ಪಂತ್, ಧೋನಿ ಭರ್ಜರಿ ಎಣ್ಣೆ ಪಾರ್ಟಿ- ಏರಿದ ಪಡಿಕ್ಕಲ್, ಜಾರಿದ ಗಿಲ್, ಬುಮ್ರಾ

ದುಲೀಪ್ ಟ್ರೋಫಿಯಲ್ಲಿ ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದೆ. ಉತ್ತರ ವಲಯವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ದಕ್ಷಿಣ ವಲಯಕ್ಕೆ ತಿಲಕ್ ಮತ್ತೊಮ್ಮೆ ಪ್ರಮುಖ ಕೊಡುಗೆ ನೀಡಿದರು. ಇದೀಗ ಸೆಪ್ಟೆಂಬರ್ 6ರಂದು ಚೆನ್ನೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ವಲಯ, ಈಸ್ಟ್ ಜೋನ್ ತಂಡವನ್ನು ಎದುರಿಸಲಿದೆ.
ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಯುವ ತಾರೆ ವೈಭವ್ ಸೂರ್ಯವಂಶಿ ಮತ್ತು ತಿಲಕ್ ವರ್ಮಾ ಮುಖಾಮುಖಿಯಾಗಲಿದ್ದಾರೆ. 15 ವರ್ಷದ ವೈಭವ್ ಈ ಟೂರ್ನಿಯಲ್ಲಿ ಗಮನ ಸೆಳೆದಿದ್ದು, ಈಸ್ಟ್ ಜೋನ್ ತಂಡವನ್ನು ಫೈನಲ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 6ರಿಂದ 10 ಸೆಪ್ಟೆಂಬರ್‌ವರೆಗೆ ಚೆನ್ನೈನಲ್ಲಿ ನಡೆಯಲಿರುವ ಫೈನಲ್ ಕುತೂಹಲ ಹೆಚ್ಚಿಸಿದೆ. ವೈಭವ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ವಿ.ವಿ.ಎಸ್. ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾ ಸಚಿವಾಲಯವು ಅಧಿಕೃತ ಅನುಮೋದನೆ ನೀಡಿದ್ದು, ಅದರಂತೆ ಲಕ್ಷ್ಮಣ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ಗಾಗಿ ತೆರಳಲಿದೆ.
ಇದನ್ನೂಓದಿ: RCB ಪ್ಲೇಯರ್ಸ್‌ಗೆ ಮತ್ತೆ ಅನ್ಯಾಯ! – 2027ರವರೆಗೆ ಕೋಚ್ ಗಂಭೀರ್ ಸೇಫ್
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದ ಟೀಂ ಇಂಡಿಯಾದ ದೇವದತ್ ಪಡಿಕ್ಕಲ್, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಎರಡು ಸೆಂಚುರಿ ಸೇರಿದಂತೆ 328 ರನ್ ಬಾರಿಸಿದ್ದ ಪಡಿಕ್ಕಲ್, ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನ ಜಿಗಿದು 54ನೇ ಸ್ಥಾನಕ್ಕೆ ಬಂದಿದ್ದಾರೆ. ಇದೇ ವೇಳೆ, ಶ್ರೀಲಂಕಾದಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದ ಭಾರತದ ನಾಯಕ ಶುಭ್ಮನ್ ಗಿಲ್, ಎರಡು ಸ್ಥಾನಗಳನ್ನು ಕಳೆದುಕೊಂಡು 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಗಾಯದ ಕಾರಣ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೂ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಹಿನ್ನಡೆಯಾಗಿದೆ. ಎರಡನೇ ಸ್ಥಾನದಲ್ಲಿದ್ದ ಬುಮ್ರಾ ಈಗ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಬುಮ್ರಾ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.
ರಿಷಭ್ ಪಂತ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಹೋಟೆಲ್ ಕೋಣೆಯಂತೆ ಕಾಣುವ ಸ್ಥಳದಲ್ಲಿ ಪಂತ್ ಸೋಫಾದಲ್ಲಿ ಹಿರಿಯ ವ್ಯಕ್ತಿಯೊಬ್ಬರ ಜತೆ ಕುಡಿದ ಮತ್ತಿನಲ್ಲಿ ಮಾತನಾಡುತ್ತಿರುವಂತೆ ಕಂಡ್ರೆ, ಧೋನಿ ಆ ಕಡೆ, ಈ ಕಡೆ ಓಡಾಡಿದ್ದಾರೆ. ಆದ್ರೆ ಇವರು ಕುಡಿದಿದ್ದಾರೆ ಅನ್ನೋದ್ದಕ್ಕೆ ಯಾವುದೇ ಸಾಕ್ಷ್ಯಿಗಳು ಇಲ್ಲ.
ಚೊಚ್ಚಲ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ 2027ರ ಟೂರ್ನಿಗೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ. ಇದೇ ಮೊದಲ ಬಾರಿಗೆ ನಡೆಯಲಿರುವ ಈ ಟೂರ್ನಿಗೆ ಭಾರತ ಆತಿಥ್ಯವಹಿಸಲಿದೆ. ಭಾರತ , ಆಸ್ಟ್ರೇಲಿಯಾ ಇಂಗ್ಲೆಂಡ್ ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮಹಿಳಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾನ್ಸ್ ಕಾದಾಟ ನಡೆಸಲಿವೆ.
ಪಾಕಿಸ್ತಾನ ನಾಯಕ ಬಾಬರ್ ಅಜಮ್ 15 ರೂಪಾಯಿ ಹೇರ್ ಡೈ ಹೊಡೆದು ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್ ಬೇಟಿಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದೆ. ಬಾಬರ್ ಅಜಮ್ ಹೇರ್ ಸ್ಟೈಲ್ ಹಾಗೂ ಲುಕ್ ನೋಡಿ ಜನ ಕೇವಲ 15 ರೂಪಾಯಿ ಹೇರ್ ಡೈ ಹೊಡದರೆ ಹೀಗೆ ಆಗುತ್ತೆ. ಕನಿಷ್ಠ 200 ರೂಪಾಯಿ ಡೈ ಆದ್ರೂ ಹೊಡಯಬಹುದಿತ್ತು ಎಂದು ಟ್ರೋಲ್ ಮಾಡಿದ್ದಾರೆ. ಹೇರ್ ಡೈ ಹೊಡೆದಂತೆ ಮಾತ್ರವಲ್ಲ, ಹಣೆ ಮೇಲೆ ಹೇರ್ ಡೈ ಉಳಿದಂತಿರುವ ಕಲೆಗಳು ಈ ಟ್ರೋಲ್‌ಗೆ ಕಾರಣವಾಗಿದೆ.
ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾಮರಿ ಅಥಾಪತ್ತು ಏಷ್ಯಾಕಪ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡೋನೇಷ್ಯಾ ವಿರುದ್ಧದ ಮಹಿಳಾ ಟಿ20 ಏಷ್ಯಾ ಕಪ್ ಪಂದ್ಯದಲ್ಲಿ ಕೇವಲ 5 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ, ಚಾಮರಿ ಏಷ್ಯಾ ಕಪ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಯುವ ಬ್ಯಾಟ್ಸ್‌ಮನ್ ತೌಹಿದ್ ಹೃದಾಯ್ ತ್ರಿಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ‘ಎ’ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದ ನಾಲ್ಕನೇ ದಿನದಂದು ತೌಹಿದ್ ತಮ್ಮ ತ್ರಿಶತಕವನ್ನು ಪೂರೈಸಿದರು, ಇವರು 450 ಎಸೆತಗಳಲ್ಲಿ 350 ರನ್‌ಗಳ ಗಡಿಯನ್ನು ತಲುಪಿದರು.

ನೋಡಿರಿ

