BBK 12ರಲ್ಲಿ ಗಿಲ್ಲಿ.. 13ಕ್ಕೆ ಗಗನಾ? -ಈ ಬಾರಿ TV ಸ್ಟಾರ್ಸ್‌ಗಷ್ಟೇ ಚಾನ್ಸ್?
BIGG BOSS 13ರ ಸ್ಪರ್ಧಿಗಳು ಇವರೇ?

ಬಿಗ್‌ಬಾಸ್.. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ.. ಸೀಸನ್ 12 ಮೊನ್ನೆ ಮೊನ್ನೆಯಷ್ಟೇ ಮುಗಿದಂತೆ ಭಾಸವಾಗುತ್ತಿದೆ. ಇದೀಗ ಸೀಸನ್ 13 ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಭಾನುವಾರ ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗ್ತಿದೆ. ಇದೀಗ ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಬರಬಹುದು ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಅಗ್ನಿಪರೀಕ್ಷೆಯಲ್ಲಿ ಮೂವರು ಕಾಮನ್ ಮ್ಯಾನ್‌ಗಳನ್ನ ಆಯ್ಕೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಬಿಗ್‌ಬಾಸ್ ಮನೆಗೆ ಹೋಗಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ಯಾ? – ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ!
ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೀಸನ್ 12ರ ಸ್ಪರ್ಧಿಗಳ ಹವಾ ಇನ್ನೂ ಕಡಿಮೆಯಾಗಿಲ್ಲ. ಗಿಲ್ಲಿನಟನ ಕ್ರೇಜ್ ನೆಕ್ಟ್ಸ್ ಲೆವೆಲ್‌ನಲ್ಲಿದೆ. ಹೋದಲ್ಲಿ, ಬಂದಲ್ಲೆಲ್ಲಾ ಫ್ಯಾನ್ಸ್ ಮುಗಿಬೀಳ್ತಿದ್ದಾರೆ. ಇದೀಗ ಹೊಸ ಸೀಸನ್ ಬೇಗನೆ ಶುರುವಾಗ್ತಿದೆ. ಇದೇ ಭಾನುವಾರ ಬಿಗ್‌ಬಾಸ್ ಕನ್ನಡ ಸೀಸನ್ 13 ಗ್ರ್ಯಾಂಡ್ ಓಪನಿಂಗ್ ಆಗ್ತಿದೆ. ಮತ್ತೊಂದೆಡೆ ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿರುವ ಸ್ಪರ್ಧಿಗಳು ದೊಡ್ಮನೆ ಪ್ರವೇಶಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಡುವೆ ದೊಡ್ಮನೆಗೆ ಈ ಬಾರಿ ಯಾರೆಲ್ಲಾ ಸೆಲೆಬ್ರಿಟಿಗಳಾಗಿ ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಇದೀಗ ಕೆಲವರ ಹೆಸರು ಕೇಳಿಬಂದಿದೆ. ಈ ಪಟ್ಟಿಯಲ್ಲಿ ಜನಪ್ರಿಯ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳೊಂದಿಗೆ ಗುರುತಿಸಿಕೊಂಡಿರುವ ಕೆಲವು ಕಲಾವಿದರ ಹೆಸರುಗಳೂ ಕೇಳಿಬರುತ್ತಿವೆ.
ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಬ್ರಹ್ಮಗಂಟು ಸೀರಿಯಲ್ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ & ಚಿರು ಪಾತ್ರಕ್ಕೆ ಜೀವತುಂಬಿದ್ದ ಭುವನ್ ಕೂಡ ಬರ್ತಾರೆ ಎನ್ನಲಾಗ್ತಿದೆ. ಇನ್ನು ಇವರ ಜೊತೆ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಪ್ರಮುಖ ಪಾತ್ರಧಾರಿಗಳಾಗಿರುವ ಅಮೋಘ ಆದಿತ್ಯ & ಆಸಿಯಾ ಫಿರ್ಧೊಸ್ ಬರಬಹುದು ಎಂದು ಹೇಳಲಾಗ್ತಿತ್ತು. ಆದ್ರೆ ಇವರಿಬ್ಬರು ಬರೋದು ಡೌಟ್. ಯಾಕಂದ್ರೆ ಇನ್ನೂ ಸೀರಿಯಲ್ ಪ್ರಸಾರ ಆಗ್ತಿದೆ.
ಮತ್ತೊಂದ್ಕಡೆ ಸ್ಯಾಂಡಲ್‌ವುಡ್ ನಟಿ ಅರ್ಚನಾ ಕೊಟ್ಟಿಗೆ ಕೂಡ ಬಿಗ್‌ಬಾಸ್ ಮನೆಗೆ ಹೋಗ್ತಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಮಾತಿನ ಮಲ್ಲಿ ಅರ್ಚನಾ ದೊಡ್ಮನೆಗೆ ಎಂಟ್ರಿಕೊಟ್ರೆ ಮನರಂಜನೆ ಫಿಕ್ಸ್ ಅಂತ ವೀಕ್ಷಕರು ಹೇಳ್ತಿದ್ದಾರೆ. ಆದ್ರೆ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಅರ್ಚನಾ ಕೊಟ್ಟಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಗಮನ ಈಗ ಸಿನಿಮಾಗಳ ಮೇಲಿದೆ. ಸದ್ಯಕ್ಕೆ ಬಿಗ್‌ಬಾಸ್ ಶೋಗೆ ಹೋಗುವ ಆಲೋಚನೆ ನನಗಿಲ್ಲ ಎಂದು ಹೇಳಿ ಅಭಿಮಾನಿಗಳ ಆಸೆಗೆ ಎಳ್ಳುನೀರು ಬಿಟ್ಟಿದ್ದಾರೆ.
ಸಾಮಾನ್ಯವಾಗಿ ಪ್ರತಿ ಸೀಸನ್ ನಲ್ಲೂ ಮಜಾ ಭಾರತದ ಒಬ್ಬ ಕಲಾವಿದ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಾರೆ. ಈ ಬಾರಿ ಮಜಾ ಭಾರತ ಖ್ಯಾತಿಯ ಶಿವು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಶಿವು ರಿಯಾಲಿಟಿ ಶೋ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ.
ಇನ್ನು ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಮೂಲಕ ಮುನ್ನಲೆಗೆ ಬಂದ ಕಲಾವಿದೆ ಗಗನಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಹಿಂದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲೂ ಗಿಲ್ಲಿ ಹಾಗೂ ಗಗನಾ ಜೋಡಿ ಸಖತ್ ಹೈಲೈಟ್ ಆಗಿತ್ತು. ಈ ಶೋನಿಂದ ಗಗನಾ ಮತ್ತಷ್ಟು ಖ್ಯಾತಿಗಳಿಸಿದ್ರು. ಇದೀಗ ಗಗನಾ ಕೂಡ ದೊಡ್ಮನೆಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗ್ತಿದೆ. ಇವರ ಜೊತೆಗೆ ಇತ್ತೀಚೆಗಷ್ಟೇ ಅಣ್ಣಯ್ಯ ಧಾರಾವಾಹಿಯಿಂದ ಹೊರ ಬಂದಿರುವ ಜಿಮ್ ಸೀನ ಖ್ಯಾತಿಯ ಸುಶ್ಮಿತ್ ಜೈನ್ ಹೆಸರು ವೈರಲ್ ಲಿಸ್ಟ್‌ನಲ್ಲಿದೆ. ಸುಶ್ಮಿತ್ ಜೈನ್ ಸೀರಿಯಲ್‌ನಿಂದ ಹೊರ ಬರುತ್ತಿದ್ದಂತೆ ಬಿಗ್‌ಬಾಸ್ ಗೆ ಹೋಗಬಹುದು ಎಂದು ಹೇಳಲಾಗುತ್ತಿದೆ.
ಇನ್ನೊಂದ್ಕಡೆ ಕಳೆದ ವಾರವಷ್ಟೇ ನಂದಗೋಕುಲ ಸೀರಿಯಲ್‌ನಿಂದ ಹೊರ ಬಂದಿರುವ ಕೇಶವ ಪಾತ್ರಧಾರಿ ಯಶವಂತ್ ಎಸ್ಎಸ್ ಹೆಸರು ಬಿಗ್‌ಬಾಸ್ ಸ್ಪರ್ಧಿಗಳ ಸಂಭವನೀಯ ಪಟ್ಟಿಯಲ್ಲಿದೆ. ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ರೂ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಯಶವಂತ್ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಾಗಿ ಇವರೂ ಕೂಡ ಬಿಗ್‌ಬಾಸ್ ಮನೆಗೆ ಹೋಗಬಹುದು ಎನ್ನಲಾಗ್ತಿದೆ.

ನೋಡಿರಿ

