RCB ಪ್ಲೇಯರ್ಸ್‌ಗೆ ಮತ್ತೆ ಅನ್ಯಾಯ! – 2027ರವರೆಗೆ ಕೋಚ್ ಗಂಭೀರ್ ಸೇಫ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಆದರೆ ತಂಡದಲ್ಲಿ ನಾಲ್ವರು ಆಟಗಾರರ ಫಿಟ್‌ನೆಸ್ ಬಗ್ಗೆ ಇನ್ನೂ ಆತಂಕವಿದೆ. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದ ಬಳಿಕವೇ ಅವರು ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಆರ್‌ಸಿಬಿ ಆಟಗಾರರಿಗೆ ಯಾಕೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಚರ್ಚೆ ಜೋರಾಗಿದೆ. ಉತ್ತಮ ದಾಖಲೆ ಹೊಂದಿರುವ ಭುವನೇಶ್ವರ್ ಕುಮಾರ್ ಆಯ್ಕೆಯಾಗಿಲ್ಲ. ಅದೇ ರೀತಿ, ಉತ್ತಮ ಪ್ರದರ್ಶನ ನೀಡಿರುವ ರಜತ್ ಪಾಟಿದಾರ್‌ಗೂ ಅವಕಾಶ ಸಿಕ್ಕಿಲ್ಲ. ಕೃಣಾಲ್ ಪಾಂಡ್ಯ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಇಂಜುರಿ ಸಮಸ್ಯೆ ಇರುವ ಆಟಗಾರರನ್ನು ಆಯ್ಕೆ ಮಾಡುವ ಬದಲು, ಫಾರ್ಮ್‌ನಲ್ಲಿರುವ ಈ ಆಟಗಾರರಿಗೆ ಅವಕಾಶ ನೀಡಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೀಗಾಗಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಆರ್‌ಸಿಬಿ ಆಟಗಾರರನ್ನು ಕಡೆಗಣಿಸುತ್ತಿದೆಯಾ ಎಂಬ ಚರ್ಚೆ ಇದೀಗ ಜೋರಾಗಿದೆ.
ಇದನ್ನೂ ಓದಿ: IPLಗೆ ಇಂಪ್ಯಾಕ್ಟ್ ಪ್ಲೇಯರ್ ಭಾರ – ಬ್ಯಾನ್ ಆಗಬೇಕಾ.. ಬದಲಾವಣೆ ಸಾಕಾ?
ವಿದೇಶಿ ಪ್ರವಾಸಗಳಲ್ಲಿನ ಇತ್ತೀಚಿನ ಸರಣಿ ಸೋಲುಗಳ ಬೆನ್ನಲ್ಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಭವಿಷ್ಯದ ಕುರಿತು ಹಬ್ಬಿದ್ದ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಬಿಸಿಸಿಐ ತೂಗುಗತ್ತಿಯಿಂದ ಇಬ್ಬರು ಸೇಫ್ ಆಗಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಕಾರ್ಯವೈಖರಿ ಹಾಗೂ ಇಬ್ಬರ ನಡುವಿನ ಸಮನ್ವಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ, ಇವರಿಬ್ಬರನ್ನೇ 2027ರ ಏಕದಿನ ವಿಶ್ವಕಪ್ ವರೆಗೂ ತಮ್ಮದೇ ಹುದ್ದೆಗಳಲ್ಲಿ ಮುಂದುವರಿಸಲು ಬಿಸಿಸಿಐ ಒಲವು ತೋರಿದೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿಲ್ಲ. ಗಾಯದಿಂದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಶ್ರಾಂತಿ ಮುಂದುವರಿಸಲಾಗಿದೆ. ಹಾರ್ದಿಕ್ ಅನುಪಸ್ಥಿತಿ ಭಾರತದ ಆಲ್‌ರೌಂಡರ್ ಕಾಂಬಿನೇಷನ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆದ ಬಳಿಕವೇ ಅವರು ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿದೆ.
ಕೃಣಾಲ್ ಪಾಂಡ್ಯಗೆ ಮತ್ತೆ ಟೀಂ ಇಂಡಿಯಾದ ಬಾಗಿಲು ತೆರೆಯುತ್ತಾ ಎಂಬ ಪ್ರಶ್ನೆ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಪ್ರಕಟವಾದ 15 ಸದಸ್ಯರ ತಂಡದಲ್ಲಿ ಕೃಣಾಲ್‌ಗೆ ಸ್ಥಾನ ಸಿಕ್ಕಿಲ್ಲ. ಆದರೆ ಆಯ್ಕೆಯಾಗದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ “ಭರವಸೆ ಇನ್ನೂ ಜೀವಂತವಾಗಿದೆ” ಎಂಬ ಸಂದೇಶ ನೀಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ತಮ್ಮ ನಿರೀಕ್ಷೆ ಇನ್ನೂ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
15 ವರ್ಷದ ವೈಭವ್ ಸೂರ್ಯವಂಶಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವೈಭವ್, ಚಿಕ್ಕ ವಯಸ್ಸಿನಲ್ಲೇ ಟೀಂ ಇಂಡಿಯಾದ ಬಾಗಿಲು ತೆರೆದಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಈಗ ಮತ್ತೊಮ್ಮೆ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ನಾಯಕತ್ವದ ಈಸ್ಟ್ ಝೋನ್, ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. 159 ರನ್‌ಗಳ ಗುರಿ ಬೆನ್ನಟ್ಟಿದ ಈಸ್ಟ್ ಝೋನ್ ಪರ ವೈಭವ್ ಸೂರ್ಯವಂಶಿ 40 ರನ್ ಗಳಿಸಿದರೆ, ಇಶಾನ್ ಕಿಶನ್ ಅಜೇಯ 39 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಮೊಹಮ್ಮದ್ ಶಮಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಸೆಂಟ್ರಲ್ ಝೋನ್ ವಿರುದ್ಧದ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್ ಕಬಳಿಸಿದ ಶಮಿ, ಈಸ್ಟ್ ಝೋನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದ ಅವರು, ಸೆಂಟ್ರಲ್ ಝೋನ್ ತಂಡವನ್ನು 158 ರನ್‌ಗಳಿಗೆ ಕಟ್ಟಿಹಾಕಿದರು. ಈ ಪ್ರದರ್ಶನದ ಮೂಲಕ ಭಾರತ ತಂಡಕ್ಕೆ ಮರಳಲು ತಾವು ಸಿದ್ಧ ಎಂಬ ಸಂದೇಶವನ್ನು ಶಮಿ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 20ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಈಗಾಗಲೇ ಗಂಭೀರ ಚರ್ಚೆಗಳು ಆರಂಭವಾಗಿವೆ ಎಂದು ವರದಿಯಾಗಿದೆ. ಪ್ರಮುಖ ಆಂತರಿಕ ಸಭೆಗಳಲ್ಲಿ ಮಾಜಿ ನಾಯಕ ರೋಹಿತ್ ಶರ್ಮ ಕೂಡ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ರೋಹಿತ್ ಅವರ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನದ ಆಧಾರದ ಮೇಲೆ ಮುಂದಿನ ನಾಯಕನ ಆಯ್ಕೆ ನಡೆಯಲಿದೆ ಎಂಬ ಚರ್ಚೆ ಕೂಡ ಇದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಟೆಸ್ಟ್ ಕೋಚ್ ಸರ್ಫರಾಜ್ ಅಹ್ಮದ್ ಬದಲಿಗೆ ಮೈಕ್ ಹೆಸ್ಸನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬೌಲಿಂಗ್ ಕೋಚ್ ಉಮರ್ ಗುಲ್ ಬದಲಿಗೆ ಆಸ್ಟ್ರೇಲಿಯಾದ ಆಶ್ಲೆ ನಾಫ್ಕೆ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಆಯ್ಕೆ ಸಮಿತಿ ಸದಸ್ಯ ಹಾಗೂ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಕೂಡ ರಾಜೀನಾಮೆ ನೀಡಿದ್ದಾರೆ.
ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಥಾಯ್ಲೆಂಡ್ ವಿರುದ್ಧ 35 ರನ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 119 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ತಂಡದ ಪರ ಮುನೀಬಾ ಅಲಿ 54 ರನ್ ಗಳಿಸಿ ಪ್ರಮುಖ ಬ್ಯಾಟರ್ ಎನಿಸಿಕೊಂಡರು. ಬಳಿಕ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಥಾಯ್ಲೆಂಡ್ ತಂಡವನ್ನು ಕೇವಲ 84 ರನ್‌ಗಳಿಗೆ ಕಟ್ಟಿಹಾಕಿದ ಪಾಕಿಸ್ತಾನ, 35 ರನ್‌ಗಳ ಗೆಲುವು ದಾಖಲಿಸಿತು.

ನೋಡಿರಿ

