ವೈಭವ್ ಬಂದ್ಮೇಲೆ ಅಭಿಷೇಕ್ ಡಲ್?- AFG ಸರಣಿಯಲ್ಲಿ ಧೂಳೆಬ್ಬಿಸ್ತಾರಾ?

ಆಫ್ಘನಿಸ್ತಾನ ವಿರುದ್ಧದ ಟಿ-20ಐ ಸರಣಿಯಲ್ಲಿ ಎಲ್ಲರ ಕಣ್ಣೂ ಕೂಡ ಭಾರತದ ಓಪನಿಂಗ್ ಜೋಡಿಯ ಮೇಲೇ ಇದೆ. ಸ್ಫೋಟಕ ಹಿಟ್ಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿಯ ಸಿಡಿಲಾರ್ಭಟ ನೋಡೋಕೆ ಕಾಯ್ತಿದ್ದಾರೆ. ಯಾಕಂದ್ರೆ ಹಿಂದಿನ ಮ್ಯಾಚ್ಗಳಲ್ಲಿ ಇವ್ರಿಬ್ಬರ ಪಾರ್ಟ್ನರ್ಶಿಪ್ ಅಷ್ಟೇನು ವರ್ಕ್ ಆಗಿಲ್ಲ. ಆಫ್ಘನ್ ವಿರುದ್ಧ ರಿಯಲ್ ಖದರ್ ತೋರಿಸ್ತಾರಾ ಅಂಥಾ ಎಕ್ಸೈಟ್ ಆಗಿದ್ದಾರೆ.
2024ರಲ್ಲಿ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ಕಾಲಿಟ್ಟ ಮೇಲೆ ಟಿ-20ಐ ಫಾರ್ಮೆಟ್ನ ಮೋಸ್ಟ್ ಡೇಂಜರಸ್ ಬ್ಯಾಟರ್ ಆಗಿದ್ರು. ಫಸ್ಟ್ ಬಾಲ್ನಿಂದಲೇ ಬಿಗ್ ಹಿಟ್ ಬಾರಿಸುತ್ತಾ ಬೌಲರ್ಗಳನ್ನ ಚೆಂಡಾಡಿದ್ರು. ಕ್ರಿಕೆಟ್ ಜಗತ್ತೇ ಅವ್ರ ಬಗ್ಗೆ ಮಾತಾಡೋಕೆ ಶುರು ಮಾಡಿತ್ತು. ಈಗ ಅಭಿಷೇಕ್ರನ್ನೂ ಮೀರಿಸೋ ಹಾಗೇ ವೈಭವ್ ಸೂರ್ಯವಂಶಿ ಧೂಳೆಬ್ಬಿಸ್ತಿದ್ದಾರೆ. ಜಸ್ಟ್ 15 ವರ್ಷದಲ್ಲೇ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ. ಭಾರತದ ಫರ ಈ ಓಪನಿಂಗ್ ಜೋಡಿಯೇ ಹೈಲೆಟ್ ಆಗಿದ್ದು ಸೆಪ್ಟೆಂಬರ್ 13ರಿಂದ ಆರಂಭವಾಗಲಿರುವ ಆಫ್ಘನಿಸ್ತಾನ ವಿರುದ್ಧದ ಸರಣಿಯಲ್ಲೂ ಇವ್ರ ಪ್ರದರ್ಶನವೇ ಹೈಲೆಟ್ ಆಗಲಿದೆ.
ಆಫ್ಘನ್ ಸರಣಿಯಲ್ಲಿ ಸಿಡಿಯುತ್ತಾರಾ ಭಾರತದ ಡೇಂಜರಸ್ ಜೋಡಿ?
ಅಭಿಷೇಕ್ ಮತ್ತು ವೈಭವ್ ಇಬ್ಬರೂ ಪವರ್ ಹಿಟ್ಟರ್ಗಳೇ. ಭಾರತ ಟಿ20 ಕ್ರಿಕೆಟ್ ತಂಡದಲ್ಲಿ ಸ್ಪೋಟಕ ಆರಂಭಿಕ ಜೋಡಿಯಾಗಿದ್ದು ಭಾರತದ ಪರ ಈಗಾಗಲೇ 6 ಟಿ20 ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸ ಹಾಗೂ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗಳಲ್ಲಿ ಓಪನರ್ಗಳಾಗಿ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಇವರಿಬ್ಬರು ಕೇವಲ 4.5 ಓವರ್‌ಗಳಲ್ಲಿ 50 ರನ್‌ಗಳ ಜೊತೆಯಾಟವಾಡಿದ್ದರು. ಌಂಡ್ ಇಲ್ಲಿ ಶಾಕಿಂಗ್ ವಿಚಾರ ಅಂದ್ರೆ ಸೂರ್ಯವಂಶಿ ಓಪನರ್ ಆಗಿ ಬಂದ್ಮೇಲೆ ಅಭಿಷೇಕ್ ಸ್ವಲ್ಪ ಡಲ್ ಆಡಿದ್ದಾರೆ. 6 ಪಂದ್ಯಗಳಲ್ಲಿ ಇವ್ರಿಬ್ಬರು ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ದು ಈ ಪೈಕಿ ವೈಭವ್ ಸೂರ್ಯವಂಶಿ 193 ರನ್ಗಳನ್ನ ಕಲೆ ಹಾಕಿದ್ದಾರೆ. ಜಿಂಬಾಬ್ವೆ ವಿರುದ್ಧ 81 ರನ್ಸ್ ಕಲೆ ಹಾಕಿದ್ದು ಸೂರ್ಯವಂಶಿ ಇಂಡಿವಿಶ್ಯುಯಲ್ ಹೈಯೆಸ್ಟ್ ಸ್ಕೋರ್. ಅದೇ ಅಭಿಷೇಕ್ ಶರ್ಮಾ ಸೂರ್ಯವಂಶಿ ಜೊತೆಗಿನ 6 ಇನ್ನಿಂಗ್ಸ್ಗಳಲ್ಲಿ 73 ರನ್ಸ್ ಅಷ್ಟೇ ಕಲೆ ಹಾಕಿರೋದು. ಹಾಗೇ ಇಂಗ್ಲೆಂಡ್ ವಿರುದ್ಧ 43 ರನ್ ಗಳಿಸಿದ್ದೇ ಅಭಿಷೇಕ್ ಹೈಯೆಸ್ಟ್ ಸ್ಕೋರ್. ಸೋ ಇವ್ರಿಬ್ಬರ ಪಾರ್ಟ್ನರ್ಶಿಪ್ನಲ್ಲಿ ಒಂದಂತೂ ಕ್ಲಿಯರ್ ಆಗಿದೆ. ಒಬ್ರು ಚೆನ್ನಾಗಿ ಆಡಿದ್ರೂ ಮತ್ತೊಬ್ರು ಕಡೆಯಿಂದ ಸಪೋರ್ಟ್ ಸಿಗ್ತಿಲ್ಲ ಅನ್ನೋದು. ಆದ್ರೆ ಈಗ ಇಬ್ಬರೂ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮಿಂಚಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ವೈಭವ್ ಅಬ್ಬರಿಸಿದ್ರೆ ಪಂಜಾಬ್ ಎ ಶೇರ್ ಲೀಗ್ನಲ್ಲಿ ಅಭಿಷೇಕ್ ಆರ್ಭಟಿಸಿದ್ದಾರೆ. ಹೀಗಾಗಿ ಆಫ್ಘನ್ ವಿರುದ್ಧದ ಸರಣಿಯಲ್ಲೂ ಇವ್ರಿಬ್ಬರ ಕಾಂಬಿನೇಷನ್ ವರ್ಕ್ ಆಗುತ್ತೆ ಅನ್ನೋ ನಿರೀಕ್ಷೆ ಇದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಸಾಕಷ್ಟು ವಿಚಾರಗಳಲ್ಲಿ ಇಬ್ಬರಿಗೂ ಮ್ಯಾಚ್ ಆಗುತ್ತೆ. ಹೇಗೆ ಅನ್ನೋದನ್ನ ನೋಡ್ತಾ ಹೋಗೋಣ.
ಅಭಿ & ವೈಭವ್ ಇಬ್ಬರೂ ಕೂಡ ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್
ಮೊದಲ ಬಾಲ್ ನಿಂದಲೇ ಪಂದ್ಯವನ್ನು ಬದಲಿಸುವ ಸಾಮರ್ಥ್ಯ
ಅಗ್ರೆಸ್ಸಿವ್ ಇಂಟೆಂಟ್ ಇದ್ದು ಬೌಂಡರಿ ಹಿಟ್ಟಿಂಗ್ ಮೇಲೆ ಒತ್ತು
ಪವರ್ ಪ್ಲೇ ಸ್ಪೆಷಲಿಸ್ಟ್ ಗಳಾಗಿದ್ದು ಸಿಕ್ಸ್, ಫೋರ್ ಟಾರ್ಗೆಟ್
ಇಬ್ಬರಲ್ಲಿ ಯಾರೇ ಬೇಗ ಔಟ್ ಆದ್ರೂ ರನ್ಸ್ ನಲ್ಲಿ ಕುಸಿತ
ಹೆಚ್ಚು ಬಾಲ್ ವೇಸ್ಟ್ ಮಾಡದೆ ಕಡಿಮೆ ಎಸೆತಗಳಲ್ಲಿ ಔಟ್
ಇಬ್ಬರಲ್ಲೂ ಕೂಡ Slow left-arm orthodox ಬೌಲಿಂಗ್ ಸ್ಕಿಲ್
ಐಪಿಎಲ್ ಮತ್ತು ಡೊಮೆಸ್ಟಿಕ್ ನಲ್ಲಿ ಅಬ್ಬರಿಸಿ ಭಾರತಕ್ಕೆ ಡೆಬ್ಯೂ
ಹೀಗೆ ಅಭಿಷೇಕ್ ಮತ್ತು ವೈಭವ್ ಇಬ್ಬರೂ ಕೂಡ ಭಾರತದ ಡೇಂಜರಸ್ ಲೆಫ್ಟ್ ಹ್ಯಾಂಡ್ ಬ್ಯಾಟರ್ಗಳೇ. ಆಲ್ರೆಡಿ ಅಭಿಷೇಕ್ಗೆ ಭಾರತದ ಪರ ಕಳೆದ 2 ವರ್ಷಗಳಿಂದ ಆಡಿರುವಂಥ ಅನುಭವ ಇದೆ. ಏಷ್ಯಾಕಪ್, ಐಸಿಸಿ ಟೂರ್ನಮೆಂಟ್ನಲ್ಲೂ ಆಡಿದ್ದಾರೆ. ಮತ್ತೊಂದೆಡೆ ವೈಭವ್ ಈಗಷ್ಟೇ ಭಾರತದ ಪರ ಕೆರಿಯರ್ ಸ್ಟಾರ್ಟ್ ಮಾಡಿದ್ದು ಸಾಕಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡ್ಬೇಕಿದೆ. ಌಂಡ್ ಇದೆಲ್ಲಕ್ಕಿಂತ ಮುಖ್ಯವಾಗಿ ಈ ಇಬ್ಬರ ಓಪನಿಂಗ್ ಪೇರ್ ಮುಂದೊಂದು ದಿನ ಜಗತ್ತಿನ ಮೋಸ್ಟ್ ಡೇಂಜರಸ್ ಟಿ-20ಐ ಓಪನರ್ಸ್ ಆಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

