ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ಕೇರಳದಲ್ಲಿ ತಮಿಳುನಾಡಿನ 8 ವಿದ್ಯಾರ್ಥಿಗಳು ಸಾ*ವು

ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ಕೇರಳದಲ್ಲಿ ತಮಿಳುನಾಡಿನ 8 ವಿದ್ಯಾರ್ಥಿಗಳು ಸಾ*ವು

ಕೇರಳದ ತ್ರಿಶೂರ್ ಜಿಲ್ಲೆಯ ಕೈಪಮಂಗಲಂನ ಪಣಂಬಿಕ್ಕುನ್ನು ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ ಸುಮಾರು 11.40ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗುರುವಾಯೂರಿನಿಂದ ಕೊಡುಂಗಲ್ಲೂರಿನತ್ತ ತೆರಳುತ್ತಿದ್ದ ಕಾರು, ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹೆದ್ದಾರಿಯ ಡೈವರ್ಷನ್ ಸಮೀಪ ನಿಲ್ಲಿಸಲಾಗಿದ್ದ ಸರಕು ಸಾಗಣೆ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಕಾರಿನ ಭಾಗಗಳನ್ನು ಕತ್ತರಿಸಬೇಕಾಯಿತು.

ಇದನ್ನೂ ಓದಿ: ನೇಪಾಳದಲ್ಲಿ 1252 ಸಾ*ವು, 4216 ಜನ ಕಣ್ಮರೆ – ಎರಡನೇ ವಾರದಲ್ಲೂ ಹುಡುಕಿದಷ್ಟು ಸಿಗುತ್ತಿದೆ ಹೆ*ಣಗಳು

ಅಪಘಾತಕ್ಕೊಳಗಾದ ಕಾರು ತಮಿಳುನಾಡು ನೋಂದಣಿಯದ್ದಾಗಿದ್ದು, ಮೃತಪಟ್ಟವರು ತಮಿಳುನಾಡಿನ ವಿದ್ಯಾರ್ಥಿಗಳಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದ್ದಾರೆ. ದಿಂಡಿಗಲ್‌ನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿರಬಹುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಆದರೆ ಮೃತರ ಸಂಪೂರ್ಣ ಗುರುತುಗಳನ್ನು ಪೊಲೀಸರು ಇನ್ನೂ ಖಚಿತಪಡಿಸುತ್ತಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಆಸ್ಪತ್ರೆಗೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ. ಕಾರಿನ ವೇಗ, ರಸ್ತೆ ಕಾಮಗಾರಿ, ಬೆಳಕಿನ ವ್ಯವಸ್ಥೆ ಮತ್ತು ಡೈವರ್ಷನ್‌ನ ಸುರಕ್ಷತಾ ಕ್ರಮಗಳ ಕುರಿತು ಕೈಪಮಂಗಲಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *