ಏರೋ ಇಂಡಿಯಾ 2027 – ಫೆಬ್ರವರಿ 8ರಿಂದ 12ರವರೆಗೆ ವೈಮಾನಿಕ ಹಬ್ಬ

ಏರೋ ಇಂಡಿಯಾ 2027 – ಫೆಬ್ರವರಿ 8ರಿಂದ 12ರವರೆಗೆ ವೈಮಾನಿಕ ಹಬ್ಬ

ಬೆಂಗಳೂರಿನಲ್ಲಿ ಏರ್‌ಶೋಗೆ ಡೇಟ್ ಫಿಕ್ಸ್ ಆಗಿದೆ. ಏರೋ ಇಂಡಿಯಾ-2027ರ ವೈಮಾನಿಕ ಹಬ್ಬ ಫೆಬ್ರವರಿ 8 ರಿಂದ 12 ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.

ಇದನ್ನೂ ಓದಿ:ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಥಳದಲ್ಲೇ ಪರಿಹಾರ – DK ಸರ್ಕಾರದ ಪ್ರಜಾಸೇವಾ ಯೋಜನೆಯಿಂದ ಏನೆಲ್ಲಾ ಲಾಭ?

ಬೆಂಗಳೂರಿನಲ್ಲಿ ಮತ್ತೊಮ್ಮೆ ಜಾಗತಿಕ ಮಟ್ಟದ ಏರ್‌ಶೋಗೆ ಮುಹೂರ್ತ ನಿಗದಿಯಾಗಿದೆ. ಏರೋ ಇಂಡಿಯಾ 2027ರ 16ನೇ ಆವೃತ್ತಿಯು ರಾಜಧಾನಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. 2027 ರ ಫೆಬ್ರವರಿ 8 ರಿಂದ 12 ರವರೆಗೆ ಒಟ್ಟು 5 ದಿನಗಳ ಕಾಲ ಈ ಬೃಹತ್ ಏರೋಸ್ಪೇಸ್ ಪ್ರದರ್ಶನ ನಡೆಯಲಿದೆ. ಭಾರತ ಸರ್ಕಾರದ ರಕ್ಷಣಾ ಉತ್ಪಾದನಾ ಇಲಾಖೆಯ ಪರವಾಗಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಪ್ರಮುಖ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳನ್ನು ಆರಂಭಿಸಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಈ ಪ್ರದರ್ಶನವು ಪ್ರಪಂಚದ ಮುಂಚೂಣಿಯ ಏರೋಸ್ಪೇಸ್ ಹಾಗೂ ರಕ್ಷಣಾ ವಲಯದ ಬೃಹತ್ ಕಂಪನಿಗಳನ್ನು ಒಂದೇ ಸೂರಿನಡಿ ತರಲಿದೆ. ಜಾಗತಿಕ ತಂತ್ರಜ್ಞಾನ ತಜ್ಞರು, ನವೋದ್ಯಮಿಗಳು, ವಿವಿಧ ದೇಶಗಳ ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳು ಹಾಗೂ ಜಾಗತಿಕ ನೀತಿ ನಿರೂಪಕರು ಈ ಬೃಹತ್ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ.

ವೈಮಾನಿಕ ಸಾಹಸಗಳು ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳ ಪ್ರದರ್ಶನ ನಡೆಯಲಿದೆ.

Sulekha

Leave a Reply

Your email address will not be published. Required fields are marked *