ಮಾಫಿ ಸಾಕ್ಷಿ ಶಾಕ್ ನಡುವೆ ದರ್ಶನ್‌ಗೆ ಮತ್ತೊಂದು ಶಾಕ್ – ದರ್ಶನ್‌ ಜೊತೆ ಇರಲ್ಲವೆಂದು ಇಬ್ಬರು ಆರೋಪಿಗಳು ಅರ್ಜಿ

ಮಾಫಿ ಸಾಕ್ಷಿ ಶಾಕ್ ನಡುವೆ ದರ್ಶನ್‌ಗೆ ಮತ್ತೊಂದು ಶಾಕ್ – ದರ್ಶನ್‌ ಜೊತೆ ಇರಲ್ಲವೆಂದು ಇಬ್ಬರು ಆರೋಪಿಗಳು ಅರ್ಜಿ
 ನಟ ದರ್ಶನ್ ಗೆ ಮಾಫಿ ಸಾಕ್ಷಿ ಶಾಕ್ ನಡುವೆ ಮತ್ತೊಂದು ಶಾಕ್ ಸಿಕ್ಕಿದೆ. ನಟ ದರ್ಶನ್​ನಿಂದ ಮತ್ತಿಬ್ಬರು ಆರೋಪಿಗಳು ದೂರ ದೂರ ಎನ್ನುವ ಹಾಗಾಗಿದೆ. ಚಿತ್ರದುರ್ಗ ಜಿಲ್ಲಾ ಜೈಲ್ಲಿಗೆ ವರ್ಗಾವಣೆ ಮಾಡುವಂತೆ ಕೋರ್ಟ್​ಗೆ ಇಬ್ಬರು ಮನವಿ ಮಾಡಿದ್ದಾರೆ. ಇಬ್ಬರು ಆರೋಪಿಗಳು ಈ ಹಿಂದೆಯೂ ಸಹ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಚಿತ್ರದುರ್ಗ ಮೂಲದ A-5 ಜಗದೀಶ್, A-6 ಅನುಕುಮಾರ್ ರಿಂದ ಅರ್ಜಿ ಸಲ್ಲಿಕೆಯಾಗಿದೆ. ಜೈಲು ಅಧಿಕಾರಿಗಳಿಗೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಜೈಲು ಅಧಿಕಾರಿಗಳಿಗೆ ಆರೋಪಿಗಳು ಸಲ್ಲಿಸುವ ಅರ್ಜಿಯ ಅನ್ವಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಆದಷ್ಟು ಬೇಗ ಆರೋಪಿಗಳ ಅರ್ಜಿ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಲಯಕ್ಕೆ ವರದಿ ನೀಡುವಂತೆ 59 ನೇ ಸಿಸಿಹೆಚ್ ಕೋರ್ಟ್ ಸೂಚಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮುಂದೂಡಿಕೆ ಆಗಿದೆ. ಹೈಕೋರ್ಟ್ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್ ಮಾಫಿ ಸಾಕ್ಷಿ ದಾಖಲು ಮಾಡಿಕೊಳ್ಳುವುದನ್ನು ಮುಂದೂಡಿಕೆ ಮಾಡಿದೆ. ಹೈಕೋರ್ಟ್‌ನಲ್ಲಿ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರದೂಷ್ ಹೇಳಿಕೆ ದಾಖಲಿಗೆ ಸಮಯ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಮನವಿ ಮಾಡಿದ್ದರು. ಇದರಂತೆ ಸದ್ಯ ನ್ಯಾಯಾಲಯ ಸೋಮವಾರಕ್ಕೆ ಪ್ರದೂಷ್ ಹೇಳಿಕೆ ದಾಖಲನ್ನು ಸೆಕ್ಷನ್ ಕೋರ್ಟ್ ಮುಂದೂಡಿಕೆ ಮಾಡಿದೆ.

Kishor KV

Leave a Reply

Your email address will not be published. Required fields are marked *