10 ರನ್.. 4 ವಿಕೆಟ್.. ಭುವಿ ಬೆಂಕಿ – BCCI ಮೊಂಡಾಟ ಬಟಾಬಯಲು
RCB ಕ್ಯಾಂಪ್ ಗೆ ಮಿಯಾ ಸಿರಾಜ್?

10 ರನ್.. 4 ವಿಕೆಟ್.. ಭುವಿ ಬೆಂಕಿ – BCCI ಮೊಂಡಾಟ ಬಟಾಬಯಲುRCB ಕ್ಯಾಂಪ್ ಗೆ ಮಿಯಾ ಸಿರಾಜ್?

ಕ್ರಿಕೆಟ್ ಜಗತ್ತಿನ ಲೆಜೆಂಡರ್ಸ್ ಬೆನ್ನಿಗೆ ನಿಂತಿದ್ದಾರೆ.. ಅಭಿಮಾನಿಗಳೂ ಅದೇ ಆಸೆಯಲ್ಲಿದ್ದಾರೆ. ಆದ್ರೆ ಭುವನೇಶ್ವರ್ ಕುಮಾರ್ ಗೆ ಮಾತ್ರ ಟೀಂ ಇಂಡಿಯಾ ಬಾಗಿಲು ಮತ್ತೆ ಓಪನ್ ಆಗ್ತಿಲ್ಲ. ಪ್ರತೀ ಸರಣಿಗಳಿಗೆ ಟೀಂ ಅನೌನ್ಸ್ ಆದಾಗ್ಲೂ ಮತ್ತದೇ ನಿರಾಸೆ. ಮತ್ತದೇ ಬೇಸರ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಭುವಿ ಮೈದಾನದಲ್ಲಿ ಅಬ್ಬರಿಸ್ತಾನೇ ಇದ್ದಾರೆ. ಒಂದರ ಹಿಂದೆ ಒಂದರಂತೆ ಡೊಮೆಸ್ಟಿಕ್​ನಲ್ಲಿ ಧೂಳೆಬ್ಬಿಸ್ತಿದ್ದಾರೆ. ಈಗ ಯುಪಿ ಟಿ-20 ಲೀಗ್​ನಲ್ಲೂ ಮಿಂಚಿದ್ದಾರೆ.

ಇದನ್ನೂ ಓದಿ : 15-4=11.. ಇಷ್ಟೇ ಪ್ಲೇಯರ್ಸ್ ಸಾಕಾ? – AFG ಸರಣಿಯಲ್ಲೂ BCCI ಚೆಲ್ಲಾಟ

ವಯಸ್ಸು 36 ದಾಟಿದ್ರೂ ಸ್ಪೀಡ್ ಕಮ್ಮಿಯಾಗಿಲ್ಲ. ಸ್ವಿಂಗ್​ನ ಅಟ್ಯಾಕ್ ಬದಲಾಗಿಲ್ಲ. ಅದೇ ಹಿಡಿತ ಅದೇ ಯಶಸ್ಸು.. ಐಪಿಎಲ್​ನಲ್ಲಿ ಬ್ಯಾಟರ್​ಗಳ ಬೆನ್ನು ಮುರಿದು ಬಿಸಿಸಿಐಗೂ ಬಿಗ್ ಮೆಸೇಜ್ ಕೊಟ್ಟಿದ್ದ ಭುವನೇಶ್ವರ್ ಕುಮಾರ್ ಅವ್ರ ಯಶಸ್ವೀಯಾತ್ರೆ ನಿಂತಿಲ್ಲ. ಐಪಿಎಲ್​ನಲ್ಲಿ ಆರ್​ಸಿಬಿಯನ್ನ ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದ ಭುವಿ ದೇಶೀಯ ಅಂಗಳದಲ್ಲಿ ದರ್ಬಾರ್ ಮುಂದುವರಿಸಿದ್ದಾರೆ.

ಯುಪಿ ಟಿ-20 ಲೀಗ್ ನಲ್ಲೂ ಬೆಂಕಿ ಚೆಂಡಿನಂತಾದ ಭುವನೇಶ್ವರ್!

2026ರ ಐಪಿಎಲ್​ನಲ್ಲಿ ಕೇವಲ ಆರ್​ಸಿಬಿ ಅಷ್ಟೇ ಅಲ್ಲದೆ ಇಡೀ ಟೂರ್ನಮೆಂಟ್​​ನಲ್ಲೇ ಬೆಸ್ಟ್ ಬೌಲರ್ ಆಗಿದ್ದ ಸ್ವಿಂಗ್ ಕಿಂಗ್ ಭುವನೇರ್ಶವರ್ ಕುಮಾರ್ 7.95 ರ ಎಕಾನಮಿಯಲ್ಲಿ 28 ​​ವಿಕೆಟ್‌ಗಳನ್ನು ಬೇಟೆಯಾಡಿದ್ರು. ಲಾಸ್ಟ್ ಮೂಮೆಂಟ್​ನಲ್ಲಿ ಜಸ್ಟ್ 1 ವಿಕೆಟ್​ನಿಂದ ಪರ್ಪಲ್ ಕ್ಯಾಪ್ ಮಿಸ್ ಆಗಿತ್ತು. ಆದ್ರೆ ಅದೇ ಐಪಿಎಲ್​ನಲ್ಲಿ  ವಿಕೆಟ್ ತೆಗೆಯೋಕೆ ಪರದಾಡಿದ್ದವ್ರೆಲ್ಲಾ ಈಗ ಭಾರತದ ಪರ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಟ್ಟು ಆಡ್ತಿದ್ದಾರೆ. ಬಟ್ ಭುವಿ ಮಾತ್ರ ಅವಕಾಶಕ್ಕಾಗಿ ಕಾಯುತ್ತಲೇ ಇದ್ದಾರೆ. ದೇಶೀ ಅಂಗಳದಲ್ಲಿ ಸುನಾಮಿ ಎಬ್ಬಿಸಿ ಬಿಸಿಸಿಐ ಬಾಗಿಲನ್ನ ಒದೆಯುತ್ತಲೇ ಇದ್ದಾರೆ. ಈಗ ಯುಪಿಟಿ 20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ಪರವೂ  ಬೌಲಿಂಗ್​ನಲ್ಲೇ ಕಮಾಲ್ ಮಾಡಿದ್ದಾರೆ. ಲಕ್ನೋ ಫಾಲ್ಕನ್ಸ್ ತಂಡದ ಕ್ಯಾಪ್ಟನ್ ಕೂಡ ಆಗಿರುವ ಭುವಿ ಇತ್ತೀಚೆಗೆ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೀರತ್ ಮೇವರಿಕ್ಸ್ ವಿರುದ್ಧ 4 ಓವರ್​ಗಳಲ್ಲಿ ಕೇವಲ 10 ರನ್ ನೀಡಿ 4 ವಿಕೆಟ್ ತೆಗೆದಿದ್ದಾರೆ. ಹಾಗೇ ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಇದ್ರಲ್ಲಿ 18 ಡಾಟ್ ಬಾಲ್ಸ್ ಕೂಡ ಇದ್ವು. ಇನ್ನು ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ಕೇವಲ 5.88ರ ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದಾರೆ. ಈ ಪರ್ಫಾಮೆನ್ಸ್ ನೋಡದ ಬಳಿಕ ಭುವಿಗೆ ಭಾರತದ ಪರ ಮತ್ತೊಂದು ಚಾನ್ಸ್ ಕೊಡಿ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಆಡಿಸಿ ಅನ್ನೋ ಕೂಗು ಹೆಚ್ಚಾಗಿದೆ. ಆದ್ರೆ ಸದ್ಯದ ಸಿಚುಯೇಷನ್ ನೋಡಿದ್ರೆ ಅವಕಾಶ ಸಿಗೋದು ಕಷ್ಟವೇ ಇದೆ. ಅವ್ರ ವಯಸ್ಸಿನ ಜೊತೆಗೆ ಕಾಂಪಿಟೇಷನ್ ಕೂಡ ಜಾಸ್ತಿ ಇರೋದ್ರಿಂದ ಬಿಸಿಸಿಐ ಭುವಿಯನ್ನ ಪರಿಗಣಿಸದೇ ಇರಬಹುದು. ಹೀಗೆ ಆರ್​ಸಿಬಿ ಬೌಲಿಂಗ್ ಬೆಂಕಿಚೆಂಡು ಭುವಿ ಭಾರತದ ಬಾಗಿಲು ತಟ್ಟುತ್ತಾ ಇದ್ರೆ ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಮತ್ತೆ ಆರ್​ಸಿಬಿಗೆ ಬರ್ತಾರೆ ಅನ್ನೋ ಸುದ್ದಿ ಹಲ್​ಚಲ್ ಎಬ್ಬಿಸಿದೆ.

ಆರ್ ಸಿಬಿ & ಜಿಟಿ ನಡುವೆ ಸಿರಾಜ್ ಟ್ರೇಡ್ ಡೀಲ್ ನಡೆಯುತ್ತಿದ್ಯಾ?

ಸದ್ಯ ಗುಜರಾತ್ ಟೈಟಾನ್ಸ್ ತಂಡದ ಮೇನ್ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಅವ್ರನ್ನ 2027ರ ಐಪಿಎಲ್​ಗೂ ಮುನ್ನ ಆರ್​ಸಿಬಿಗೆ ಸೇರಿಸಿಕೊಳ್ಳೋಕೆ ಮಾತುಕತಡೆ ನಡೆಯುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಗುಜರಾತ್ ಪರ 12.25 ಕೋಟಿ ಸಂಭಾವನೆ ಪಡೆಯುತ್ತಿರೋ ಸಿರಾಜ್​ರನ್ನ ಆರ್​ಸಿಬಿಗೆ ಕರೆತರೋ ಪ್ರಯತ್ನಗಳಾಗ್ತಿದೆ ಅನ್ನೋ ಸುದ್ದಿ ಇದೆ. ಸಿರಾಜ್ ಆರ್​ಸಿಬಿ ಪರ ಸತತ 7 ಸೀಸನ್ ಆಡಿದ್ದು ಆರ್​ಸಿಬಿ ಪರ 100 ವಿಕೆಟ್ ಕಲೆ ಹಾಕಿದ ಎರಡನೇ ಬೌಲರ್ ಆಗಿದ್ರು. ಹೀಗಾಗಿ ಭುವಿ ಮತ್ತು ಜೋಶ್ ಹೇಜಲ್ ವುಡ್ ಜೊತೆ ಮತ್ತೊಬ್ಬ ಪ್ರಮುಖ ಫಾಸ್ಟ್ ಬೌಲರ್ ಆಗಿ ಕರೆತರಬಹುದು ಅನ್ನೋ ಟಾಕ್ ಇದೆ. ಹಾಗೇ ಯಶ್ ದಯಾಳ್​ರನ್ನೂ ಕೂಡ ಕೈಬಿಡಬೇಕಾಗಿದ್ರಿಂದ ಬೌಲಿಂಗ್ ಸ್ಕ್ವಾಡ್ ಸ್ಟ್ರಾಂಗ್ ಮಾಡಲು ನೋಡ್ತಿದ್ದಾರೆ. ಆದ್ರೆ ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗೇನಾದ್ರೂ ಸಿರಾಜ್ ರೆಡ್ ಆರ್ಮಿಗೆ ಬಂದಿದ್ದೇ ಆದಲ್ಲಿ ಮಿಯಾ ಮ್ಯಾಜಿಕ್ ಸ್ಟಾರ್ಟ್ ಆಗುತ್ತೆ. ಅದ್ರಲ್ಲೂ ಅವ್ರ ಅಚ್ಚುಮೆಚ್ಚಿನ ಬ್ರದರ್ ವಿರಾಟ್ ಕೊಹ್ಲಿ ಜೊತೆ ಆಡೋ ಪ್ರತೀ ಮೂಮೆಂಟ್​ನೂ ಎಂಜಾಯ್ ಮಾಡ್ತಾರೆ. ಯಾಕಂದ್ರೆ ಸಿರಾಜ್ ಕೆರಿಯರ್​ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೇ ಆರ್​ಸಿಬಿ ಮತ್ತು ಕೊಹ್ಲಿಯಿಂದ. ಹೀಗಾಗಿ ಸಿರಾಜ್ ಗೆ ಈಗ್ಲೂ ಕೂಡ ಆರ್​ಸಿಬಿ ಮತ್ತು ಕೊಹ್ಲಿ ಅಂದ್ರೆ ಅಚ್ಚುಮೆಚ್ಚು. ಅದನ್ನ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ ಕೂಡ.

Shantha Kumari

Leave a Reply

Your email address will not be published. Required fields are marked *