ಶಿವನ ವಿಶೇಷ ಕೃಪೆಗೆ ಪಾತ್ರರಾಗಬೇಕಾ? – ಸೋಮವಾರದ ಪೂಜೆಯಲ್ಲಿ ಶಿವನಿಗೆ ಈ ವಸ್ತುಗಳನ್ನ ಅರ್ಪಿಸಿ

ಶಿವನ ವಿಶೇಷ ಕೃಪೆಗೆ ಪಾತ್ರರಾಗಬೇಕಾ? – ಸೋಮವಾರದ ಪೂಜೆಯಲ್ಲಿ ಶಿವನಿಗೆ ಈ ವಸ್ತುಗಳನ್ನ ಅರ್ಪಿಸಿ

ಜ್ಯೋತಿಷ್ಯ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೋಮವಾರದ ಪೂಜೆಯಲ್ಲಿ ಶಿವನಿಗೆ ಪ್ರಿಯವಾದ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ಆತನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಆ ವಸ್ತುಗಳು ಹಾಗೂ ಅವುಗಳಿಂದಾಗುವ ಪ್ರಯೋಜನಗಳ ಸಂಪೂರ್ಣ ಇಲ್ಲಿದೆ ನೋಡಿ.

ಬಿಲ್ವಪತ್ರೆ

ಪರಶಿವನಿಗೆ ಬಿಲ್ವಪತ್ರೆ ಎಂದರೆ ಅತ್ಯಂತ ಪ್ರೀತಿ. ಸೋಮವಾರದ ಪೂಜೆಯಲ್ಲಿ ಕಡ್ಡಾಯವಾಗಿ ಮೂರು ಎಲೆಗಳಿರುವ, ಯಾವುದೇ ಕಲೆ ಅಥವಾ ಹಾನಿಯಾಗದ ಶುದ್ಧವಾದ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಇದರಿಂದ ದಾರಿದ್ರ್ಯ ದೂರವಾಗಿ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
ಕಪ್ಪು ಎಳ್ಳು ಮತ್ತು ಅಕ್ಷತೆ
ಶುದ್ಧವಾದ ನೀರಿನಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ ಹಾಗೂ ನಿಂತುಹೋಗಿದ್ದ ಪ್ರಮುಖ ಕೆಲಸಗಳಿಗೆ ಮರುಜೀವ ಸಿಗುತ್ತದೆ. ಒಡೆದಿಲ್ಲದ ಸಂಪೂರ್ಣವಾದ ಅಕ್ಕಿ ಕಾಳುಗಳನ್ನು (ಅಕ್ಷತೆ) ಅರ್ಪಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗಿ ಸಂಪತ್ತು ವೃದ್ಧಿಯಾಗುತ್ತದೆ.
ಧಾತುರ ಮತ್ತು ಭಾಂಗ್

ಶಿವನ ಪೂಜೆಯಲ್ಲಿ ಧಾತುರ ಮತ್ತು ಭಾಂಗ್‌ಗೆ ವಿಶೇಷ ಸ್ಥಾನವಿದೆ. ಇವುಗಳನ್ನು ಮಹಾದೇವನಿಗೆ ಭಕ್ತಿಯಿಂದ ಅರ್ಪಿಸುವುದರಿಂದ ಜೀವನದಲ್ಲಿ ಎದುರಾಗುವ ಅಜ್ಞಾತ ಶತ್ರುಗಳ ಭಯ ನಿವಾರಣೆಯಾಗುತ್ತದೆ. ಅಲ್ಲದೆ, ಕೌಟುಂಬಿಕ ಜೀವನದಲ್ಲಿರುವ ಕಲಹಗಳು ದೂರವಾಗಿ, ದಾಂಪತ್ಯದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
ಹಸಿ ಹಾಲು ಹಾಗೂ ಗಂಗಾಜಲ

ಸೋಮವಾರದಂದು ಶಿವಲಿಂಗಕ್ಕೆ ಹಸಿ ಹಾಲಿನಿಂದ ಅಭಿಷೇಕ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಾನಸಿಕ ಶಾಂತಿ ಲಭಿಸುವುದರ ಜೊತೆಗೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೆಯೇ, ಜಟಾಧಾರಿಯಾದ ಶಿವನಿಗೆ ಗಂಗಾಜಲದ ಅಭಿಷೇಕ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ಕರ್ಮಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ.

Kishor KV

Leave a Reply

Your email address will not be published. Required fields are marked *