BCCIನೇ ಯಾಮಾರಿಸಿದ ರೋಹಿತ್ – 65 ಆಟಗಾರರು 2 ವರ್ಷ ಬ್ಯಾನ್
ಆಡೋಕೆ ಬಿಟ್ಟು ಈಗ ಶಿಕ್ಷೆ ಯಾಕೆ?

ಭಾರತದಲ್ಲಿ ಕ್ರಿಕೆಟ್ ಆಡೋ ಪ್ರತಿಯೊಬ್ಬರಿಗೂ ಟೀಂ ಇಂಡಿಯಾ ಜೆರ್ಸಿ ತೊಟ್ಟು ದೇಶದ ಪರ ಆಡ್ಬೇಕು ಅನ್ನೋ ಮಹದಾಸೆ ಇರುತ್ತೆ. ಅದ್ರಲ್ಲಿ ಕೆಲವ್ರಿಗೆ ಅವಕಾಶ ಸಿಕ್ರೆ ಇನ್ನೂ ಕೆಲವ್ರಿಗೆ ಸಿಗೋದೇ ಇಲ್ಲ. ಆದ್ರೆ ಈಗ ಭಾರತೀಯ ಕ್ರಿಕೆಟ್ ಲೋಕವೇ ಬೆಚ್ಚಿಬೀಳುವಂತ ಫ್ರಾಡ್ ಬೆಳಕಿಗೆ ಬಂದಿದೆ. ಅದೂ ಕೂಡ ವಯಸ್ಸಿನ ವಂಚನೆ. ಫೇಕ್ ಬರ್ತ್ ಸರ್ಟಿಫಿಕೇಟ್ ಮಾಡಿಸಿ ಭಾರತದ ಪರ ಆಡಿದ ಸಾಕಷ್ಟು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಒಬ್ರಲ್ಲ ಇಬ್ರಲ್ಲ ಬರೋಬ್ಬರಿ 62 ಆಟಗಾರರನ್ನ ಬ್ಯಾನ್ ಮಾಡ್ಲಾಗಿದೆ.
ಇದನ್ನೂ ಓದಿ : ಸೆನ್ಸೇಷನ್ ಅಲ್ಲ LEGEND ಗುರಿ – BCCIಗೆ ಸೂರ್ಯವಂಶಿಯದ್ದೇ ಭಯ
ಭಾರತೀಯ ಕ್ರಿಕೆಟ್ನಲ್ಲಿ ಏಜ್ ಫ್ರಾಡ್ ಸಂಬಂಧ ಬಿಸಿಸಿಐ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ಅತಿದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಬಂಗಾಳದ ಸುಮಾರು 62 ಕ್ಕೂ ಹೆಚ್ಚು ಆಟಗಾರರನ್ನು ಮುಂದಿನ ಎರಡು ಆವೃತ್ತಿಗಳ ಕಾಲ ಯಾವುದೇ ಪಂದ್ಯಾವಳಿಗಳಲ್ಲಿ ಆಡದಂತೆ ನಿಷೇಧ ಹೇರಿದೆ. ಈ ಲಿಸ್ಟ್ನಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಆಟಗಾರರೂ ಇದ್ದಾರೆ.
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದ ರೋಹಿತ್ 2 ವರ್ಷ ಬ್ಯಾನ್!
ಬಿಸಿಸಿಐ ಮತ್ತು ಪಶ್ಚಿಮ ಬಂಗಾಳ ಕ್ರಿಕೆಟ್ ಬೋರ್ಡ್ ಹೇರಿಕೆ ಮಾಡಿರೋ ನಿಷೇಧದಲ್ಲಿ ಪ್ರಮುಖ ಆಟಗಾರರೇ ಇದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದ ಬಂಗಾಳದ ಲೆಗ್-ಸ್ಪಿನ್ನರ್ ರೋಹಿತ್ ಯಾದವ್ ಕೂಡ ಸಿಕ್ಕಿಬಿದ್ದಿದ್ದಾರೆ. ಅದ್ರಲ್ಲೂ ಅವರ ವಯಸ್ಸಿನ ದಾಖಲೆಗಳಲ್ಲಿ ತುಂಬಾನೇ ವೇರಿಯೇಷನ್ ಇದೆ. 2007, 2009 ಹಾಗೂ 2010 ಹೀಗೆ ಮೂರೂ ವರ್ಷಗಳ ಬರ್ತ್ ಸರ್ಟಿಫಿಕೇಟ್ಗಳು ಸಿಕ್ಕಿವೆ. ಹೀಗಾಗಿ ಏಜ್ ಫ್ರಾಡ್ ಪ್ರಕರಣದಲ್ಲಿ ರೋಹಿತ್ಗೆ 2 ವರ್ಷಗಳ ಕಾಲ ನಿಷೇಧ ಹೇರಿದೆ. ಹಾಗೇ 2022ರ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ ರವಿ ಕುಮಾರ್ ಅವರ ದಾಖಲೆಗಳಲ್ಲೂ ವ್ಯತ್ಯಾಸ ಕಂಡು ಬಂದಿದೆ. 40 ರಿಂದ 45 ತಿಂಗಳ ವಯಸ್ಸಿನ ವ್ಯತ್ಯಾಸ ಪತ್ತೆಯಾಗಿದ್ದು, ಇವರನ್ನೂ ಸಹ ಪಂದ್ಯಗಳನ್ನ ಆಡದಂತೆ ತಡೆಹಿಡಿಯಲಾಗಿದೆ. ಹೀಗೆ ಒಟ್ಟಾರೆಯಾಗಿ 65 ಆಟಗಾರರನ್ನ 2 ವರ್ಷ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗಿದೆ. ಅಷ್ಟಕ್ಕೂ ಈ ವಂಚನೆ ಬೆಳಕಿಗೆ ಬಂದಿದ್ದೇ ಇಂಟ್ರೆಸ್ಟಿಂಗ್ ಆಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆಯು ಸುಮಾರು 4,000 ಆಟಗಾರರ ದಾಖಲೆಗಳನ್ನು ಡೀಟೇಲ್ಡ್ ಆಗಿ ಪರಿಶೀಲನೆ ನಡೆಸಿದೆ. ಈ ವೇಳೆ ಆಟಗಾರರ ಆಧಾರ್ ಕಾರ್ಡ್ ಅಪ್ಡೇಟ್ ಹಿಸ್ಟರಿ ಮತ್ತು ಡಿಜಿಟಲ್ ಬರ್ತ್ ಸರ್ಟಿಫಿಕೇಟ್ಗಳನ್ನ ಪರಿಶೀಲಿಸಿದಾಗ ಹಲವು ಆಟಗಾರರು ತಮ್ಮ ವಯಸ್ಸನ್ನು ಕಡಿಮೆ ಅಂತಾ ತೋರಿಸೋಕೆ ಪದೇಪದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿರೋದು ಗೊತ್ತಾಗಿದೆ. ಹೀಗಾಗಿ ನೆಕ್ಸ್ಟ್ ಬರುವಂತ ಆಟಗಾರರು ಏಜ್ ಫ್ರಾಡ್ ಮಾಡದಂತೆ ಬಿಸಿಸಿಐನಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದು, ವಯಸ್ಸನ್ನು ಮುಚ್ಚಿಟ್ಟು ಜೂನಿಯರ್ ಕ್ರಿಕೆಟ್ ಆಡುವ ಯಾವುದೇ ಆಟಗಾರನಿಗೂ ಬಿಸಿ ತಟ್ಟುತ್ತೆ.
ಸಿಕ್ಕಿಬಿದ್ದರೆ ಕೆರಿಯರ್ ಖತಂ!
ಏಜ್ ಫ್ರಾಡ್ ನಲ್ಲಿ ಸಿಕ್ಕಿಬಿದ್ದರೆ 2 ವರ್ಷಗಳ ಕಾಲ ಕಡ್ಡಾಯವಾಗಿ ನಿಷೇಧ
ಬಿಸಿಸಿಐ, ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಪಂದ್ಯಾವಳಿ ಆಡುವಂತಿಲ್ಲ
ನಿಷೇಧದ ಅವಧಿ ಮುಗಿದ ನಂತರವೂ ಯಾವುದೇ ವಯೋಮಿತಿ ಆಟಕ್ಕೆ ಬ್ರೇಕ್
Under-16, Under-19, Under-23 ಟೂರ್ನಿಗಳಲ್ಲಿ ಶಾಶ್ವತ ಅರ್ಹತೆ ಬಂದ್
ಕೇವಲ ಸೀನಿಯರ್ ಡೊಮೆಸ್ಟಿಕ್ ಕ್ರಿಕೆಟ್ ಅಂದ್ರೆ ರಣಜಿ ಟ್ರೋಫಿ ಸೇರಿ ಇತ್ಯಾದಿ
ವಂಚನೆ ಸಾಬೀತಾದಲ್ಲಿ ಆಟಗಾರ ಈ ಹಿಂದೆ ಗಳಿಸಿದ ವೈಯಕ್ತಿಕ ದಾಖಲೆಗಳು ವಾಪಸ್
ಪ್ರಶಸ್ತಿಗಳು ಅಥವಾ ಪಡೆದ ಹಣಕಾಸಿನ ಸೌಲಭ್ಯಗಳನ್ನು ವಾಪಸ್ ಪಡೆಯುವ ಅಧಿಕಾರ
ನಕಲಿ ಜನನ ಪ್ರಮಾಣಪತ್ರ, ನಕಲಿ ಆಧಾರ್ ಕಾರ್ಡ್ ಅಥವಾ ಶಾಲೆಗಳ ನಕಲಿ ದಾಖಲೆ
ಆಟಗಾರ ಹಾಗೂ ಅವರ ಪೋಷಕರ ವಿರುದ್ಧ ಫೋರ್ಜರಿ ಅಡಿಯಲ್ಲಿ ಕ್ರಿಮಿನಲ್ ಕೇಸ್
ಅಲ್ಲಿಗೆ ಒಂದು ಸಲ ಏಜ್ ಫ್ರಾಡ್ ಮಾಡಿ ಸಿಕ್ಕಿಬಿದ್ರೆ ಆತನ ಕ್ರಿಕೆಟ್ ಕರಿಯರ್ಗೆ ದೊಡ್ಡ ಹೊಡೆತ ಬೀಳುತ್ತೆ. ಹಾಗೇ ಇಡೀ ಕ್ರಿಕೆಟ್ ವ್ಯವಸ್ಥೆಯ ಮೇಲೆಯೇ ಕೆಟ್ಟ ಪರಿಣಾಮ ಬೀರುತ್ತೆ. ಹಾಗೇ ನಿಜವಾದ ಪ್ರತಿಭಾವಂತರೂ ಅವಕಾಶ ವಂಚಿತರಾಗ್ತಾರೆ.. 20, 22 ವರ್ಷದ ಆಟಗಾರ 18 ವರ್ಷ ಅಂತಾ ಸುಳ್ಳೇಳಿ ಅಂಡರ್ 19 ವಿಶ್ವಕಪ್ ಗೆ ಸೆಲೆಕ್ಟ್ ಆದ್ರೆ ಆಗ ಅರ್ಹ ಆಟಗಾರರನೊಬ್ಬ ವಂಚಿತನಾಗ್ತಾನೆ. ಹಾಗೇ ಫ್ರಾಡ್ ಕೇಸ್ನಲ್ಲಿ ಸಿಕ್ಕಿಬಿದ್ದ ಆಟಗಾರ ಇನ್ನೇನು ತನ್ನ ಕೆರಿಯರ್ನ ಟರ್ನಿಂಗ್ ಪಾಯಿಂಟ್ನಲ್ಲೇ ಸಿಕ್ಕಿಬಿದ್ರೆ ಆತನ ಭವಿಷ್ಯಕ್ಕೂ ಮಾರಕವೇ. ಆತ ಎಷ್ಟೇ ಟ್ಯಾಲೆಂಟೆಡ್ ಪ್ಲೇಯರ್ ಆಗಿದ್ರೂ 16 ರಿಂದ 22 ವರ್ಷದ ಪಿರಿಯರ್ ಏನಿರುತ್ತಲ ಅದು ಒಬ್ಬ ಕ್ರಿಕೆಟಿಗನ ಗ್ರೋತ್ಗೆ ತುಂಬಾನೇ ಮುಖ್ಯ. ಇಂಥಾ ಟೈಮಲ್ಲಿ 2 ವರ್ಷ ಬ್ಯಾನ್ ಆದ್ರೆ ಆಟಗಾರನ ಫಿಟ್ನೆಸ್, ಫಾರ್ಮ್ ಮತ್ತು ಮಾನಸಿಕ ಸ್ಥಿತಿಯೂ ಕುಸಿಯುತ್ತೆ. ಕೆಲವು ಸಲ ಕ್ರಿಕೆಟ್ ಜೀವನೇ ಮುಗಿಯಬಹುದು. ಹಾಗೇ ಭಾರತದಂಥ ದೊಡ್ಡ ಕ್ರಿಕೆಟ್ ವ್ಯವಸ್ಥೆಗೆ ಮುಜುಗರ ಉಂಟಾಗುತ್ತೆ. ಇನ್ನು ಐಪಿಎಲ್ನಲ್ಲೂ ಆಡ್ತಿದ್ರೆ ಫ್ರಾಂಚೈಸಿಗಳ ನಂಬಿಕೆಯೂ ಹೋಗುತ್ತೆ.. ಹಾಗೇ ಹಣವೂ ನಷ್ಟವಾಗುತ್ತೆ. ಇದೇ ಕಾರಣಕ್ಕೆ ಇಂಥಾ ವಂಚನೆಗಳನ್ನ ತಡೆಯೋಕೆ ಬಿಸಿಸಿಐ ಮೂಳೆಗಳ ಆಧಾರದಲ್ಲಿ ಎಕ್ಸ್ರೇ ಮೂಲಕ ವಯಸ್ಸು ಲೆಕ್ಕ ಹಾಕುವುದು, ಆಧಾರ್ ಅಪ್ಡೇಟ್ ಹಿಸ್ಟರಿ, ಡಿಜಿಟಲ್ ವೆರಿಫಿಕೇಷನ್, ವಾಲಂಟರಿ ಡಿಸ್ಕ್ಲೋಸರ್ ನಿಯಮಗಳನ್ನ ತಂದಿದೆ. ವಾಲಂಟರಿ ಡಿಸ್ಕ್ಲೋಸರ್ ಅಂದ್ರೆ ಬಿಸಿಸಿಐ ತನಿಖೆ ಆರಂಭಿಸುವ ಮುನ್ನವೇ ಆಟಗಾರ ತಾನೇ ಸ್ವತಃ ಒಪ್ಪಿಕೊಂಡು ನಿಜವಾದ ವಯಸ್ಸಿನ ದಾಖಲೆ ನೀಡಿದರೆ, ಅಂತಹವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ಕೇವಲ ಸೀನಿಯರ್ ಕ್ರಿಕೆಟ್ ಆಡಲು ಅನುಮತಿ ನೀಡಲಾಗುತ್ತದೆ. ಹೀಗೆ ಇಷ್ಟೆಲ್ಲಾ ಟಫ್ ರೂಲ್ಸ್ ಇದ್ರೂ ಆಟಗಾರರು ಫ್ರಾಡ್ ಮೂಡಿಸಿರೋದು ಆಘಾತ ಮೂಡಿಸಿದೆ. ಅಟ್ದಿ ಸೇಮ್ ಟೈಂ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಬೋರ್ಡ್ಗಳ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ವರ್ಷಗಟ್ಟಲೆ ಕ್ರಿಕೆಟ್ ಆಡಿಸಿ ಈಗ ಬ್ಯಾನ್ ಮಾಡೋದು ಸರಿನಾ?
ಅಷ್ಟಕ್ಕೂ ಫ್ರಾಡ್ ವಿಚಾರದಲ್ಲಿ ಆಟಗಾರರದ್ದು ಎಷ್ಟು ತಪ್ಪಿದ್ಯೋ ಬಿಸಿಸಿಐ ಮತ್ತು ಆಯಾ ರಾಜ್ಯ ಕ್ರಿಕೆಟ್ ಬೋರ್ಡ್ಗಳ ಬೇಜವಾಬ್ದಾರಿಯೂ ಎದ್ದು ಕಾಣುತ್ತೆ. ವಯೋಮಿತಿಯ ಟೂರ್ನಮೆಂಟ್ಗಳ ಸೆಲೆಕ್ಷನ್ ವೇಳೆ ವಯಸ್ಸನ್ನ ಸರಿಯಾಗಿ ಪರಿಶೀಲನೆ ಮಾಡ್ಬೇಕು. ರಾಜ್ಯ ರಾಜ್ಯ ಕ್ರಿಕೆಟ್ ಬೋರ್ಡ್ಗಳು ಕೂಡ ಅವಕಾಶ ಕೊಡೋ ಮುನ್ನವೇ ಎಲ್ಲವನ್ನೂ ಚೆಕ್ ಮಾಡಿರ್ಬೇಕು. ಆಗ ನೆಗ್ಲಿಜೆನ್ಸ್ ಮಾಡಿ ವರ್ಷಗಟ್ಟಲೆ ಭಾರತದ ಪರ ಆಡಲು ಚಾನ್ಸ್ ಕೊಟ್ಟು ಈಗ ಏಕಾಏಕಿ ಬ್ಯಾನ್ ಮಾಡಿದಾಗ ಆತನ ಭವಿಷ್ಯವೂ ಹಾಳಾಗುತ್ತೆ. ಸೋ ಈ ವಿಚಾರದಲ್ಲಿ ಆಟಗಾರರ ರೆಸ್ಪಾನ್ಸ್ ಎಷ್ಟಿದ್ಯೋ ಆಡಳಿತ ಮಂಡಳಿಗಳೂ ಅಷ್ಟೇ ಎಚ್ಚರಿಕೆಯಿಂದ ಇರಬೇಕಾಗುತ್ತೆ. ಆಗಷ್ಟೇ ಇಂಥಾ ಫ್ರಾಡ್ ತಪ್ಪುತ್ತೆ. ಪ್ರತಿಭಾವಂತ ಆಟಗಾರರಿಗೆ ಅವಕಾಶಗಳು ಸಿಗುತ್ತೆ.

ನೋಡಿರಿ

