HITಮ್ಯಾನ್ ಕೈಯಲ್ಲಿ MI ಕ್ಯಾಪ್ಟನ್ಸಿ – ಪಟ್ಟ ಬಿಟ್ಟು ಪ್ಲೇಯರ್ ಆದ ಪಾಂಡ್ಯ

2027ರ ಐಪಿಎಲ್ಗೂ ಮುನ್ನ ಮುಂಬೈ ಇಂಡಿಯನ್ಸ್ನಿಂದ ಹಾರ್ದಿಕ್ ಪಾಂಡ್ಯ ಹೊರಬಂದ್ರೂ ಬಾರದೇ ಇದ್ರೂ ಕ್ಯಾಪ್ಟನ್ಸಿ ಬದಲಾವಣೆ ಆಗೋದಂತೂ ಕನ್ಫರ್ಮ್ ಆಗಿದೆ. ಌಂಡ್ ಈಗ ಕ್ಯಾಪ್ಟನ್ ರೇಸ್ನಲ್ಲಿ ರೋಹಿತ್ ಶರ್ಮಾ ಹೆಸರೂ ಮುನ್ನಲೆಗೆ ಬಂದಿದೆ.
ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಟೀಂ ಮುಂಬೈ ಇಂಡಿಯನ್ಸ್ನಲ್ಲಿ ಕಳೆದ ಮೂರು ವರ್ಷಗಳಿಂದ ಗೊಂದಲಗಳೇ ಜಾಸ್ತಿ. ಟೀಂ ಇಂಡಿಯಾ ಪರ ಆಡುವ ಸ್ಟಾರ್ ಪ್ಲೇಯರ್ಗಳ ದಂಡೇ ಇದ್ರೂ ಆನ್ಫೀಲ್ಡ್ನಲ್ಲಿ ಮಾತ್ರ ಗೆಲುವಿನ ರಿಸಲ್ಟ್ ಬರ್ತಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯೇ ದೊಡ್ಡ ಬಿರುಕು ಮೂಡಿಸಿದೆ. ಕೊನೆಗೂ ಎಚ್ಚೆತ್ತಿರೋ ಅಂಬಾನಿ ಬ್ರಿಗೇಡ್ ಇದಕ್ಕೆಲ್ಲಾ ತೆರೆ ಎಳೆಯೋಕೆ ಮುಂದಾಗಿದೆ.
ಇದನ್ನೂ ಓದಿ: IPLಗೆ ಇಂಪ್ಯಾಕ್ಟ್ ಪ್ಲೇಯರ್ ಭಾರ – ಬ್ಯಾನ್ ಆಗಬೇಕಾ.. ಬದಲಾವಣೆ ಸಾಕಾ?
20ನೇ ಸೀಸನ್ ಗೆ ಮುಂಬೈ ಇಂಡಿಯನ್ಸ್ ಗೆ ಹೊಸ ನಾಯಕ!
2026ರ ಐಪಿಎಲ್ ಬಳಿಕ ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೇರೆ ಟೀಂ ಸೇರ್ತಾರೆ ಅನ್ನೋ ಸುದ್ದಿ ಇದ್ದೇ ಇದೆ. ಹಾಗೇ ಚೆನ್ನೈ, ಡೆಲ್ಲಿ, ರಾಜಸ್ಥಾನ, ಕೊಲ್ಕತ್ತಾ ತಂಡಗಳು ಟ್ರೇಡಿಂಗ್ ಡೀಲ್ ನಡೆಸುತ್ತಿರೋ ಅನ್ನೋ ವರದಿಗಳೂ ಆಗಿದ್ವು. ಆದ್ರೆ ಈಗ ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡುವ ವಹಿವಾಟು ನಡೆಯದೇ ಇದ್ರೂ ಅವ್ರು ಮುಂಬೈ ತಂಡದಲ್ಲೇ ಕಂಟಿನ್ಯೂ ಆಗ್ಬೋದು. ಬಟ್ ಈ ಸಲ ನಾಯಕನಾಗಿ ಅಲ್ಲ ಕೇವಲ ಆಟಗಾರನಾಗಿ ಅನ್ನೋ ಕ್ಲಿಯರ್ ಮೆಸೇಜ್ ಪಾಸ್ ಆಗಿದೆ. ಹಾಗೆ ಹೊಸ ನಾಯಕನ ಚೆಂಡು ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂಗಳಕ್ಕೆ ಬಿದ್ದಿದೆ.
ಕ್ಯಾಪ್ಟನ್ಸಿ ಒಪ್ಪಿಕೊಳ್ತಾರಾ.. ಹೊಸ ನಾಯಕನ ಘೋಷಿಸ್ತಾರಾ ರೋಹಿತ್?
ಮುಂಬೈ ಇಂಡಿಯನ್ಸ್ ತಂಡವನ್ನ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿ ಇತಿಹಾಸ ಬರೆದ ಅತ್ಯಂತ ಯಶಸ್ವೀ ನಾಯಕ ರೋಹಿತ್ ಶರ್ಮಾ. ಆದ್ರೆ ಮುಂಬೈ ಫ್ರಾಂಚೈಸಿ ಇದೇ ರೋಹಿತ್ ಶರ್ಮಾರನ್ನ 2024ರ ಐಪಿಎಲ್ಗೂ ಮುನ್ನ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯರನ್ನ ನಾಯಕನನ್ನಾಗಿ ಮಾಡಿತ್ತು. ಈ ಬದಲಾವಣೆ ಬಳಿಕ ಮುಂಬೈಗೆ ಪಾಸಿಟಿವ್ ಗಿಂತ ನೆಗೆಟಿವ್ ಆಗಿದ್ದೇ ಹೆಚ್ಚು. ಹೀಗಾಗಿ ಅಲರ್ಟ್ ಆಗಿರುವ ಅಂಬಾನಿ ಬ್ರಿಗೇಡ್ ಹೊಸ ನಾಯಕನ ಆಯ್ಕೆಗೆ ಮುಂದಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರದಲ್ಲಿ ರೋಹಿತ್ ಶರ್ಮಾಗೇ ಜವಾಬ್ದಾರಿ ನೀಡಲಾಗಿದೆ. ಮತ್ತೆ ಕ್ಯಾಪ್ಟನ್ ಆಗ್ತೀರಾ ಎನ್ನುವ ಆಡಳಿತ ಮಂಡಳಿಯ ಆಫರ್ನ ಧಿಕ್ಕರಿಸಿರುವ ರೋಹಿತ್ ಶರ್ಮಾ ನನಗೆ ನಾಯಕತ್ವದ ಇಂಟ್ರೆಸ್ಟ್ ಇಲ್ಲ ಅಂತಾ ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ ಫ್ರಾಂಚೈಸಿಯು ಮುಂದಿನ ಕ್ಯಾಪ್ಟನ್ ಯಾರನ್ನ ಮಾಡಬಹುದು ಅನ್ನೋ ಬಗ್ಗೆ ರೋಹಿತ್ ಶರ್ಮಾರನ್ನ ಒಳಗೊಂಡಂತೆ ಸಭೆ ನಡೆಸಿದ್ದಾರೆ. ಈ ವೇಳೆ ತಿಲಕ್ ವರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ರೇಸ್ ನಡೀತಿದ್ದು ಆಲ್ಮೋಸ್ಟ್ ತಿಲಕ್ಗೆ ಪಟ್ಟ ಕಟ್ಟುವ ಸಾಧ್ಯತೆಗಳಿವೆ. ಜಸ್ಪ್ರೀತ್ ಬುಮ್ರಾ ಪದೇಪದೆ ಇಂಜುರಿ ಮತ್ತು ಫಿಟ್ನೆಸ್ ಇಲ್ಲದೆ ಹೊರಗುಳಿಯೋದ್ರಿಂದ ಫ್ಯೂಚರ್ ದೃಷ್ಟಿಯಿಂದಲೂ ತಿಲಕ್ ಬೆಸ್ಟ್ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಸೂರ್ಯಕುಮಾರ್ ರನ್ನೂ ಬಿಟ್ಟು ಕೊಡದ ಫ್ರಾಂಚೈಸಿ..!
ಇನ್ನು ಇದೆಲ್ಲದರ ನಡುವೆ ಟಿ-20 ವಿಶ್ವಕಪ್ ಚಾಂಪಿಯನ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ರನ್ನ ಮುಂಬೈ ಫ್ರಾಂಚೈಸಿ ಬಿಟ್ಟುಕೊಡ್ಬೋದು ಅನ್ನೋ ಸುದ್ದಿ ಹರಿದಾಡಿತ್ತು. ಯಾಕಂದ್ರೆ 2026ರ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ 2027ರ ಐಪಿಎಲ್ಗೂ ಮುನ್ನ ತಂಡದಿಂದ ಕೈಬಿಡೋ ಬಗ್ಗೆ ಚರ್ಚೆಗಳಾಗುತ್ತಿತ್ತು. ಆದ್ರೆ ಇದೆಲ್ಲವನ್ನೂ ಮೀರಿ 35 ವರ್ಷ ವಯಸ್ಸಿನ ಸೂರ್ಯನನ್ನ ಮುಂಬೈ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ಅವರ ಸೀಸನ್ ಚೆನ್ನಾಗಿರಲಿಲ್ಲ, ಆದರೆ ಅದಕ್ಕೂ ಹಿಂದಿನ ಸೀಸನ್ ಬಗ್ಗೆ ಏನು? ಮುಂಬೈ ಒಂದು ಋತುವಿನ ಆಧಾರದ ಮೇಲೆ ಆಟಗಾರನನ್ನು ಕೈಬಿಡುವುದಿಲ್ಲ, ಮತ್ತು ಅವರು ಕಾರ್ಯನಿರ್ವಹಿಸುವ ರೀತಿ ಹಾಗಲ್ಲ. ಅವರು ಒನ್ ಫ್ಯಾಮಿಲಿ ಟ್ಯಾಗ್‌ನಲ್ಲಿ ಹೆಮ್ಮೆಪಡುತ್ತಾರೆ ಮತ್ತು ಅದರ ಮೇಲೆ ಪ್ರಮಾಣ ಮಾಡುತ್ತಾರೆ ಎಂದು ಫ್ರಾಂಚೈಸಿಯ ಮೂಲಗಳು ತಿಳಿಸಿವೆ. ಮತ್ತೊಂದ್ಕಡೆ ಮಹೇಲಾ ಜಯವರ್ಧನೆ ಇನ್ನೊಂದು ವರ್ಷ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಒಟ್ನಲ್ಲಿ ಮುಂಬೈ ಇಂಡಿಯನ್ಸ್ನಲ್ಲಿ ಸ್ಟಾರ್ ಆಟಗಾರರೇ ಹೊರಬರ್ತಾರೆ ಅನ್ನೋ ಪ್ರಶ್ನೆಗಳ ನಡುವೆ ಕ್ಯಾಪ್ಟನ್ ಮಾತ್ರ ಚೇಂಜ್ ಆಗ್ತಾರೆ ಅನ್ನೋ ರಿಪೋರ್ಟ್ ಬರ್ತಿದೆ. ಹೀಗಾಗಿ 20ನೇ ಆವೃತ್ತಿಗೆ ಮುಂಬೈ ಹೊಸ ನಾಯಕನಡಿ ಕಣಕ್ಕಿಳಿಯೋದು ಪಕ್ಕಾ. ನಮಸ್ಕಾರ.

ನೋಡಿರಿ

