ಅಭಿಮಾನಿಗಳಿಗಾಗಿ ಮತ್ತೆ ಬಂದ ಅಭಿಮನ್ಯು – ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯು ಆಯ್ಕೆ

ಅಭಿಮಾನಿಗಳಿಗಾಗಿ ಮತ್ತೆ ಬಂದ ಅಭಿಮನ್ಯು – ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯು ಆಯ್ಕೆ

ಮೈಸೂರು ದಸರಾ ಸಂಭ್ರಮದಲ್ಲಿ ಅಭಿಮನ್ಯು ಇರಬೇಕು. ಮತ್ತೊಮ್ಮೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕು. ಚಿನ್ನದ ಅಂಬಾರಿ ಅಭಿಮನ್ಯುವೇ ಹೊರಬೇಕು ಎಂದು ಅಭಿಮಾನಿಗಳ ಒತ್ತಾಯಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯುವನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಗೃಹಜ್ಯೋತಿಗೆ 30 ದಿನ ಗಡುವು – FREEಗೆ ಏನೆಲ್ಲಾ ದಾಖಲೆ ಬೇಕು?

ಮೈಸೂರು ದಸರಾ ಸಂಭ್ರಮದಲ್ಲಿ ಜಂಬೂಸವಾರಿಯಲ್ಲಿ ಮೆರೆಯುತ್ತಿದ್ದ ಅಭಿಮನ್ಯುವಿಗೆ ಈ ಬಾರಿ ಬೀಳ್ಕೊಡುಗೆ ಕೊಡಲಾಗಿತ್ತು. ಸತತ 6 ಬಾರಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿತ್ತು. ಆದರೆ, ಅಭಿಮನ್ಯು ಅಭಿಮಾನಿಗಳು ಬಿಡಬೇಕಲ್ಲ. ಅಭಿಮನ್ಯು ದಸರಾ ಸಂಭ್ರಮದಲ್ಲಿ ಇರಬೇಕು. ಅಭಿಮನ್ಯು ಇದ್ದರೆ ಮಾತ್ರ ನಾಡಹಬ್ಬದ ವೈಭವಕ್ಕೆ ಕಳೆ ಬರಲಿದೆ ಎಂದು ಒತ್ತಾಯಿಸಿದ್ದರು. ಇವತ್ತಿನವರೆಗೂ ಅಭಿಮನ್ಯುವಿಗಾಗಿ ಪ್ರತಿಭಟನೆ ನಡೆಯುತ್ತಲೇ ಇತ್ತು. ಕೊನೆಗೂ ಅಭಿಮಾನಿಗಳ ಒತ್ತಾಯಕ್ಕೆ ಅಭಿಮನ್ಯುವಿನ ಎಂಟ್ರಿ ಆಗಲಿದೆ.

ಅಭಿಮಾನಿಗಳ ಒತ್ತಾಯ.. ಜನರ ಬೆಂಬಲಕ್ಕೆ ಮಣಿದ ಸರ್ಕಾರ 2026ರ ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಅಭಿಮನ್ಯುವನ್ನು ಆಯ್ಕೆ ಮಾಡಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಸತತ ಆರು ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು ಆನೆಗೆ 60 ವರ್ಷ ತುಂಬಿದೆ. 2026ರ ದಸರಾದಲ್ಲಿ ಅಭಿಮನ್ಯು ಭಾಗವಹಿಸುತ್ತಿಲ್ಲ ಎಂದೇ ಹೇಳಲಾಗಿತ್ತು. ಅಭಿಮನ್ಯುವನ್ನು ಕೊನೆಯ ಬಾರಿಗೆ 2026ರ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತರಬೇಕು. ಆ ಮೂಲಕ ಅರ್ಜುನ ಆನೆಗೆ ನೀಡಿದಂತೆ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂದು ಅಭಿಮಾನಿಗಳು ಪ್ರತಿಭಟನೆ ಮೂಲಕ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದು ಮಹತ್ವದ ಆದೇಶ ಮಾಡಿದ್ದಾರೆ.

Sulekha

Leave a Reply

Your email address will not be published. Required fields are marked *