15-4=11.. ಇಷ್ಟೇ ಪ್ಲೇಯರ್ಸ್ ಸಾಕಾ? – AFG ಸರಣಿಯಲ್ಲೂ BCCI ಚೆಲ್ಲಾಟ
ಫಿಟ್ ಇಲ್ಲದಿದ್ರೂ ಸೆಲೆಕ್ಷನ್ ಮಾಡಿದ್ದೇಕೆ?

15-4=11.. ಇಷ್ಟೇ ಪ್ಲೇಯರ್ಸ್ ಸಾಕಾ? – AFG ಸರಣಿಯಲ್ಲೂ BCCI ಚೆಲ್ಲಾಟಫಿಟ್ ಇಲ್ಲದಿದ್ರೂ ಸೆಲೆಕ್ಷನ್ ಮಾಡಿದ್ದೇಕೆ?

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20ಐ ಸರಣಿಗೆ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನೇನೋ ಅನೌನ್ಸ್ ಮಾಡಿದೆ. ಆದ್ರೆ ಈ ಸ್ಕ್ವಾಡ್​ನಲ್ಲಿ ಸ್ಟಾರ್ ಮಾರ್ಕ್ ಇರೋ ಆ ನಾಲ್ವರು ಪ್ಲೇಯರ್​ಗಳ ಆಯ್ಕೆಯೇ ತಲೆಬಿಸಿ ತಂದಿಟ್ಟಿದೆ. ಬಿಸಿಸಿಐ ತೆಗೆದುಕೊಂಡಿರೋ ನಿರ್ಧಾರ ನೆಕ್ಸ್​​ಟ್ ಏಷ್ಯನ್ ಗೇಮ್ಸ್​ಗೂ ದೊಡ್ಡ ಪರಿಣಾಮ ಬೀರಬಹುದು.

ಇದನ್ನೂ ಓದಿ : ಮಾನಕ್ಕಾಗಿ ಭಾರತ ಕೆಣಕಿದ ನಖ್ವಿ – ಸೋಲು ಮುಂದಿಟ್ಟು ಸೊಕ್ಕಿನ ಮಾತು

ಸೆಪ್ಟೆಂಬರ್ 13, 15 ಹಾಗೂ 17ರಂದು ಆಫ್ಘನ್ ವಿರುದ್ಧ ಮೂರು ಪಂದ್ಯಗಳ ಟಿ-20ಐ ಸರಣಿ ನಡೆಯಲಿದ್ದು ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಪ್ರಕಟ ಆಗಿದೆ. ಆದ್ರೆ ಈ ತಂಡದಲ್ಲಿ ಗಾಯದಿಂದ ಕಂಪ್ಲೀಟ್ ಆಗಿ ರಿಕವರ್ ಆಗದ ನಾಲ್ವರನ್ನೂ ಸೆಲೆಕ್ಟ್ ಮಾಡಲಾಗಿದೆ. ಜಸ್ಪ್ರಿತ್ ಬುಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಅವರ ಹೆಸರಿನ ಮುಂದೆ ಸ್ಟಾರ್ ಮಾರ್ಕ್ ಇಟ್ಟು ತಂಡವನ್ನ ಘೋಷಿಸಿದ್ದಾರೆ. ಸ್ಟಾರ್ ಮಾರ್ಕ್ ಅಂದ್ರೆ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ರೆ ಮಾತ್ರ ಆಡ್ತಾರೆ ಅಂತಾ. ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬಿಸಿಸಿಐ ಈ ರೀತಿ ನಿರ್ಧಾರ ತಗೊಂಡಿರೋದು ತಾನೇ ಗನ್ ತಗೊಂಡು ತನ್ನ ಕಾಲಿಗೇ ಶೂಟ್ ಮಾಡಿಕೊಂಡಂತಿದೆ ಅಂತಾ ಕೆಲವ್ರು ಲೇವಡಿ ಮಾಡಿದ್ದಾರೆ. ಯಾಕಂದ್ರೆ ಬಿಸಿಸಿಐ ಮಾಡಿರೋ ಎಡವಟ್ಟೇ ಅಂಥಾದ್ದು.

ಫಿಟ್ ಇಲ್ಲದಿದ್ರೂ ತಂಡಕ್ಕೆ ಸೇರಿಸಿದ್ದು ಯಾಕೆ?

ಜಿಂಬಾಬ್ವೆ ವಿರುದ್ಧದ ಸರಣಿಗೂ ಆಫ್ಘನಿಸ್ತಾನ ತಂಡದ ಆಯ್ಕೆಗೂ ಕಂಪೇರ್ ಮಾಡಿದ್ರೆ ಅರ್ಧಕ್ಕರ್ಧ ಟೀಂ ಬದಲಾಯಿಸಿದ್ದಾರೆ. 8 ಆಟಗಾರರು ಎಂಟರ್ ಆಗಿದ್ರೆ 8 ಆಟಗಾರರು ಹೊರಬಿದ್ದಿದ್ದಾರೆ. ಜಿಂಬಾಬ್ವೆ ಸರಣಿಗೆ ಆಯ್ಕೆಯಾಗದ ಸಂಜು ಸ್ಯಾಮ್ಸನ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಆಫ್ಘನ್ ವಿರುದ್ಧ ಸೆಲೆಕ್ಟ್ ಆಗಿದ್ರೆ ಸೂರ್ಯಾಂಶ್ ಶೆಡ್ಜ್, ರಿಂಕು ಸಿಂಗ್, ಹರ್ಷ್ ದುಬೆ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭಸಿಮ್ರಾನ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಅದ್ರಲ್ಲೂ ಈ ನಾಲ್ವರ ಸೆಲೆಕ್ಷನ್ ಎಲ್ಲರ ಗಮನ ಸೆಳೆದಿದೆ. ಆಫ್ಘನ್ ವಿರುದ್ಧದ ಸರಣಿಗೆ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಅವರ ಅಂತಿಮ ಆಯ್ಕೆ BCCI Centre of Excellence ಫಿಟ್‌ನೆಸ್ ಕ್ಲಿಯರೆನ್ಸ್‌ ಮೇಲೆ ಡಿಪೆಂಟ್ ಆಗುತ್ತೆ.  ಹೀಗಾಗಿ ಸಂಪೂರ್ಣ ಫಿಟ್ ಆಗದಿದ್ದರೆ ಅವರನ್ನೂ ತಂಡಕ್ಕೆ ಆಯ್ಕೆ ಮಾಡುವ ಅವಶ್ಯಕತೆಯೇ ಇರ್ಲಿಲ್ಲ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಹೀಗೇ ಆಗಿತ್ತು. ಫಿಟ್ ಇಲ್ಲದಿದ್ರೂ ಸಾಯಿ ಸುದರ್ಶನ್ ಮತ್ತು ಬುಮ್ರಾ ಹೆಸರನ್ನ ಘೋಷಣೆ ಮಾಡ್ಲಾಗಿತ್ತು. ಅಂತಿಮವಾಗಿ ಫಿಟ್ ಆಗಿಲ್ಲ ಅಂತಾ ಲಾಸ್ಟ್  ಮೂಮೆಂಟ್​ನಲ್ಲಿ ಕೈಬಿಟ್ಟಿದ್ರು. ಈಗ ಮತ್ತೆ ನಾಲ್ವರ ವಿಚಾರದಲ್ಲಿ ಹೀಗೇ ಮಾಡಿದ್ದಾರೆ.

ಫಿಟ್ ನೆಸ್ ಪಾಸಾಗದಿದ್ರೆ ಪ್ರಾಬ್ಲಂ!

ಸೆ. 9ರೊಳಗೆ ನಾಲ್ವರು ಆಟಗಾರರು ಫಿಟ್ ನೆಸ್ ಸಾಬೀತುಪಡಿಸಬೇಕು

ವಿಫಲರಾದರೆ ಕೊನೆಯ ಕ್ಷಣದಲ್ಲಿ ಬದಲಿ ಆಟಗಾರರನ್ನು ಹುಡುಕಬೇಕು

ಹೊಸ ಆಯ್ಕೆಯಿಂದ ಟೀಂ ಕಾಂಬಿನೇಷನ್ ನಲ್ಲಿ ಕಂಪ್ಲೀಟ್ ಚೇಂಜಸ್

ಭುವಿ, ಕೃನಾಲ್ ರಂಥ ಪೂರ್ಣ ಫಿಟ್‌ ಇರುವ ಆಟಗಾರರಿಗೆ ಅನ್ಯಾಯ

ಸೆ.24 ರಿಂದ ಚೀನಾದಲ್ಲಿ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಗೂ ಅಡ್ಡಿ

ಅವಸರವಾಗಿ ಪಂದ್ಯಗಳಿಗೆ ಇಳಿಸಿದ್ರೆ ಗಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಏಕಾಏಕಿ ಮೈದಾನಕ್ಕೆ ಇಳಿಯೋದ್ರಿಂದ ಪರ್ಫಾಮೆನ್ಸ್ ಮೇಲೂ ಪರಿಣಾಮ

ತಂಡದ ಪ್ಲೇಯಿಂಗ್ XI & ಕಾಂಬಿನೇಷನ್ ಬದಲಾವಣೆ ಮಾಡಬೇಕಾಗುತ್ತೆ

ಬುಮ್ರಾನಂಥ ಪ್ಲೇಯರ್ ರಿಕವರ್ ಆಗದಿದ್ರೆ ಬೌಲಿಂಗ್ ವಿಭಾಗದ ಪ್ಲ್ಯಾನ್ ಉಲ್ಟಾ

ರಿಕವರ್ ಆಗದ ಆಟಗಾರರ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡ್ಬೇಕು ಎನ್ನುವ ತಲೆಬಿಸಿ

ಹಾಗಂತ ಭಾರತದ ಪರ ಆಡಲು ಆಟಗಾರರ ಕೊರತೆ ಏನೂ ಇಲ್ಲ. ಅಟ್​ ಎ ಟೈಂ ನಾಲ್ಕು ಭರ್ಜರಿ ಟೀಮ್​ಗಳನ್ನೇ ಕಟ್ಟಬಹುದು. ಆದ್ರೆ ಬಿಸಿಸಿಐ ಕೆಲ ಆಟಗಾರರ ಜೊತೆ ಫೇವರಿಸಂ ಥರ ಆಡ್ತಿದೆ. ಇನ್ನು ಹರ್ಷಿತ್ ರಾಣಾ ವಿಚಾರದಲ್ಲೂ ಅಷ್ಟೇ. ಐಪಿಎಲ್​ನಿಂದ ರೂಲ್ಡ್ ಔಟ್ ಆಗಿದ್ದ ರಾಣಾಗೆ ನೆಕ್ಸ್​ಟ್ ಭಾರತ ತಂಡಕ್ಕೆ ಸೇರಿಸಿಕೊಂಡಿದ್ರು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ರಾಣಾ ಇಂಜುರಿಯಾದ್ರು. ಬಿಸಿಸಿಐನ ಸೆಂಟ್ರ್ ಆಫ್ ಎಕ್ಸಲೆನ್ಸ್​ನಲ್ಲಿ ಕಂಪ್ಲೀಟ್ ಫಿಟ್ ಆಗದೇ ಕ್ಲಿಯರೆನ್ಸ್ ಕೊಡ್ತಿರೋದು ಪದೇಪದೆ ಗಾಯಕ್ಕೆ ತುತ್ತಾಗುವಂತೆ ಮಾಡ್ತಿದೆ ಎನ್ನೋ ಆರೋಪವೂ ಇದೆ. ಹೀಗಾಗಿ ಆಫ್ಘನ್ ಸರಣಿಯಲ್ಲೂ ಅಂಥದ್ದೇ ವಾಸನೆ ಹರಡಿದೆ. ಆದ್ರೆ ಈ ಆಯ್ಕೆ ಕೇವಲ ಆಫ್ಘನ್ ಸಿರೀಸ್​ಗಷ್ಟೇ ಅಲ್ಲ.. ಮುಂಬರುವ ಏಷ್ಯನ್ ಗೇಮ್ಸ್​ ಮೇಲೂ ಹೊಡೆತ ಕೊಡುತ್ತೆ ಅನ್ನೋದನ್ನ ಮರೆಯುವಂತಿಲ್ಲ.

Shantha Kumari

Leave a Reply

Your email address will not be published. Required fields are marked *