಾಡಿದೆ.
ಫ್ಯೂಚರ್ ಟೂರ್ ಪ್ರೋಗ್ರಾಮ್ ವೇಳೆ ಸರಣಿಗೆ ಗ್ರೀನ್ ಸಿಗ್ನಲ್?
ಭಾರತ, ಪಾಕಿಸ್ತಾನ ಸೇರಿದಂತೆ ಮಲ್ಟಿ ನೇಷನ್ ಸಿರೀಸ್ ಯೋಜನೆಗೆ ಐಸಿಸಿ ಪ್ಲ್ಯಾನ್ ಮಾಡ್ತಿದೆ. ಅಂದ್ರೆ ಭಾರತ-ಪಾಕಿಸ್ತಾನ ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಭಾರತ ಒಪ್ಪಲ್ಲ. ಸೋ ಮೂರು ಅಥವಾ ನಾಲ್ಕು ತಂಡಗಳನ್ನ ಸೇರಿಸಿ ಮಲ್ಟಿ ನೇಷನ್ಸ್ ಸಿರೀಸ್ ಆಯೋಜನೆ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿದೆ. ಸೆಪ್ಟೆಂಬರ್ 22 ಮತ್ತು 23 ರಂದು ಫ್ಯೂಚರ್ಸ್ ಟೂರ್ ಪ್ರೋಗ್ರಾಮ್ ಕುರಿತು ಸೆಮಿನಾರ್ ನಡೆಯಲಿದೆ. ಐಸಿಸಿಯ ಎಲ್ಲಾ ಪೂರ್ಣ ಸದಸ್ಯರು ಮತ್ತು ಎಂಟು ಅಸೋಸಿಯೇಟ್ ಮೆಂಬರ್ಸ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಚರ್ಚೆಯ ಸಮಯದಲ್ಲಿ, ಭಾರತ-ಪಾಕಿಸ್ತಾನದೊಂದಿಗೆ ತ್ರಿಕೋನ ಸರಣಿ ಅಥವಾ ನಾಲ್ಕು ತಂಡಗಳನ್ನೊಳಗೊಂಡ ಸರಣಿ ಆಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲು ಮುಂದಾಗಿದ್ದಾರೆ. ಭಾರತದ ವಿರುದ್ಧ ಆಡಿ ಅಸ್ತಿತ್ವ ಉಳಿಸಿಕೊಳ್ಳೋಕೆ ಪಾಕ್ ಅಂತೂ ತುದಿಗಾಲಲ್ಲಿ ಕಾಯ್ತಿದೆ. ಆದ್ರೆ ಇದಕ್ಕೆ ಬಿಸಿಸಿಐ ಒಪ್ಪುತ್ತಾ ಅನ್ನೋದೇ ಡೌಟ್ ಇದೆ. ಅದೂ ಅಲ್ದೇ ಐಸಿಸಿಯ ಅಧ್ಯಕ್ಷ ಜಯ್ ಶಾ ಆಗಿರೋದ್ರಿಂದ ಬಿಸಿಸಿಐ ಕೂಡ ಒಪ್ಪುವ ಸಾಧ್ಯತೆಯೂ ಇದೆ. ಒಂದ್ವೇಳೆ ಅನುಮತಿ ಸಿಕ್ರೆ ಪಂದ್ಯಾವಳಿಯನ್ನು ಭಾರತವೂ ಅಲ್ಲ ಪಾಕಿಸ್ತಾನವೂ ಅಲ್ಲ ತಟಸ್ಥ ಸ್ಥಳದಲ್ಲಿ ನಡೆಸಬಹುದು. ಯುಎಇ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನಂತಹ ಆಯ್ಕೆಗಳು ಪ್ರಸ್ತಾವನೆಯಲ್ಲಿವೆ. ಭಾರತ-ಪಾಕಿಸ್ತಾನ ಪಂದ್ಯಗಳು ಹೆಚ್ಚಿನ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡೋದಲ್ದೇ ಬ್ರಾಡ್ ಕಾಸ್ಟರ್ಸ್, ಆರ್ಗನೈಸರ್ಸ್ ಮತ್ತು ಐಸಿಸಿಗೂ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸಬಹುದು ಅನ್ನೋದು ಈ ಪ್ರಸ್ತಾವನೆಯ ಹಿಂದಿನ ಉದ್ದೇಶ.
ಬಹುರಾಷ್ಟ್ರೀಯ ಸರಣಿ ಪ್ರಸ್ತಾವನೆ ಒಪ್ಪುತ್ತಾ ಬಿಸಿಸಿಐ?
ಇನ್ನು ಈ ಹಿಂದೆಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ದೇಶಗಳು ಭಾರತದೊಂದಿಗೆ ತ್ರಿಕೋನ ಸರಣಿ ಆಡುವ ಬಗ್ಗೆ ಆಫರ್ ಇಟ್ಟಿದ್ರು. ಆದ್ರೆ ಯಾವ ದೇಶದೊಂದಿಗೆ ಕ್ರಿಕೆಟ್ ಆಡಬೇಕೆಂಬುದು ಆಯಾ ಕ್ರಿಕೆಟ್ ಮಂಡಳಿಗಳ ನಿರ್ಧಾರ ಎಂದು ಐಸಿಸಿ ಸ್ಪಷ್ಟಪಡಿಸಿತ್ತು. ಕೆಲವು ತಿಂಗಳ ಹಿಂದೆ, ಭಾರತೀಯ ಕ್ರೀಡಾ ಸಚಿವಾಲಯವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ ಎಂದು ಕ್ಲಾರಿಟಿ ನೀಡಿತ್ತು. ಸೋ ಅಲ್ಲಿಗೆ ದ್ವಿಪಕ್ಷೀಯ ಸರಣಿಯಂತೂ ನಡೆಯಲ್ಲ. ಈಗ ತ್ರಿಕೋನ ಅಥವಾ ಮಲ್ಟಿ ನೇಷನ್ಸ್ ಪ್ಲ್ಯಾನ್ಗ ಒಪ್ಪುತ್ತಾ ಅನ್ನೋದೇ ಇಲ್ಲಿರುವ ಪ್ರಶ್ನೆ. ಅದೂ ಅಲ್ದೇ ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. ಅಂದಿನಿಂದ, ಎರಡೂ ತಂಡಗಳು ಏಷ್ಯಾ ಕಪ್, ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗಿವೆ. ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಲು ನಿರಾಕರಿಸುತ್ತಲೇ ಬಂದಿದೆ. ಈಗ ತ್ರಿ-ರಾಷ್ಟ್ರ ಅಥವಾ ನಾಲ್ಕು ರಾಷ್ಟ್ರಗಳ ಪಂದ್ಯಾವಳಿಯ ಮೂಲಕ ಎರಡೂ ತಂಡಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೀತಿದೆ. ಹಾಗೇನಾದ್ರೂ ಇದಕ್ಕೆ ಭಾರತ ಒಪ್ಪಿದ್ದೇ ಆದ್ರೆ ಎಲ್ರಿಗೂ ಹಬ್ಬವೇ.. ಕ್ರಿಕೆಟ್ ಅಭಿಮಾನಿಗಳು ಹೈವೋಲ್ಟೇಜ್ ಮ್ಯಾಚ್ ಸಿಗುತ್ತೆ.. ಬ್ರಾಡ್ ಕಾಸ್ಟರ್ಗಳಿಗೆ ಕೈತುಂಬಾ ಕಾಸು.. ಬಿಸಿಸಿಐಗೂ ಹಣದ ಹೊಳೆ.. ಅದೆಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಕ್ರೇಜ್ ನೆಕ್ಸ್ಸ್ಟ್ ಲೆವೆಲ್ಗೆ ಹೋಗುತ್ತೆ.

ನೋಡಿರಿ

