ಹಾರ್ದಿಕ್ ಕಂಬ್ಯಾಕ್ ಕನಸು ಭಗ್ನ! – ಧೋನಿಗೆ ವಯಸ್ಸಾಯ್ತು.. CSK ಕೋಕ್?

ಹಾರ್ದಿಕ್ ಕಂಬ್ಯಾಕ್ ಕನಸು ಭಗ್ನ! – ಧೋನಿಗೆ ವಯಸ್ಸಾಯ್ತು.. CSK ಕೋಕ್?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆ ಸೆಪ್ಟೆಂಬರ್ 18ರಂದು ಮುಂಬೈನಲ್ಲಿ ನಡೆಯಲಿದೆ. ಬಿಸಿಸಿಐಗೆ ಸಂಬಂಧಿಸಿದ ಪ್ರಮುಖ ಆಡಳಿತಾತ್ಮಕ ವಿಚಾರಗಳು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಭಾರತೀಯ ಕ್ರಿಕೆಟ್‌ನ ಮುಂದಿನ ಆಡಳಿತ ಮತ್ತು ಸಂಘಟನಾ ಬೆಳವಣಿಗೆಗಳ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.

ಟೀಂ ಇಂಡಿಯಾಗೆ ಮರಳಲು ಸಿದ್ಧತೆ ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಹಿನ್ನಡೆಯಾಗಿದೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ವೇಳೆ ಕಾಲಿನ ಭಾಗದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡೋದು ಡೌಟ್ ಎನ್ನಲಾಗ್ತಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಕೃನಾಲ್ ಪಾಂಡ್ಯ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಇದೆ. 2021 ರಿಂದ ಹೊರಗುಳಿದಿದ್ದ ಕೃನಾಲ್, ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.  . ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅಕ್ಷರ್ ಪಟೇಲ್ ಬದಲು  ಕೃನಾಲ್ ಪಾಂಡ್ಯಗೆ ಅವಕಾಶ ನೀಡ ಬಹುದು ಅನ್ನೋ ಮಾತು ಕೇಳಿ ಬರ್ತಿದೆ.

2026-27ರ ರಣಜಿ ಟ್ರೋಫಿ ಋತುವಿಗೆ ಮುಂಬೈ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ. ಅನುಭವಿ ಬ್ಯಾಟರ್ ಸಿದ್ಧೇಶ್ ಲಾಡ್ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಲಿದ್ದಾರೆ. ಕಳೆದ ಋತುವಿನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಶಾರ್ದೂಲ್ ಠಾಕೂರ್ ಬದಲಿಗೆ ಲಾಡ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ T20I ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ – ಯಾರಿಗೆಲ್ಲಾ ಚಾನ್ಸ್‌ ಸಿಕ್ಕಿದೆ ಗೊತ್ತಾ?

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ವೈಭವ್ ಅವರ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ಅವರ ಬೌಲಿಂಗ್ ಶೈಲಿ ನನ್ನ ಬೌಲಿಂಗ್ ಶೈಲಿಗಿಂತ ಉತ್ತಮವಾಗಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದುಲೀಪ್ ಟ್ರೋಪಿಯಲ್ಲಿ ಕೇವಲ 3 ಓವರ್‌ಗಳನ್ನು ಬೌಲಿಂಗ್ ಮಾಡಿದ ವೈಭವ್ 11 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದಿದ್ರು.

ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್, ಇದೀಗ ಇಂಗ್ಲೆಂಡ್‌ನ ಡರ್ಹಾಮ್ ಕೌಂಟಿ ಕ್ಲಬ್ ಸೇರಿಕೊಂಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಇಂಗ್ಲೆಂಡ್‌ನ ಪರಿಸ್ಥಿತಿಗಳಲ್ಲಿ ಆಡುವ ಅವಕಾಶ ಮಯಾಂಕ್‌ಗೆ ಲಭಿಸಿದೆ. ಭಾರತ ತಂಡಕ್ಕೆ ಮರಳಲು ಇದು ಮಹತ್ವದ ವೇದಿಕೆಯಾಗಿದ್ದು, ತಮ್ಮ ಕ್ರಿಕೆಟ್ ಭವಿಷ್ಯಕ್ಕೆ ಹೊಸ ಆಯಾಮ ನೀಡಲು ಸಜ್ಜಾಗಿದ್ದಾರೆ.

ಮಾಜಿ ನಾಯಕ ಮತ್ತು ಹಾಲಿ ಆಟಗಾರ ಎಂಎಸ್ ಧೋನಿಫ್ರಾಂಚೈಸಿಯಲ್ಲಿ ಗಣನೀಯ ಪಾಲನ್ನು ಬೇಡಿಕೆ ಇಟ್ಟಿದ್ದಾರೆ ಎಂಬ ಹೇಳಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್  ತಳ್ಳಿಹಾಕಿದೆ. ಸಿಇಒ ಕಾಸಿ ವಿಶ್ವನಾಥನ್ ಪಿಟಿಐಗೆ ಇದು ಆಧಾರರಹಿತ ವದಂತಿ ಎಂದು ಹೇಳಿದ್ದಾರೆ. ಹಾಗೇ ‘ಧೋನಿ ಇನ್ನೂ ಆಡುವುದಿಲ್ಲ ಅಂತ ಹೇಳಿಲ್ಲ. ಆದ್ದರಿಂದ ಕಾಯೋಣ. ಅವರಿಗೆ 45 ವರ್ಷ ವಯಸ್ಸಾಗಿದೆ. ಸರಾಸರಿ ಐಪಿಎಲ್ ನಿವೃತ್ತಿ ವಯಸ್ಸನ್ನು ಮೀರಿದೆ ಮತ್ತು ಹೆಚ್ಚು ಗಾಯದ ಅಪಾಯವಿದೆ. ಆದರೆ ಸಿಎಸ್‌ಕೆ ಅವರನ್ನು ಎಂದಿಗೂ ಹೊರಗೆ ತಳ್ಳಿ ಮುಂದುವರಿಯಲು ಇಷ್ಟವಿಲ್ಲʼ ಎಂದಿದ್ದಾರೆ.

ದುಲೀಪ್ ಟ್ರೋಫಿ ಪಂದ್ಯ ವೀಕ್ಷಿಸಲು ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಸಂಪೂರ್ಣ ಬೋಳು ತಲೆಯ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಗ್ಯಾಂಗ್‌ಸ್ಟಾರ್ ಲುಕ್ ಅಂದ್ರೆ, ಇನ್ನೂ ಕೆಲವರು ಜೂನಿಯರ್  ವಿನೋದ್ ಕಾಂಬ್ಳಿ ಎನ್ನುತ್ತಿದ್ದಾರೆ.

ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರಹಮಾನ್ ಅವರನ್ನು ಹೊರಗಿಟ್ಟಿದ್ದಕ್ಕೆ ಪ್ರತಿಯಾಗಿ ಭಾರತದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಬಹಿಷ್ಕರಿಸಿದ್ದು ಬಿಸಿಬಿ ಮಾಡಿದ ದೊಡ್ಡ ತಪ್ಪು ಎಂದು ನೂತನ ಅಧ್ಯಕ್ಷ ತಮೀಮ್ ಇಕ್ಬಾಲ್ ಒಪ್ಪಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ರಾಜಕೀಯ ಹಾಗೂ ಕ್ರೀಡೆಯನ್ನು ಒಂದೇ ತಕ್ಕಡಿಯಲ್ಲಿ ಅಳೆಯಬಾರದಿತ್ತು ಮತ್ತು ಐಸಿಸಿ ಜೊತೆ ಜಾಣತನದಿಂದ ಸಂಧಾನ ನಡೆಸಬೇಕಿತ್ತು ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಪಾಕಿಸ್ತಾನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಏಳು ಆಟಗಾರರನ್ನು ಮನೆಗೆ ಕಳುಹಿಸಲಾಗಿದ್ದು, ಮುಖ್ಯ ಕೋಚ್ ಸ್ಥಾನದಲ್ಲೂ ಬದಲಾವಣೆ ನಡೆದಿದೆ. ಮೊಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್ ಸೇರಿದಂತೆ ಪ್ರಮುಖ ಆಟಗಾರರ ಮೇಲೂ ಕ್ರಮ ಕೈಗೊಳ್ಳಲಾಗಿದೆ.   

Kishor KV

Leave a Reply

Your email address will not be published. Required fields are marked *