ಸೆ .3 & 4 ರಂದು ಬೆಂಗಳೂರಿನಲ್ಲಿ ಸಿಗಲ್ಲ ಚಿಕನ್ – 6 ರಿಂದ 7 ಸಾವಿರ ಚಿಕನ್ ಅಂಗಡಿಗಳು ಕ್ಲೋಸ್

ಜಿಬಿಎ ನೂತನ ತ್ಯಾಜ್ಯ ವಿಲೇವಾರಿ ಶುಲ್ಕ ಖಂಡಿಸಿ ಬೃಹತ್ ಪ್ರತಿಭಟನೆಗೆ ಮುಂದಾದ ಪೌಲ್ಟ್ರಿ ಉದ್ಯಮಿಗಳು ಬಂದ್ಗೆ ಕರೆಕೊಟ್ಟಿದ್ದಾರೆ. ಸೆಪ್ಟೆಂಬರ್ 3 ಹಾಗೂ 4 ರಂದು ಬೆಂಗಳೂರಿನಲ್ಲೇ 6 ರಿಂದ 7 ಸಾವಿರ ಚಿಕನ್ ಅಂಗಡಿಗಳು ಕ್ಲೋಸ್ ಮಾಡಲು ನಿರ್ಧರಿಸಿದ್ದು, ಈ ಗುರುವಾರ ಹಾಗೂ ಶುಕ್ರವಾರ ಬೆಂಗಳೂರಿನ ಚಿಕನ್ ಅಂಗಡಿಗಳು ಬಂದ್ ಆಗಲಿದೆ.
ಚಿಕನ್ ಅಂಗಡಿ ತ್ಯಾಜಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ದರ ನಿಗದಿ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದ್ದು, ಗುರುವಾರ ಚಿಕನ್ ಅಂಗಡಿ ಬಂದ್ ಮಾಡಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. BSWML ವಿರುದ್ಧ ಚಿಕನ್ ಅಂಗಡಿ ಮಾಲೀಕರು ಆಕ್ರೋಶ ಹೊರಹಾಕಲು ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಥಳದಲ್ಲೇ ಪರಿಹಾರ – DK ಸರ್ಕಾರದ ಪ್ರಜಾಸೇವಾ ಯೋಜನೆಯಿಂದ ಏನೆಲ್ಲಾ ಲಾಭ?
ನಗರದಲ್ಲಿ ಪ್ರತಿ ದಿನ 7 ಲಕ್ಷ ಕೆಜಿ ಚಿಕನ್ ಸೇಲ್ ಆಗ್ತಿದೆ. ಇದ್ರಿಂದ 2 ರಿಂದ 3 ಲಕ್ಷ ಕೆಜಿ ಚಿಕನ್ ತ್ಯಾಜ್ಯ ಪ್ರತಿ ದಿನ ಉತ್ಪತ್ತಿ ಆಗ್ತಿದ್ದು, ಪ್ರತಿದಿನ ಒಂದು ಶಾಪ್ ನಿಂದ ಸುಮಾರು 30 ಕೆಜಿ ತ್ಯಾಜ್ಯ ಹೊರಹಾಕಲಾಗ್ತಿದೆ. 1 ಕೆಜಿ ತಾಜ್ಯಕ್ಕೆ 5 ರೂಪಾಯಿ ಕಟ್ಟಿದ್ರೆ ಇದರಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಹೊರೆ ಆಗಲಿದೆ ಎಂದು ಪೌಲ್ಟ್ರಿ ಉದ್ಯಮಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಈಗಾಗಲೇ ಕಡಿಮೆ ಲಾಭದ ಮಾರ್ಜಿನ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಸಣ್ಣ ಅಂಗಡಿ ಮಾಲೀಕರಿಗೆ ಈ ನಿಯಮ ಹೆಚ್ಚು ಹೊರೆಯಾಗಿದೆ. ಹೀಗಾಗಿ ಅಂಗಡಿ ಬಂದ್ ಮಾಡಿ ಹೋರಾಟಕ್ಕೆ ಇಳಿಯುತ್ತಿದ್ದು, ಸೆಪ್ಟೆಂಬರ್ 3 ಮತ್ತು 4 ರಂದು ನಗರದ ಬಹುತೇಕ ಚಿಕನ್ ಸ್ಟಾಲ್‌ಗಳು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಹೆಚ್ಚಿದೆ.

ನೋಡಿರಿ

