HITಮ್ಯಾನ್ ಬಿಟ್ಟು ODI ವಿಶ್ವಕಪ್ – BCCI ಸಭೆಯಲ್ಲಿ ರೋಹಿತ್ ಭವಿಷ್ಯ
ಗಂಭೀರ್ & ಅಗರ್ಕರ್ ಗಿಲ್ವಾ ಶಿಕ್ಷೆ?

ಮುಂಬೈನ BCCI ಕೇಂದ್ರ ಕಚೇರಿಯಲ್ಲಿ ಟೀಂ ಇಂಡಿಯಾದ ಪರಿಶೀಲನಾ ಸಭೆಯತ್ತಲೇ ಎಲ್ಲರ ಕಣ್ಣಿದೆ. ಗೌತಮ್ ಗಂಭೀರ್, ಅಜಿತ್ ಅಗರ್ಕರ್, VVS ಲಕ್ಷ್ಮಣ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೇ ನಾಯಕರು ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಟೀಂ ಇಂಡಿಯಾಗೆ ಇದು ಸಾಮಾನ್ಯ ಸಭೆಯಲ್ಲ.. ಭವಿಷ್ಯದ ದಿಕ್ಕನ್ನೇ ಬದಲಿಸಬಲ್ಲ ಇಂಪಾರ್ಟೆಂಟ್ ಮೀಟಿಂಗ್. ಭಾರತದ ಹೀನಾಯ ಸೋಲುಗಳು, ರೋಹಿತ್ ಶರ್ಮಾ ಭವಿಷ್ಯ, ಟೀಂ ಇಂಡಿಯಾ ರೋಡ್ ಮ್ಯಾಪ್ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ.
ಇದನ್ನೂ ಓದಿ : ಹಾರ್ದಿಕ್ ಗೆ ಇಂಜುರಿಯೇ ಶತ್ರು – 3 ತಿಂಗಳಾದ್ರೂ ಫಿಟ್ ನೆಸ್ ಫೇಲ್
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸೇರಿದಂತೆ ದೊಡ್ಡ ದೊಡ್ಡ ತಲೆಗಳೇ ಈ ಸಭೆಯಲ್ಲಿ ಭಾಗಿಯಾಗ್ತಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಿ ನಿರ್ಧಾರಗಳನ್ನ ತಗೊಳ್ತಾರೆ. ಅದ್ರಲ್ಲಿ ಮೇನ್ಲಿ ರೋಹಿತ್ ಶರ್ಮಾ ವಿಚಾರ ಸದ್ದು ಮಾಡ್ತಿದೆ.
ರೋಹಿತ್ ಶರ್ಮಾ ಭವಿಷ್ಯ ನಿರ್ಧರಿಸುತ್ತಾ ಬಿಸಿಸಿಐ ಪರಿಶೀಲನಾ ಸಭೆ?
2027ರ ಏಕದಿನ ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ ತಂಡದಲ್ಲಿ ಇರ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಪದೇಪದೆ ಪರವಿರೋಧ ವ್ಯಕ್ತವಾಗ್ತಾನೇ ಇರುತ್ತೆ. 39 ವರ್ಷದ ರೋಹಿತ್ ಶರ್ಮಾ.. ಈಗಾಗಲೇ ಟೆಸ್ಟ್ ಮತ್ತು T20I ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ODI ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿದ್ದಾರೆ. 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್‌ಗೆ ಈಗ ದೊಡ್ಡ ಸವಾಲು ಎದುರಾಗಿದೆ. ಒಂದೆಡೆ ಅನುಭವ.. ಮತ್ತೊಂದೆಡೆ ವಯಸ್ಸು ಮತ್ತು ಫಿಟ್‌ನೆಸ್ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಈ ಸಭೆಯಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ತಾರೆ. ಇಲ್ಲಿ ರೋಹಿತ್ ಆಡಬೇಕು ಅನ್ನೋದು ಒಂದು ವಾದವಿದ್ರೆ ಬೇಡ ಅನ್ನೋವ್ರದ್ದು ಇನ್ನೊಂದು ವಾದ..
ರೋಹಿತ್ ಬೇಕು ಬೇಡ ವಿವಾದ!
ಟೀಂ ಇಂಡಿಯಾ ಪರ ಸಾಕಷ್ಟು ಅನುಭವ ಹೊಂದಿರುವ ರೋಹಿತ್
ವಿಶ್ವಕಪ್ ನಂತಹ ದೊಡ್ಡ ವೇದಿಕೆಯಲ್ಲಿ ಒತ್ತಡವನ್ನು ನಿಭಾಯಿಸಿದವರು
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ 138 ರನ್ ಸಿಡಿಸಿದ್ದ ರೋಹಿತ್
ಫಾರ್ಮ್ ಇದ್ದರೆ ಹಾಗೂ ಫಿಟ್ ನೆಸ್ ಕಾಯ್ದುಕೊಂಡ ಆಡಲಿ ಎನ್ನುವ ವಾದ
ಬೇಡ ಅನ್ನುವವರಿಗೆ 40 ವರ್ಷ ವಯಸ್ಸಾಗುತ್ತೆ ಅನ್ನೋದು ಪ್ರಮುಖ ದೂರು
ವಿಶ್ವಕಪ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ರಂತ ಯಂಗ್ ಸ್ಟರ್ಸ್ ಆಡಲಿ
ಹೀಗೆ ರೋಹಿತ್ ಪರ ನಿಲ್ಲುವವರು ಮತ್ತು ವಿರೋಧ ಇರುವವರು ತಮ್ಮದೇ ಌಂಗಲ್ನಲ್ಲಿ ವಾದಗಳನ್ನ ಮುಂದಿಡ್ತಿದ್ದಾರೆ. ಬಟ್ ಇಲ್ಲಿ ಬಿಸಿಸಿಐ ರೋಹಿತ್ರನ್ನ ಏಕಾಏಕಿ ಹೊರಗಿಡೋಕೆ ಸಾಧ್ಯನೇ ಇಲ್ಲ. ಡೈರೆಕ್ಟ್ ಆಗಿ ಬಾಗಿಲು ಮುಚ್ಚುವುದಕ್ಕಿಂತ, ಮುಂದಿನ ODI ಸರಣಿಗಳಲ್ಲಿ ಅವರ ಫಿಟ್‌ನೆಸ್ ಮತ್ತು ಪ್ರದರ್ಶನವನ್ನು ಮಾನದಂಡವಾಗಿಸಿ ನಿರ್ಧಾರಗಳನ್ನ ಕೈಗೊಳ್ಳಬೇಕು. ಕಂಟಿನ್ಯುಯಸ್ ಆಗಿ ರನ್ ಗಳಿಸಿದ್ರೆ ಫಿಟ್ ಆಗಿದ್ರೆ ವಿಶ್ವಕಪ್ಗೆ ಆಯ್ಕೆ ಮಾಡೋದ್ರಲ್ಲಿ ಯಾವ ತಪ್ಪೂ ಇಲ್ಲ. ಹಾಗೇನಾದ್ರೂ ಫಾರ್ಮ್ ಕುಸಿದರೆ ಅಥವಾ ಫಿಟ್‌ನೆಸ್ ಸಮಸ್ಯೆ ಎದುರಾದರೆ ಆಗ ಯೋಚನೆ ಮಾಡ್ಬೋದು. ಆದ್ರೆ ಇದೆಲ್ಲವನ್ನೂ ಬಿಟ್ಟು ಇಂದಿನ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಇನ್ನು ರೋಹಿತ್ ವಿಚಾರ ಅಷ್ಟೇ ಅಲ್ಲದೆ ಸಭೆಯಲ್ಲಿ ಚರ್ಚಿಸಲೇಬೇಕಾದ ಹಲವು ಸಮಸ್ಯೆಗಳೂ ಇವೆ.
ಸಭೆಯಲ್ಲಿ ಚರ್ಚೆಯ ವಿಚಾರಗಳು!
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ-20ಐನಲ್ಲಿ ಹೀನಾಯ ಸೋಲು
ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಕಡೆಯಿಂದ ಸ್ಪಷ್ಟನೆ
ಸ್ಟಾರ್ ಆಟಗಾರರ ಇಂಜುರಿ, ವರ್ಕ್ ಲೋಡ್ ಮ್ಯಾನೇಜ್ ಮೆಂಟ್ ಬಗ್ಗೆ ಚರ್ಚೆ
2027ರ ಏಕದಿನ ವಿಶ್ವಕಪ್ ಗೆ ಆಟಗಾರರ ಸೆಲೆಕ್ಷನ್ ವಿಚಾರದಲ್ಲಿ ಚರ್ಚೆ
ಮುಂದಿನ 2 ವರ್ಷಗಳ ಟೀಂ ಇಂಡಿಯಾ ರೋಡ್ ಮ್ಯಾಪ್ ನಿರ್ಧಾರ
ಬಿಸಿಸಿಐನ ಈ ಪರಿಶೀಲನಾ ಸಭೆ ಕೇವಲ ತಂಡದ ಸೋಲುಗೆಲುವಿನ ಲೆಕ್ಕಾಚಾರಕ್ಕಷ್ಟೇ ಸೀಮಿತವಲ್ಲ. ಮುಂದಿನ ಜರ್ನಿ ಬಗ್ಗೆಯೂ ಮಹತ್ವ ಪಡ್ಕೊಂಡಿದೆ. 2027ರ ವಿಶ್ವಕಪ್‌ವರೆಗೆ ಟೀಂ ಇಂಡಿಯಾ ಯಾವ ದಾರಿಯಲ್ಲಿ ಸಾಗಬೇಕು.. ಹೆಚ್ಚುತ್ತಿರೋ ಗಾಯದ ಸಮಸ್ಯೆಗಳನ್ನ ಹೇಗೆ ತಗ್ಗಿಸಬೇಕು..ವಿದೇಶಿ ಪಿಚ್ಗಳಲ್ಲಿನ ಸರಣಿಗಳಿಗೆ ಹೇಗೆ ರೆಡಿಯಾಗ್ಬೇಕು.. ಹೀಗೆ ಹಲವು ವಿಚಾರಗಳಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ. ಆದ್ರೆ ಸಭೆಯ ಬಳಿಕ ಬಿಸಿಸಿಐ ಕೆಲವೊಂದು ವಿಚಾರಗಳನ್ನ ರಿವೀಲ್ ಮಾಡಲ್ಲ. ಹೀಗಾಗಿ ಯಾವ ವಿಚಾರಗಳನ್ನ ಅಧಿಕೃತವಾಗಿ ಅನೌನ್ಸ್ ಮಾಡುತ್ತೆ ಅನ್ನೋದೇ ಈಗಿರೋ ಪ್ರಶ್ನೆ. ಅದೆಲ್ಲಕ್ಕಿಂತ ಮುಖ್ಯವಾಗಿ ರೋಹಿತ್ ಶರ್ಮಾ ಭವಿಷ್ಯದ ಬಗೆಗಿನ ನಿರ್ಧಾರವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ನೋಡಿರಿ

