ಶ್ರೀ ಕೃಷ್ಣದೇವರಾಯನಾಗಿ ಸುದೀಪ್ – ಬರ್ತ್‌ಡೇಗೆ ಫ್ಯಾನ್ಸ್‌ಗೆ ಕಿಚ್ಚನ ಸರ್ಪೈಸ್

ಶ್ರೀ ಕೃಷ್ಣದೇವರಾಯನಾಗಿ ಸುದೀಪ್ – ಬರ್ತ್‌ಡೇಗೆ  ಫ್ಯಾನ್ಸ್‌ಗೆ ಕಿಚ್ಚನ ಸರ್ಪೈಸ್

ಚ್ಚ ಸುದೀಪ್‌ ಅಭಿಮಾನಿಗಳಿಗೆ ಇವತ್ತು ಡಬಲ್‌ ಧಮಾಕಾ! ಒಂದು ಕಡೆ ಕಿಚ್ಚನ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ರೆ, ಮತ್ತೊಂದೆಡೆ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯ್ತಿದ್ದ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಸ್ಪೆಷಲ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಸುದೀಪ್‌ ಅವರ ಬರ್ತ್‌ಡೇಯನ್ನ ಮತ್ತಷ್ಟು ವಿಶೇಷವಾಗಿಸಲು ಸಿನಿಮಾ ತಂಡ ಈ ಪೋಸ್ಟರ್‌ ಮೂಲಕ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌ ನೀಡಿದೆ. ಪೋಸ್ಟರ್‌ ಬಿಡುಗಡೆಯಾಗ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಪ್ರದೂಷ್ ಮಾಫಿ ಸಾಕ್ಷಿ ಭಯದಲ್ಲಿ ಡಿ ಗ್ಯಾಂಗ್ – ರೇಣುಕಾಸ್ವಾಮಿ ಕೊ*ಲೆ ಸಂಪೂರ್ಣ ರಹಸ್ಯ ಬಯಲಾಗುತ್ತಾ?

‘ಬಿಲ್ಲ ರಂಗ ಬಾಷಾ’ ಸಿನಿಮಾ ಘೋಷಣೆಯಾದಾಗಿನಿಂದಲೇ ಸುದೀಪ್‌ ಅವರ ಪಾತ್ರ, ಲುಕ್‌ ಮತ್ತು ಕಥೆಯ ಬಗ್ಗೆ ಸಾಕಷ್ಟು ಕುತೂಹಲ ಇದೆ. ಇದೀಗ ಬಿಡುಗಡೆಯಾಗಿರುವ ಸ್ಪೆಷಲ್‌ ಪೋಸ್ಟರ್‌ ಆ ನಿರೀಕ್ಷೆಗೆ ಮತ್ತಷ್ಟು ಬೆಂಕಿ ಹಚ್ಚಿದೆ.

ವಿಶೇಷವಾಗಿ ಕಿಚ್ಚನ ಸ್ಟೈಲಿಶ್‌ ಲುಕ್‌ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಸಿನಿಮಾದಲ್ಲಿ ಸುದೀಪ್‌ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಶ್ರೀ ಕೃಷ್ಣದೇವರಾಯನಾಗಿ ಸುದೀಪ್  ಕಾಣಿಸುತ್ತಿದ್ದಾರೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.

ಇನ್ನು ಬರ್ತ್‌ಡೇ ದಿನವೇ ಪೋಸ್ಟರ್‌ ರಿಲೀಸ್‌ ಮಾಡಿರುವುದು ಅಭಿಮಾನಿಗಳಿಗೆ ಮತ್ತೊಂದು ವಿಶೇಷ ಸಂಭ್ರಮ. ಸಿನಿಮಾ ಯಾವಾಗ ತೆರೆಗೆ ಬರಲಿದೆ? ಸುದೀಪ್‌ ಅವರ ಪಾತ್ರದ ವಿಶೇಷತೆ ಏನು? ಅನ್ನೋ ಪ್ರಶ್ನೆಗಳಿಗೆ ಮುಂದಿನ ಅಪ್‌ಡೇಟ್‌ಗಳಲ್ಲಿ ಉತ್ತರ ಸಿಗಬೇಕಿದೆ.

ಒಟ್ಟಿನಲ್ಲಿ, ಕಿಚ್ಚ ಸುದೀಪ್‌ ಹುಟ್ಟುಹಬ್ಬದ ದಿನ ‘ಬಿಲ್ಲ ರಂಗ ಬಾಷಾ’ ಸ್ಪೆಷಲ್‌ ಪೋಸ್ಟರ್‌ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಎಲ್ಲರ ಕಣ್ಣು ಸಿನಿಮಾದ ಮುಂದಿನ ಅಪ್‌ಡೇಟ್‌ಗಳ ಮೇಲಿದೆ.

Kishor KV

Leave a Reply

Your email address will not be published. Required fields are marked *