ಕೇಡಿ ಜೇಡಿ ಬಲೆಯಲ್ಲಿ ಮಧುರಾ – ಮಲ್ಲಿ, ಭೂಮಿಕಾ ಸೋಲಿಗೆ ವೀಕ್ಷಕರು ಗರಂ

ಅಮೃತಧಾರೆ ಸೀರಿಯಲ್ನಲ್ಲಿ ಮತ್ತೊಮ್ಮೆ ಕೇಡಿ ಜೇಡಿ ಅಟ್ಟಹಾಸ ಮೆರೆದಿದ್ದಾರೆ. ಜೇಡಿಗೆ ಬಲೆ ಹಾಕಲು ಹೋದ ಮಧುರಾ ತಾನೇ ಬಲೆಯಲ್ಲಿ ಬಿದ್ದಿದ್ದಾಳೆ.
ಇದನ್ನೂ ಓದಿ:ದುನಿಯಾ ವಿಜಯ್ ಜೊತೆ ನಾಗರತ್ನ ವಿಚ್ಛೇದನಕ್ಕೆ ಕೋರ್ಟ್ ಅಸ್ತು – ಪತ್ನಿಗೆ 2 ಕೋಟಿ ರೂ. ಜೀವನಾಂಶ
ಅಮೃತಧಾರೆ ಸೀರಿಯಲ್ನಲ್ಲಿ ಕೇಡಿ ಜೈದೇವ್ಗೆ ಬುದ್ದಿ ಕಲಿಸಲು ಹೋದ ಭೂಮಿಕಾ ಮತ್ತು ಮಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಧುರಾ ಬಲೆಗೆ ಜೈದೇವ್ನನ್ನು ಬೀಳಿಸಲು ಭೂಮಿ ಮತ್ತು ಮಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ಮಧುರಾಳ ಸತ್ಯ ಜೈದೇವ್ಗೆ ಗೊತ್ತಾಗಿದೆ. ಮಧುರಾ ಜೇಡಿ ಚಕ್ರವ್ಯೂಹದಲ್ಲಿ ಸಿಲುಕಿದ್ದಾಳೆ. ಈ ವ್ಯೂಹ ಬಿಡಿಸಲು ಖಡಕ್ ಆಫೀಸರ್ ಮಲ್ಲಿ ಪ್ಲ್ಯಾನ್ ಏನು ಅನ್ನೋ ಕುತೂಹಲ ಗರಿಗೆದರಿದೆ. ಇದರ ಮಧ್ಯೆ ಪೊಲೀಸರ ಬಲೆಗೆ ಜೇಡಿ ಬೀಳುವ ಬದಲು ಕೇಡಿ ಬಲೆಗೆ ಪೊಲೀಸರೇ ಬಿದ್ದಿದ್ದು ನೋಡಿ ವೀಕ್ಷಕರು ಗರಂ ಆಗಿದ್ದಾರೆ.
ಮಧುರಾಳ ನಿಜಬಣ್ಣ ಅರಿತ ಜೈದೇವ್, ಆಕೆಯನ್ನು ಅಪಹರಿಸಿ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಇತ್ತ ಮಧುರಾಳ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಮಲ್ಲಿ ಮತ್ತು ಭೂಮಿಕಾ ಆತಂಕಗೊಂಡಿದ್ದಾರೆ. ಮಧುರಾಳ ಮೊಬೈಲ್ ನೋಡಿದ ಜೈದೇವ್ಗೆ, ತನ್ನ ಮನೆಯಲ್ಲಿರೋದು ಪೊಲೀಸ್ ಮತ್ತು ಮಲ್ಲಿ-ಭೂಮಿಕಾ ಪರವಾಗಿ ಕೆಲಸ ಮಾಡ್ತಾಳೆ ಅನ್ನೋದು ಗೊತ್ತಾಗಿತ್ತು. ತನ್ನೆಲ್ಲಾ ವಿಷಯ ಜೈದೇವ್ಗೆ ಗೊತ್ತಾಗಿರೋದು ತಿಳಿದ ಮಧುರಾ ಆತನ ಮನೆಯಿಂದ ಹೊರ ಬಂದಿದ್ದಾಳೆ. ಆಟೋ ಹತ್ತಿ ಹೊರಟ ಮಧುರಾಳನ್ನು ಹಿಂಬಾಲಿಸಿದ ಜೈದೇವ್, ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮಧುರಾಳ ಕೈ ಮತ್ತು ಬಾಯಿ ಕಟ್ಟಿರೋ ಜೈದೇವ್, ನೀನ್ಯಾರು? ಬ್ಲಡಿ ಭೂಮಿಕಾ ಮತ್ತು ರೂರಲ್ ಕೋಟಾ ಮಲ್ಲಿ ನಿನ್ನನ್ನು ಇಲ್ಲಿಗೆ ಕಳಿಸಿರೋ ವಿಷಯವೂ ನನಗೆ ಗೊತ್ತಿದೆ ಎಂದ ಹೇಳಿ ಶಾಕ್ ನೀಡಿದ್ದಾನೆ.
ಭೂಮಿಕಾ ಮತ್ತು ಮಲ್ಲಿ ಜೊತೆಯಾಗಿ ಮಧುರಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಮಧುರಾಳ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಇಬ್ಬರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೈದೇವ್ ಏನಾದ್ರೂ ಮಾಡಿದ್ದಾನಾ ಎಂಬ ಅನುಮಾನ ಮಲ್ಲಿ ಮತ್ತು ಭೂಮಿಕಾಗೆ ಬಂದಿದೆ. ಮಧುರಾ ಪೊಲೀಸ್ ಆಗಿದ್ದರೂ ತಲೆ ಓಡಿಸುತ್ತಿಲ್ಲ. ಮಲ್ಲಿ ಖಡಕ್ ಆಫೀಸರ್ ಆದರೂ ಪ್ಲ್ಯಾನ್ ಠುಸ್ ಆಗುತ್ತಿರುವುದಕ್ಕೆ ವೀಕ್ಷರು ಕೂಡಾ ಡೈರೆಕ್ಟರ್ಗೇನೇ ಟಿಪ್ಸ್ ಕೊಡುತ್ತಿದ್ದಾರೆ.

ನೋಡಿರಿ

