ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ಯಾ? – ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ!

ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ಯಾ? – ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ!

ಇತ್ತೀಚಿನ ದಿನಗಳಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಕೂದಲು ಬಿಳಿ ಅನ್ನೋ ಸಮಸ್ಯೆ ಕಾಡುತ್ತಿದೆ. ಮೊದಲೆಲ್ಲಾ ಬಿಳಿ ಕೂದಲು ಅನ್ನೋದು ವೃದ್ಧರನ್ನು ಮಾತ್ರ ಕಾಡುತ್ತಿತ್ತು ಆದರೆ ಈಗ ಹಾಗಲ್ಲ, ಶಾಲಾ-ಕಾಲೇಜು ಮತ್ತು ಕೆಲಸ ಮಾಡುವ ಯುವಕ-ಯುವತಿಯರಲ್ಲೂ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆ ಕಂಡುಬರುತ್ತಿದೆ. ಅನೇಕ ಜನರು ಇದನ್ನು ಆನುವಂಶಿಕ ಕಾರಣ ಎಂದು ಸುಮ್ಮನಿರುತ್ತಾರೆ. ಆದರೆ ವಾಸ್ತವವೆಂದರೆ ನಮ್ಮ ದೈನಂದಿನ ಅಭ್ಯಾಸಗಳೇ ಬಿಳಿ ಕೂದಲು ಬರಲು ಕಾರಣವಾಗುತ್ತದೆ.

ಇದನ್ನೂ ಓದಿ: ಹಾಲಿಗಿಂತಲೂ ಈ ಪದಾರ್ಥ ಸೊಪ್ಪಿನಲ್ಲಿದೆ ಕ್ಯಾಲ್ಸಿಯಂ! – ಈ ಎಲ್ಲಾ ರೋಗಗಳಿಗೂ ರಾಮಬಾಣ!

ನಿರಂತರ ಒತ್ತಡ, ನಿದ್ರೆಯ ಕೊರತೆ, ಜಂಕ್ ಫುಡ್‌ನ ಅತಿಯಾದ ಸೇವನೆಯೇ, ಮಾಲಿನ್ಯ ಮತ್ತು ಕೂದಲಿನ ಮೇಲೆ ಬಳಸುವ ಕೆಲವು ರಾಸಾಯನಿಕಗಳು ಕೂದಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅಂತಹ ಸಮಯದಲ್ಲಿ ಕೂದಲಿನ ಪೋಷಣೆಯನ್ನು ಸರಿಯಾಗಿ ಮಾಡಿದರೆ, ದೀರ್ಘಕಾಲ ಕೂದಲು ಬಿಳಿಯಾಗದೆ ಗಟ್ಟಿಯಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು ಬಿಳಿ ಕೂದಲನ್ನು ಕಪ್ಪು ಮಾಡಲು ಯಾವುದೇ ದುಬಾರಿ ಚಿಕಿತ್ಸೆಗಳ ಅಗತ್ಯವಿಲ್ಲ. ಬದಲಿಗೆ ಲೈಫ್‌ಸ್ಟೈಲ್‌ ಬದಲಾವಣೆ ಮಾಡಿಕೊಂಡರೆ ಸಾಕು. ಆ ಮೂಲಕ ನಿಮ್ಮ ಬಿಳಿ ಕೂದಲಿನ ಸಮಸ್ಯೆಯನ್ನು ನಿಯಂತ್ರಿಸಬಹುದು.

ಮುಖ್ಯವಾಗಿ ಆರೋಗ್ಯಕರ ಆಹಾರಕ್ಕೆ ಮೊದಲ ಆದ್ಯತೆ ನೀಡಬೇಕು. ಕೂದಲಿನ ಆರೋಗ್ಯಕ್ಕಾಗಿ, ಉತ್ತಮ ಆಹಾರ ಪದ್ಧತಿಯೇ ಸೂಕ್ತ ಪರಿಹಾರವೆಂದು ತಜ್ಞರು ಹೇಳುತ್ತಾರೆ. ಪ್ರೋಟೀನ್, ವಿಟಮಿನ್ ಬಿ ಅಂಶ ಹೊಂದಿರುವ ಆಹಾರಗಳು ನಿಮ್ಮ ಕೂದಲಿಗೆ ಅತ್ಯಗತ್ಯವಾಗಿ ಬೇಕಾಗುತ್ತದೆ. ವಿಶೇಷವಾಗಿ ದ್ವಿದಳ ಧಾನ್ಯಗಳು, ಮೊಟ್ಟೆ, ಹಾಲು, ಹಸಿರು ಎಲೆಗಳ ತರಕಾರಿಗಳು, ಡ್ರೈ ಫ್ರೂಟ್ಸ್‌ ತಿನ್ನುವುದರಿಂದಲೂ ಕೂದಲು ಆರೋಗ್ಯವಾಗಿರುತ್ತದೆ.

ಕೂದಲಿನ ಆರೈಕೆಗಾಗಿ ಎಣ್ಣೆ ಕೂಡ ಉತ್ತಮ ಪರಿಹಾರವಾಗಲಿದೆ. ಆದ್ದರಿಂದ ನೆಲ್ಲಿಕಾಯಿ, ತೆಂಗಿನ ಕಾಯಿಯಂತರ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಲು ಸಹಕಾರಿ. ವಾರಕ್ಕೆ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚಿ, ನೆತ್ತಿಗೆ ಚೆನ್ನಾಗಿ ಮಸಾಜ್‌ ಮಾಡುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ.

ಮಾನಸಿಕ ಒತ್ತಡವೂ ಕಪ್ಪು ಕೂದಲು ಬಿಳಿಯಾಗಲು ಕಾರನವಾಗುತ್ತದೆ. ಅಲ್ಲದೇ ಅತಿಯಾದ ಒತ್ತಡ ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ನಂತರದಲ್ಲಿ ಬಿಳಿ ಕೂದಲಿಗೆ ಕಾರಣವಾಗಬಹುದು. ಅದಕ್ಕಾಗಿ ನಿರಂತರ ಯೋಗ, ಧ್ಯಾನ, ವಾಕಿಂಗ್‌ ಮೂಲಕ ದೈಹಿಕವಾಗಿ ಆರೋಗ್ಯವಂತರಾಗಿರಬಹುದು. ಅಲ್ಲದೇ ಮಾನಸಿಕ ಶಾಂತಿಗೂ ಇದು ಒಳ್ಳೆಯದು ಎನ್ನಲಾಗಿದೆ.

ಮುಖ್ಯವಾಗಿ ಇತ್ತೀಚೆಗೆ ಬರುತ್ತಿರುವ ಕೂದಲು ಉತ್ಪನ್ನಗಳು, ರಾಸಾಯನಿಕ ಅಂಶಗಳಿಂದ ಕೂಡಿರುತ್ತದೆ. ಇದು ಕೂದಲನ್ನು ವೇಗವಾಗಿ ಹಾನಿ ಮಾಡುತ್ತದೆ. ಅದರಲ್ಲೂ ಕೂದಲಿಗೆ ಬಣ್ಣ ಬಳಿಯುವುದು, ಶ್ಯಾಂಪೂ ಬಳಸುವುದರಿಂದ ಕೂದಲಿನ ನೈಸರ್ಗಿಕ ಹೊಳಪಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಇವುಗಳ ಬಳಕೆ ಕಮ್ಮಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *