ಸಾಲ್ಟ್ Vs ವೆಂಕಿ Vs ಬೆಥೆಲ್! ಕೊಹ್ಲಿ ಜೊತೆ ಯಾರು ಓಪನರ್?
RCBಯಲ್ಲಿ ಕಾಂಬಿನೇಷನ್ ಲೆಕ್ಕಾಚಾರ

ಐಪಿಎಲ್ನಲ್ಲಿ ಇದುವರೆಗೆ ಮೂರು ತಂಡಗಳು ಬ್ಯಾಕ್ ಟು ಬ್ಯಾಕ್ ಟ್ರೋಫಿ ವಿನ್ ಆಗಿವೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು. ಆದ್ರೆ ಯಾವುದೇ ತಂಡ ಕೂಡ ಹ್ಯಾಟ್ರಿಕ್ ವಿಕ್ಟರಿಯ ಇತಿಹಾಸ ಬರೆದಿಲ್ಲ. ಈ ಗೋಲ್ಡನ್ ಆಪರ್ಚುನಿಟಿ ಈಗ ನಮ್ಮ ಆರ್ಸಿಬಿ ಮುಂದಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿರೋ ಬೆಂಗಳೂರು ಮುಂದಿನ ಸೀಸನ್ನಲ್ಲೂ ಟೈಟಲ್ ಗೆದ್ರೆ ಸತತ ಮೂರು ಬಾರಿ ಕಪ್ ಗೆದ್ದ ಚರಿತ್ರೆ ಬರೆಯಲಿದೆ. ಟೀಂ ಕೂಡ ಸೂಪರ್ ಸ್ಟ್ರಾಂಗ್ ಆಗಿ ಇರೋದ್ರಿಂದ ಗೆಲುವಿನ ಫೇವರೆಟ್ ಟೀಂ ಕೂಡ. ಆದ್ರೆ ಇಲ್ಲಿ ಇರುವಂಥ ಪ್ರಶ್ನೆ ಓಪನರ್ಸ್ ಯಾರು? ಒನ್ ಸೈಡ್ ಅಂತೂ ಕಿಂಗ್ ವಿರಾಟ್ ಕೊಹ್ಲಿ ಇದ್ದೇ ಇರ್ತಾರೆ. ಬಟ್ ಅವ್ರ ಜೊತೆ ಪಾರ್ಟ್ನರ್ ಯಾರು ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: HITಮ್ಯಾನ್ ಕೈಯಲ್ಲಿ MI ಕ್ಯಾಪ್ಟನ್ಸಿ – ಪಟ್ಟ ಬಿಟ್ಟು ಪ್ಲೇಯರ್ ಆದ ಪಾಂಡ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಡೇ ಒನ್ನಿಂದಲೂ ಆಡ್ತಿರೋ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಟೂರ್ನಿಯಲ್ಲೇ ಹೈಯೆಸ್ಟ್ ರನ್ ಸ್ಕೋರರ್, ಹೈಯೆಸ್ಟ್ ಸೆಂಚುರಿ ಹೀಗೆ ಹಲವು ದಾಖಲೆಗಳ ಸರದಾರನೂ ಹೌದು. ಹಾಗೇ ಆರ್ಸಿಬಿ ಪರ ಕಳೆದ ಆವೃತ್ತಿಯಲ್ಲೂ ಅತೀ ಹೆಚ್ಚು ರನ್ ಗಳಿಸಿದ ಪ್ಲೇಯರ್. ಹೀಗಾಗಿ ಕೊಹ್ಲಿ ಐಪಿಎಲ್ನಲ್ಲಿ ಇರೋವರೆಗೂ ಆರ್ಸಿಬಿಯ ಓಪನರ್ ಸ್ಲಾಟ್ ಫಿಕ್ಸ್.. ಆದ್ರೆ ಮುಂದಿನ ಆವೃತ್ತಿಗೆ ಕೊಹ್ಲಿ ಜೊತೆ ಯಾರು ಮತ್ತೊಬ್ಬ ಓಪನರ್ ಅಂದರೆ ಮೂವರ ಹೆಸರು ರೇಸ್ನಲ್ಲಿದೆ. ಕಳೆದ ಆವೃತ್ತಿಯಲ್ಲಿ ಕೊಹ್ಲಿ ಜೊತೆ ಮೂವರು ಇನ್ನಿಂಗ್ಸ್ ಆರಂಭಿಸಿದ್ರು. ಈಗ ಆ ಮೂವರಲ್ಲಿ ಯಾರನ್ನ ಫೈನಲ್ ಮಾಡ್ಬೇಕು ಅನ್ನೋ ತಲೆಬಿಸಿ ಶುರುವಾಗಿದೆ. ಯಾಕೆ ಅನ್ನೋದನ್ನ ನೋಡ್ತಾ ಹೋಗೋಣ.
ನಂಬರ್ 1, ಫಿಲ್ ಸಾಲ್ಟ್!
2025ರಲ್ಲಿ ಬೆಂಗಳೂರು ಟೀಂ ಟ್ರೋಫಿ ಗೆಲುವಿನಲ್ಲಿ ಒನ್ ಆಫ್ ದಿ ರೀಸನ್ ಫಿಲ್ ಸಾಲ್ಟ್. ಇಂಗ್ಲೆಂಡ್ ಮೂಲದ ಸಾಲ್ಟ್ ಕೊಹ್ಲಿ ಇನ್ನಿಂಗ್ಸ್ ಓಪನ್ ಮಾಡ್ತಿದ್ರು. ಆದ್ರೆ 2026ರಲ್ಲಿ ಇಂಜುರಿ ಕಾರಣಕ್ಕೆ ಹಲವು ಪಂದ್ಯಗಳನ್ನ ಮಿಸ್ ಮಾಡಿಕೊಂಡ್ರು. 2026ರಲ್ಲಿ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 202 ರನ್ ಕಲೆ ಹಾಕಿದ್ರು. 33.66ರ ಸರಾಸರಿ ಮತ್ತು 168ಕ್ಕೂ ಹೆಚ್ಚಿನ ಸ್ಟ್ರೈಕ್ ನಲ್ಲಿ ಬ್ಯಾಟ್ ಬೀಸಿದ್ರು. 78 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಕೊಹ್ಲಿ ಜೊತೆ ಸಾಲ್ಟ್ ಆಡಿದ್ರೆ ಆರ್‌ಸಿಬಿಗೆ ಸ್ಫೋಟಕ ಕಾಂಬಿನೇಷನ್. ಹೀಗಾಗಿ ಮತ್ತೆ ಸಾಲ್ಟ್ ಜೊತೆಗೆ ಫ್ರಾಂಚೈಸಿ ಹೋಗ್ತಾರಾ ಅನ್ನೋ ಪ್ರಶ್ನೆ ಇದೆ.
ನಂಬರ್ 2 – ವೆಂಕಟೇಶ್ ಅಯ್ಯರ್
2026ರ ಸೀಸನ್ ಬಳಿಕ ಕೊಹ್ಲಿ ಜೊತೆ ಮುಂದಿನ ಆವೃತ್ತಿಗೆ ವೆಂಕಟೇಶ್ ಅಯ್ಯರ್ ಹೆಸರೂ ಕೂಡ ಓಪನರ್ ರೇಸ್ನಲ್ಲಿದೆ. 2026ರಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಓಪನರ್ ಆಗಿದ್ದು 158 ರನ್ಸ್ ಕಲೆ ಹಾಕಿದ್ರು. ಅದೂ ಕೂಡ 79ರ ಸರಾಸರಿಯಲ್ಲಿ. 177+ ಸ್ಟ್ರೈಕ್ ರೇಟ್ ಕೂಡ ಇದೆ. ಒಟ್ಟಾರೆಯಾಗಿ 6 ಇನ್ನಿಂಗ್ಸ್‌ಗಳಿಂದ 209 ರನ್ ಕಲೆಹಾಕಿದ್ರು. ಅವಕಾಶ ಸಿಕ್ಕಾಗಲೆಲ್ಲಾ ವೆಂಕಟೇಶ್ ದೊಡ್ಡ ಇಂಪ್ಯಾಕ್ಟ್ ನೀಡಿದರು. ಅವ್ರ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಬ್ಯಾಟಿಂಗ್ ಮಾತ್ರವಲ್ಲ, ಅಗತ್ಯವಿದ್ದರೆ ಬೌಲಿಂಗ್ ಆಯ್ಕೆಯನ್ನೂ ನೀಡಬಲ್ಲ ಆಲ್‌ರೌಂಡರ್ ಆಗಿದ್ದಾರೆ.
ನಂಬರ್ 3 – ಜೇಕಬ್ ಬೆಥೆಲ್
ಇನ್ನು ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಓಪನರ್ ಆಗಿದ್ದ ಮತ್ತೊಬ್ಬ ಆಟಗಾರ ಜೇಕಬ್ ಬೆಥೆಲ್. ಫಿಲ್ ಸಾಲ್ಟ್ ಇಂಜುರಿಯಾದಾಗ ಸತತವಾಗಿ ಬೆಥೆಲ್ ಗೆ ಓಪನರ್ ಆಗಿ ಚಾನ್ಸ್ ನೀಡಲಾಗಿತ್ತು. ಆದ್ರೆ ಅವಕಾಶ ಸಿಕ್ರೂ ಬೆಥೆಲ್ ಕಡೆಯಿಂದ ಬೆಸ್ಟ್ ಇನ್ನಿಂಗ್ಸ್ ಬರಲಿಲ್ಲ. 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ಬೆಥೆಲ್ ಒಟ್ಟಾರೆಯಾಗಿ ಕಲೆ ಹಾಕಿದ್ದೇ 96 ರನ್. ಹೀಗಾಗಿ 2026ರ ಪ್ರದರ್ಶನದ ಆಧಾರದಲ್ಲಿ ನೋಡಿದರೆ ಬೆಥೆಲ್ಗಿಂತ ಸಾಲ್ಟ್ ಮತ್ತು ವೆಂಕಟೇಶ್ ಅಯ್ಯರ್ ಅವ್ರನ್ನ ಆಯ್ಕೆ ಮಾಡೋದೇ ಬೆಸ್ಟ್ ಇದೆ. ಆದ್ರೆ ಇಲ್ಲಿ ಇನ್ನೂ ಒಂದು ಟ್ವಿಸ್ಟ್ ಇದೆ.
ರನ್ಸ್ ಮಾತ್ರ ಪರಿಗಣಿಸಬೇಕಾ.. ಕಾಂಬಿನೇಷನ್ ಕೂಡ ಮುಖ್ಯನಾ?
ಹೌದು. ವಿರಾಟ್ ಕೊಹ್ಲಿ ಜೊತೆ ಯಾರು ಇನ್ನಿಂಗ್ಸ್ ಓಪನ್ ಮಾಡ್ತಾರೆ ಅಂತಾ ನೋಡುವಾಗ ರನ್ಸ್ ಅಷ್ಟೇ ನೋಡಬೇಕಾ ಅಥವಾ ತಂಡದ ಕಾಂಬಿನೇಷನ್ ನೋಡಬೇಕಾ ಅನ್ನೋದು. ಒಂದ್ಕಡೆ ಕೊಹ್ಲಿ ಆಂಕರ್ ರೋಲ್ನಲ್ಲಿ ಕಂಟಿನ್ಯೂ ಆದ್ರೆ ಸಾಲ್ಟ್‌ನಂತಹ ಪವರ್‌ಪ್ಲೇ ಅಟ್ಯಾಕರ್ ಹೆಚ್ಚು ಸೂಕ್ತ. ಆದ್ರೆ ಕೊಹ್ಲಿಗೆ ಜೊತೆಯಾಗಿ ಎಡಗೈ-ಬಲಗೈ ಬ್ಯಾಟಿಂಗ್ ಕಾಂಬಿನೇಷನ್, ವೇಗದ ರನ್‌ಗಳು ಮತ್ತು ಹೆಚ್ಚುವರಿ ಆಲ್‌ರೌಂಡಿಂಗ್ ಆಯ್ಕೆ ಬೇಕಾದರೆ ವೆಂಕಟೇಶ್ ಅಯ್ಯರ್ ಕೂಡ ಬೆಸ್ಟ್ ಚಾಯ್ಸ್.. ಕೊಹ್ಲಿ + ಸಾಲ್ಟ್ ಜೊತೆಯಾದ್ರೆ ಅನುಭವ ಮತ್ತು ಪವರ್‌ಪ್ಲೇಪವರ್ ಶೋ ಇರುತ್ತೆ. ಅಥವಾ ಕೊಹ್ಲಿ + ವೆಂಕಟೇಶ್ ಅಯ್ಯರ್ ಅಂತಾ ನೋಡಿದ್ರೆ ಫಾರ್ಮ್, ಅಗ್ರೆಶನ್ ಹಾಗೇ ಆಲ್‌ರೌಂಡರ್ ಆಪ್ಶನ್ ಹೆಚ್ಚಾಗುತ್ತೆ. ಸೋ ಈಗ ಬೆಥೆಲ್ಗಿಂತ ಸಾಲ್ಟ್ ಮತ್ತು ವೆಂಕಿ ನಡುವೆಯೇ ಸ್ಟ್ರಾಂಗ್ ಫೈಟ್ ಇದೆ. ಸೋ ನಿಮ್ಮ ಪ್ರಕಾರ 2027ರ ಐಪಿಎಲ್ಗೆ ಕೊಹ್ಲಿ ಜೊತೆ ಯಾರು ಇನ್ನಿಂಗ್ಸ್ ಓಪನ್ ಮಾಡಿದ್ರೆ ಬೆಟರ್ ಅನ್ನೋದನ್ನ ಕಮೆಂಟ್ಸ್ ಮೂಲಕ ತಿಳಿಸಿ. ಹಾಗೇ ಸುದ್ದಿಯಾನ ಫಾಲೋ ಮಾಡಿ.

ನೋಡಿರಿ

