KING ಕೊಹ್ಲಿ 175 ಟ್ಯಾಟೂ.. RCB ಹೀರೋ ಆಟದ ಶಕ್ತಿ ಇದೇನಾ? – ಕೈ ತುಂಬಾ ಹಚ್ಚೆ.. ಸಿಕ್ರೇಟ್ ಏನು?

RCB ಕಿಂಗ್ ವಿರಾಟ್ ಕೊಹ್ಲಿ.. ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಅನ್ನೋದು ಕೊಹ್ಲಿ ಸ್ಪೆಷಾಲಿಟಿ. ಆಟದ ಜೊತೆಗೆ ವಿರಾಟ್ ಲೈಫ್ಸ್ಟೈಲ್ ವಿಚಾರ ಕೂಡ ಸದಾ ಸುದ್ದಿಯಲ್ಲಿತ್ತೆ. ಅವರ ಫಿಟ್ನೆಸ್, ಫ್ಯಾಷನ್ ಸೆನ್ಸ್ ಫ್ಯಾನ್ಸ್ಗೆ ಮನಸೋತಿದ್ದಾರೆ. ಇನ್ನು ಕೊಹ್ಲಿ ಅವರ ಟ್ಯಾಟೂ ಕ್ರೇಜ್ ನೆಕ್ಟ್ಸ್ ಲೆವೆಲ್ನಲ್ಲಿದೆ. IPL ಟೈಮ್ನಲ್ಲಿ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದ ಕೊಹ್ಲಿ ಇತ್ತೀಚೆಗೆ ಮತ್ತೊಂದು ಟ್ಯಾಟೂನ ತಮ್ಮ ಕೈಮೇಲೆ ಹಾಕಿಸಿಕೊಂಡಿದ್ದಾರೆ. ಅಂದ್ಹಾಗೆ ಕೊಹ್ಲಿ ಹಾಕಿಸಿಕೊಂಡಿರುವ ಪ್ರತಿಯೊಂದು ಟ್ಯಾಟೂ ಒಂದೊಂದು ಅರ್ಥವನ್ನ ಹೇಳ್ತವೆ.
ಇದನ್ನೂ ಓದಿ: ಈ ಹೊತ್ತಲ್ಲಿ ಮಸಾಲೆಯುಕ್ತ ಆಹಾರ ತಿನ್ನಲೇಬೇಡಿ! – ಒಂದು ತಪ್ಪಿನಿಂದ ಆರೋಗ್ಯಕ್ಕೆ ತೊಂದರೆ!
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಬೇರೆಲ್ಲಾ ಕ್ರಿಕೆಟರ್ಸ್ಗಿಂತ ಡಿಫರೆಂಟ್. ಕ್ರಿಕೆಟ್ನಲ್ಲಿ ರನ್ ಮೆಷಿನ್, ಕಿಂಗ್ ಅಂತೆಲ್ಲಾ ಕರೆಸಿಕೊಳ್ಳೋ ವಿರಾಟ್ ಟ್ಯಾಟೂ ಪ್ರಿಯ. ವಿರಾಟ್ ಪ್ರತಿಬಾರಿಯೂ ಹೊಸತೇ ಏನಾದರೊಂದನ್ನು ತಮ್ಮ ಟ್ಯೂಟೂ ಪುಂಜಕ್ಕೆ ಸೇರಿಸುತ್ತಲೇ ಇರುತ್ತಾರೆ. ಕೊಹ್ಲಿ ದೇಹದಲ್ಲಿ ಹತ್ತಕ್ಕೂ ಹೆಚ್ಚು ಟ್ಯಾಟೂಗಳಿವೆ. ಪ್ರತಿಯೊಂದು ಟ್ಯಾಟೂ ಕೂಡ ಒಂದೊಂದು ಅರ್ಥವನ್ನ ಸೂಚಿಸುತ್ತಿದೆ. ಇನ್ನು ಕೊಹ್ಲಿ IPL 2026ರ ಸೀಸನ್ ಆರಂಭಕ್ಕೂ ಅವರು ಟ್ಯಾಟೂ ಪರಿಣತರಾದ ಏಲಿಯನ್ಸ್ ಸ್ಟುಡಿಯೋ ಜೊತೆ ಒಪ್ಪಂದ ಮಾಡಿಕೊಂಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಆಗ ತಮ್ಮ ಎಡಗೈ ಮೇಲಿರುವ ಹಚ್ಚೆಗಳಿಗೆ ಹೊಸ ಲೇಯರ್ ಸೇರಿಸಿದ್ದರು. ಈ ಹೊಸ ವಿನ್ಯಾಸವು ಅವರ ಜೀವನದ ಪರಿವರ್ತನೆ ಮತ್ತು ವಿಕಾಸವನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿತ್ತು. ಇದೀಗ ಕೊಹ್ಲಿ ಮತ್ತೊಂದು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಇತ್ತೀಚೆಗೆ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹನಿಯೊಂದು ನೀರಿಗೆ ಬೀಳುವಾಗ ವೃತ್ತಾಕಾರದ ಅಲೆಗಳ ವಿನ್ಯಾಸವನ್ನು ವಿರಾಟ್ ತಮ್ಮ ಎಡಗೈ ತೋಳಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಅರ್ಥವೇನೆಂದು ಅಭಿಮಾನಿಗಳೇ ಕಂಡುಹಿಡಿದ್ದಾರೆ. ಇದು ಬದಲಾವಣೆಯ ಪರ್ವ. ಜೀವನದ ಗುರಿ ಮುಟ್ಟುವ ಪ್ರತೀಕವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಿದ್ದಾರೆ.
ಇನ್ನು ಕೊಹ್ಲಿ ಐ ಆಫ್ ಗಾಡ್ ಟ್ಯಾಟೂವನ್ನ ಹಾಕಿಸಿಕೊಂಡಿದ್ದಾರೆ.. ಇದನ್ನ ಕೊಹ್ಲಿ ದೇವರ ಕಣ್ಣು ಎಂದು ಅವರೇ ಸಂದರ್ಶನವೊಂದ್ರಲ್ಲಿ ಹೇಳಿದ್ದರು.. ಅಂದರೆ ಎಲ್ಲವನ್ನೂ ನೋಡುವ ಕಣ್ಣು ಎಂಬ ಅರ್ಥ ಈ ಹಚ್ಚೆಯಲ್ಲಿದೆ.
ಇನ್ನು ವಿರಾಟ್ ಭುಜದ ಮೇಲೆ ಓಂ ಟ್ಯಾಟೂ ಹಾಕಿಸಿದ್ದಾರೆ. ಇದು ಆಧ್ಯಾತ್ಮಿಕತೆಯ ಸಂಕೇತ ಎಂದು ಕೊಹ್ಲಿ ಹೇಳುತ್ತಾರೆ. ಈ ಹಚ್ಚೆ ಪ್ರಾಮಾಣಿಕತೆ, ನಂಬಿಕೆ ಮತ್ತು ಧೈರ್ಯದ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಪವಿತ್ರ ಪದವಾಗಿರುವ ‘ಓಂ’ ಎಂಬುದು ದೈವಿಕ ಶಕ್ತಿಯ ಅಂಶವಾಗಿದೆ.
ಕೊಹ್ಲಿ ಕ್ರಿಕೆಟ್ ಬಗೆಗಿನ ಕೆಲ ಟ್ಯಾಟೂಗಳನ್ನ ನೆನಪಿಗಾಗಿ ಹಾಕಿಸಿಕೊಂಡಿದ್ದಾರೆ. ವಿರಾಟ್ ಟೆಸ್ಟ್ ಕ್ರಿಕೆಟ್ನ ಜರ್ಸಿ ಸಂಖ್ಯೆ 269. ಈ ನಂಬರ್ನ ಕೂಡ ಹಚ್ಚೆ ಹಾಕಿಸಿದ್ದಾರೆ. ಈ ಸಂಖ್ಯೆಗಳು ಯಾವಾಗಲೂ ನನ್ನೊಂದಿಗೆ ಇರ್ಬೇಕು. ಏಕೆಂದರೆ ಮುಂದೆ ನನ್ನ ಹೆಸರು ಚಾರ್ಟ್ನಲ್ಲಿ ಈ ಸಂಖ್ಯೆಯ ಮುಂದೆ ಇರುತ್ತದೆ. ಅವು ಯಾವಾಗಲೂ ವಿಶೇಷ ಸಂಖ್ಯೆಗಳು. ಹೀಗಾಗಿ ನಾನು ಯಾವಾಗಲೂ ಅವುಗಳನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಕೊಹ್ಲಿ ಟ್ಯಾಟೂ ಕುರಿತಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಕೊಹ್ಲಿ ಇನ್ನೊಂದು ಕ್ಯಾಪ್ ಸಂಖ್ಯೆ 175 ಅನ್ನು ಟ್ಯಾಟು ಹಾಕಿಸಿದ್ದಾರೆ. ವಿರಾಟ್ ಶ್ರೀಲಂಕಾ ವಿರುದ್ಧ 2018 ರಲ್ಲಿ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದ್ರು.. ಅವರು ಆ ದಿನದಲ್ಲಿ ಆಡಿದ 175 ನೇ ಭಾರತೀಯ ಆಟಗಾರರಾಗಿದ್ದರು, ಅದಕ್ಕಾಗಿಯೇ ಈ ಸಂಖ್ಯೆ ಟ್ಯಾಟೂ ಹಾಕಿಸಿದ್ದಾರೆ.
ಕೊಹ್ಲಿ ದೇಹದಲ್ಲಿರುವ ಇನ್ನೊಂದು ಟ್ಯಾಟೂ, ಜಪಾನೀಸ್ ಸಮುರಾಯ್.. ಸಮುರಾಯ್ಗಳು ಆಧುನಿಕ ಪೂರ್ವ ಜಪಾನ್ ಯೋಧರು. ನಿಷ್ಠೆ ಸ್ವಯಂ ಶಿಸ್ತು ಮತ್ತು ಗೌರವ, ನೈತಿಕ ನಡವಳಿಕೆಯ ಆಧಾರದ ಮೇಲೆ ಜೀವನ ನಡೆಸುತ್ತಾರೆ. ಇದರಲ್ಲಿರುವ ಕತ್ತಿಯಿಂದ ತಾನು ಶಕ್ತಿ ಮತ್ತು ಸ್ವಯಂ ಶಿಸ್ತು ಪಡೆಯುತ್ತೇನೆ ಎಂದು ಕೊಹ್ಲಿ ನಂಬಿದ್ದಾರೆ.
ಇನ್ನು ಕೊಹ್ಲಿ ಅಪ್ಪಟ ಫ್ಯಾಮಿಲಿಮೆನ್. ತಮ್ಮ ಕುಟುಂಬಕ್ಕಾಗಿ ತುಂಬಾ ಇಂಪಾರ್ಟೆನ್ಸ್ ಕೊಡ್ತಾರೆ. ಆದಷ್ಟು ಫ್ಯಾಮಿಲಿ ಜೊತೆ ಸಮಯ ಕಳೆಯಲು ಇಷ್ಟ ಪಡ್ತಾರೆ. ವಿರಾಟ್ ತಮ್ಮ ತಂದೆ ತಾಯಿಯನ್ನ ದೇವರ ರೀತಿ ಕಾಣ್ತಾರೆ. ತಮ್ಮ ಜೀವನದುದ್ದಕ್ಕೂ ಪೋಷಕರ ಬೆಂಬಲ ಪಡೆದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತಂದೆ, ತಾಯಿಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಎಡಗೈಯಲ್ಲಿ ದೇವನಾಗರಿ ಲಿಪಿಯಲ್ಲಿ ತಾಯಿಯ ಹೆಸರನ್ನು ವಿರಾಟ್ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಂದೆಯ ಹೆಸರಿನಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪ್ರೇಮ್ ಎಂದು ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೊಹ್ಲಿ ಕ್ರಿಕೆಟ್ ಬದುಕು ಆರಂಭಿಸುವ ಹಂತದಲ್ಲಿ ತಂದೆಯನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ತಮ್ಮ ಪೋಷಕರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾಗಿ ವಿರಾಟ್ ಈ ಹಿಂದೆ ಬಹಿರಂಗಪಡಿಸಿದ್ದಾರೆ. ಅವರ ಹೆಸರನ್ನು ತನ್ನೊಂದಿಗೆ ಶಾಶ್ವತವಾಗಿ ಕೊಂಡೊಯ್ಯಲು ಬಯಸುತ್ತೇನೆ ಎಂದು ಅವರು ಹೇಳಿದ್ದರು.
ವಿರಾಟ್ ತಮ್ಮ ಎಡಗೈಯಲ್ಲಿ ಶಿವನ ಹಚ್ಚಿ ಹಾಕಿಸಿಕೊಂಡಿದ್ದಾರೆ. ಕೊಹ್ಲಿ ಶಿವನ ಆರಾಧಕ. ಮಾನಸ ಸರೋವರದ ಬಳಿ ಇರುವ ಕೈಲಾಸ ಪರ್ವತದ ಮೇಲೆ ಶಿವ ಧ್ಯಾನ ಮಾಡುತ್ತಿರುವ ಅರ್ಥದಲ್ಲಿ ಈ ಟ್ಯಾಟೂ ಹಾಕಿಸಿದ್ದಾರೆ. ಇಷ್ಟೇ ಅಲ್ಲದೆ ಕೊಹ್ಲಿ ತಮ್ಮ ರಾಶಿಚಕ್ರ ಚಿಹ್ನೆಯನ್ನು ಸಹ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ.
ಅಂದ್ಹಾಗೆ ವಿರಾಟ್ ಕೊಹ್ಲಿ, ಟ್ಯಾಟೂಗಳನ್ನು ಕಸ್ಟಮೈಸ್ ಮಾಡಿಸುತ್ತಾರೆ. ಅವರ ಆಯ್ಕೆಯಂತೆ ಟ್ಯಾಟೂ ವಿನ್ಯಾಸ ಮಾಡಲಾಗಿದೆ. ಈ ಹಿಂದೆ ವಿರಾಟ್ ಮುಂಬೈ ಸ್ಟುಡಿಯೋದಲ್ಲಿ ಹಾಗೇ ಬೆಂಗಳೂರಿನ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಈಗ ಏಲಿಯನ್ಸ್ ಸ್ಟುಡಿಯೋ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಹೆಚ್ಚು ಸಮಯ ಸ್ಪೆಂಡ್ ಮಾಡ್ತಾರೆ ಅಂತಾ ಹೇಳಿದ್ದಾರೆ.

ನೋಡಿರಿ

