ಪ್ರದೂಷ್ ಮಾಫಿ ಸಾಕ್ಷಿ ಭಯದಲ್ಲಿ ಡಿ ಗ್ಯಾಂಗ್ – ರೇಣುಕಾಸ್ವಾಮಿ ಕೊ*ಲೆ ಸಂಪೂರ್ಣ ರಹಸ್ಯ ಬಯಲಾಗುತ್ತಾ?

ಪ್ರದೂಷ್ ಮಾಫಿ ಸಾಕ್ಷಿ ಭಯದಲ್ಲಿ ಡಿ ಗ್ಯಾಂಗ್ – ರೇಣುಕಾಸ್ವಾಮಿ ಕೊ*ಲೆ ಸಂಪೂರ್ಣ ರಹಸ್ಯ ಬಯಲಾಗುತ್ತಾ?

ಪ್ರದೂಷ್ ಮಾಫಿ ಸಾಕ್ಷಿಗೆ ತಡೆ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ಇಂದು ಹೈಕೋರ್ಟ್ ಆದೇಶ ಹೊರಬೀಳಲಿದ್ದು, ಪ್ರದೋಷ್​ ಹೇಳಿಕೆಗೆ ಕೋರ್ಟ್​ ಗ್ರೀನ್‌ ಸಿಗ್ನಲ್ ಕೊಟ್ಟರೆ ದರ್ಶನ್‌ಗೆ ಕಂಟಕವಾಗಲಿದೆ.

ಇದನ್ನೂ ಓದಿ: ರಾಜ್ಯದ ರೈತರಿಗೆ ಬಿಗ್‌ ಶಾಕ್ – ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ಹರಿಯುತ್ತಿರೋ ಕಾವೇರಿ

ಮಾಫಿ ಸಾಕ್ಷ್ಯ ನುಡಿಯಲು ಮುಂದಾಗಿರೋ ಪ್ರದೂಷ್, ನಟ ದರ್ಶನ್, ಪವಿತ್ರಾಗೌಡ ಸೇರಿ 16 ಮಂದಿ ವಿರುದ್ಧ ಸಾಕ್ಷ್ಯ ನುಡಿಯಲಿದ್ದಾರೆ. ಸ್ವಾಮಿ ಕೊ*ಲೆ ಸಂಬಂಧ ಮಾಹಿತಿ ನೀಡಲಿರುವ ಪ್ರದೂಷ್, ಕೇಸ್​​ನಲ್ಲಿ ದರ್ಶನ್ ಜೊತೆಗಿನ ನಂಟು, ಶೆಡ್‌ನಲ್ಲಿ ಆಗಿದ್ದೇನು? ಕೊ*ಲೆ, ಆರೋಪಿಗಳ ಪಾತ್ರ ಹಾಗೂ ₹30 ಲಕ್ಷ ಹಣದ ಬಗ್ಗೆ ಮಾಹಿತಿ ನೀಡೋ ಸಾಧ್ಯತೆ ಇದೆ. 11 ಪುಟಗಳಲ್ಲಿ ಕೊ*ಲೆಯ ರಹಸ್ಯ ಅಡಗಿದೆ ಎನ್ನಲಾಗ್ತಿದೆ.

ಒಂದ್ವೇಳೆ ಹೈಕೋರ್ಟ್ ಆದೇಶದಲ್ಲಿ ಅನುಮತಿ ಸಿಕ್ಕಲ್ಲಿ ಟ್ರಯಲ್ ಕೋರ್ಟ್ ನಲ್ಲಿ ನಡೆಯುವ ಪ್ರಕ್ರಿಯೆ ಏನು ಗೊತ್ತಾ? ಇಂದೇ 14ನೇ ಆರೋಪಿ ಪ್ರದೋಷ್​ ಕೋರ್ಟ್​ನಲ್ಲಿ ಮಾಫಿ ಸಾಕ್ಷಿ ನುಡಿಯಲಿದ್ದಾರೆ. 12 ಗಂಟೆ ಸುಮಾರಿಗೆ 59 ನೇ ಸಿಸಿಹೆಚ್ ಕೋರ್ಟ್​​ಗೆ ಪ್ರದೋಷ್​ ನನ್ನು ಹಾಜರು ಪಡಿಸಲಾಗುತ್ತೆ.

ಕೋರ್ಟ್ ಅನುಮತಿ ಕೊಟ್ರೆ ಪ್ರಕರಣ ಸಂಪೂರ್ಣ ಮಾಹಿತಿಯನ್ನ ಕೋರ್ಟ್ ಮುಂದೆ ಪ್ರದೋಷ್ ಹೇಳಲಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನ ಅಂಗೀಕಾರ ಮಾಡಿರುವ ಟ್ರಯಲ್ ಕೋರ್ಟ್, ಸಾಕ್ಷಿಯ ಹೇಳಿಕೆ ದಾಖಲಿಸಲಿದೆ. ಘಟನೆಗೆ ಮುನ್ನ, ಘಟನೆ ನಡೆದಾಗ ಮತ್ತು ನಂತರ ನಡೆದ ಬೆಳವಣಿಗೆಗಳ ಬಗ್ಗೆ ಪ್ರದೋಷ್​ ಮಾಹಿತಿ ನೀಡಲಿದ್ದಾರೆ.

Kishor KV

Leave a Reply

Your email address will not be published. Required fields are marked *