ಮಂಗಳೂರು ಟು ಬೆಂಗಳೂರು ವಂದೇ ಭಾರತ್ ಟ್ರಯಲ್ ರನ್ – ಸೆ.5ರಂದು 8 ಗಂಟೆಗಳ ಪ್ರಯಾಣ

ಮಂಗಳೂರು ಟು ಬೆಂಗಳೂರು ವಂದೇ ಭಾರತ್ ಟ್ರಯಲ್ ರನ್ – ಸೆ.5ರಂದು 8 ಗಂಟೆಗಳ ಪ್ರಯಾಣ

ಮಂಗಳೂರು ಹಾಗೂ ಬೆಂಗಳೂರು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ.  ಬಹುದಿನಗಳಿಂದ ಕಾಯುತ್ತಿದ್ದ ವಂದೇ ಭಾರತ್‌ ಟ್ರೈನ್ ಸಂಚಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸೆಪ್ಟೆಂಬರ್ 5ರಂದು ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ 16 ಕೋಚ್‌ಗಳ ವಂದೇ ಭಾರತ್ ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಇದನ್ನೂ ಓದಿ:ಇಂದಿನಿಂದ ಬೆಂಗಳೂರಿನಲ್ಲಿ ಈ ಪ್ಲೈ ಓವರ್‌ಗಳಲ್ಲಿ ಬೈಕ್, ಆಟೋಗಳಿಗೆ ನೋ ಎಂಟ್ರಿ – ಯಾವೆಲ್ಲಾ ಪ್ಲೈ ಓವರ್ ಗೊತ್ತಾ?

ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ರೈಲು ಸೆಪ್ಟೆಂಬರ್ 5, 2026ರಂದು ಟ್ರಯಲ್ ರನ್ ನಡೆಸಲು ಸಿದ್ಧವಾಗಿದೆ. ಈ ಟ್ರಯಲ್ ರನ್ ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ವರೆಗೆ ನಡೆಯಲಿದೆ. ರೈಲಿನ ವೇಗ, ಪ್ರಯಾಣದ ಅವಧಿ, ಘಾಟ್ ಮಾರ್ಗದ ಕಾರ್ಯಾಚರಣೆ ಹಾಗೂ ನಿಲ್ದಾಣಗಳ ನಡುವಿನ ಸಂಚಾರ ವ್ಯವಸ್ಥೆಯನ್ನು ಪರೀಕ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಡಲಿದೆ.  ಹಾಸನ ಜಂಕ್ಷನ್ ಗೆ ಬೆಳಗ್ಗೆ 9.00ಕ್ಕೆ ಆಗಮಿಸಲಿದೆ.  9.05ಕ್ಕೆ ಹೊರಟು ಸಕಲೇಶಪುರಕ್ಕೆ ಬೆಳಗ್ಗೆ 9.55ಕ್ಕೆ ಆಗಮಿಸಲಿದೆ. ನಂತರ ಅಲ್ಲಿಂದ 10.00ಕ್ಕೆ ನಿರ್ಗಮನವಾಗಿ ಸುಬ್ರಹ್ಮಣ್ಯಕ್ಕೆ 12.30ಕ್ಕೆ ಆಗಮಿಸಲಿದೆ. ನಂತರ ಮಂಗಳೂರು ಸೆಂಟ್ರಲ್ ಗೆ  ಮಧ್ಯಾಹ್ನ 2.25ಕ್ಕೆ ಆಗಮಿಸಲಿದೆ. ಇದರ ನಡುವೆ ರೈಲು ಪಡೀಲ್ ನಿಲ್ದಾಣವನ್ನು ಮಧ್ಯಾಹ್ನ 1.50ರ ಸುಮಾರಿಗೆ ಹಾದುಹೋಗಲಿದೆ. ಆದರೆ ಅಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ.

ಮಂಗಳೂರಿನಿಂದ ಮಧ್ಯಾಹ್ನ 3ಕ್ಕೆ ವಂದೇಭಾರತ್ ಟ್ರೈನ್ ವಾಪಸ್ ಬೆಂಗಳೂರಿಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ತಲುಪಿದ ಬಳಿಕ ರೈಲು ಹೆಚ್ಚು ಸಮಯ ನಿಲ್ಲುವುದಿಲ್ಲ. ಇದೇ ರೇಕ್ ಮಧ್ಯಾಹ್ನ 3 ಗಂಟೆಗೆ ಯಶವಂತಪುರದತ್ತ ವಾಪಸ್ ಹೊರಡಲಿದೆ. ಹಿಂತಿರುಗುವಾಗ ರೈಲಿನ ತಾತ್ಕಾಲಿಕ ವೇಳಾಪಟ್ಟಿ ಯಂತೆ ಸುಬ್ರಹ್ಮಣ್ಯ ರೋಡ್ ಗೆ ಸಂಜೆ 4.30ಕ್ಕೆ ಆಗಮಿಸಲಿದೆ.  4.35ಕ್ಕೆ ಇಲ್ಲಿಂದ ನಿರ್ಗಮಿಸಲಿದೆ. ಸಕಲೇಶಪುರಕ್ಕೆ  ಸಂಜೆ 6.30ಕ್ಕೆ ಆಗಮಿಸಲಿದೆ. ನಂತರ 6.35ಕ್ಕೆ ನಿರ್ಗಮಿಸಲಿದೆ.  ಹಾಸನಕ್ಕೆ ಸಂಜೆ 7.20ಕ್ಕೆ ಆಗಮಿಸಲಿದೆ. ಅಲ್ಲಿಂದ  7.30ಕ್ಕೆ ನಿರ್ಗಮಿಸಲಿದೆ. ರಾತ್ರಿ 11 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ವಾಪಸ್ ಪ್ರಯಾಣದಲ್ಲೂ ರೈಲು ಪಡೀಲ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಅದು ಸುಮಾರು ಸಂಜೆ 3.25ಕ್ಕೆ ಪಡೀಲ್ ಮೂಲಕ ಹಾದುಹೋಗಲಿದೆ. ಬೆಂಗಳೂರು–ಮಂಗಳೂರು ಪ್ರಯಾಣ 8 ಗಂಟೆ 20 ನಿಮಿಷವಾಗಲಿದೆ.

ಟ್ರಯಲ್ ರನ್ ಸುಮಾರು 8 ಗಂಟೆ ಸಮಯ  ಈಗ ನಿಗದಿಯಾದರೂ ಕೂಡಾ ನೈಜ ಸಂಚಾರದಲ್ಲಿ ಸಮಯ ಬದಲಾಗುವ ಸಾಧ್ಯತೆ ಇದೆ. ಘಾಟ್ ಪ್ರದೇಶದ ತಿರುವುಗಳು, ಸುರಕ್ಷತಾ ನಿಯಮಗಳು, ಸಿಗ್ನಲ್ ವ್ಯವಸ್ಥೆ ಹಾಗೂ ಇತರ ರೈಲುಗಳ ಸಂಚಾರದ ಮೇಲೆ ಅಂತಿಮ ಪ್ರಯಾಣ ಸಮಯ ಅವಲಂಬಿತವಾಗಿರಲಿದೆ.

Sulekha

Leave a Reply

Your email address will not be published. Required fields are marked *