IPLಗೆ ಇಂಪ್ಯಾಕ್ಟ್ ಪ್ಲೇಯರ್ ಭಾರ – ಬ್ಯಾನ್ ಆಗಬೇಕಾ.. ಬದಲಾವಣೆ ಸಾಕಾ?
ಬೌಲರ್ ಗೆ 5 ಓವರ್ ಕೊಡ್ತಾರಾ?

ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೇಕಾ ಬೇಡ್ವಾ..? ಭಾರತೀಯ ಕ್ರಿಕೆಟ್ನಲ್ಲಿ ಸದ್ಯ ಸಾಕಷ್ಟು ಚರ್ಚೆಯಲ್ಲಿರೋ ವಿಚಾರ. ಬಿಸಿಸಿಐ ಕೂಡ 2027ರ ಸೀಸನ್ಗೂ ಮುನ್ನ ಇದೇ ನಿಯಮಗಳ ಕುರಿತು ಹತ್ತೂ ಫ್ರಾಂಚೈಸಿಗಳ ಒಪೀನಿಯನ್ ಪಡೆದಿದೆ. ಆಗಸ್ಟ್ 31 ಡೆಡ್ಲೈನ್ ಆಗಿದ್ದು, ಎಲ್ಲಾ ತಂಡಗಳ ಮಾಲೀಕರು ತಮ್ಮ ತಮ್ಮ ಅಭಿಪ್ರಾಯಗಳನ್ನ ಬಿಸಿಸಿಐಗೆ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ : ಕೃನಾಲ್ ಪಾಂಡ್ಯಗೆ ಜಾಕ್ ಪಾಟ್ – T-20I ತಂಡಕ್ಕೆ RCB ಆಲ್ ರೌಂಡರ್?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ 2023ರಿಂದ ಬಳಸಲಾಗ್ತಾ ಇದೆ. ಈ ನಿಯಮದ ಮುಖ್ಯ ಉದ್ದೇಶ ಪಂದ್ಯದ ಮಧ್ಯದಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸಿ ತಂಡದ ಕಾಂಬಿನೇಷನ್ಗೆ ಹೆಚ್ಚುವರಿ ಆಯ್ಕೆ ನೀಡುವುದು. ಆದ್ರೆ ಈ ರೂಲ್ಸ್ನಿಂದ ತಂಡಕ್ಕೆ ಲಾಭ ಆಗ್ತಿಲ್ಲ ಅನ್ನೋದು ಕ್ಯಾಪ್ಟನ್ಗಳ ವಾದ. 2026ರ ಐಪಿಎಲ್ಗೂ ಮುನ್ನ ನಡೆದಿದ್ದ ಕ್ಯಾಪ್ಟನ್ಸ್ ಫೋಟೋಶೂಟ್ ಮತ್ತು ಡಿಸ್ಕಷನ್ನಲ್ಲಿ ಬಹುತೇಕ ತಂಡಗಳ ನಾಯಕರು ಇಂಪ್ಯಾಕ್ಟ್ ನಿಯಮದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ಮ್ಯಾನೇಜ್ಮೆಂಟ್ ತಂಡಗಳ ಮಾಲೀಕರ ಬಳಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿತ್ತು. ಅದ್ರಂತೆ ಆಗಸ್ಟ್ 31ರ ಡೆಡ್ಲೈನ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಒಪೀನಿಯನ್ ಶೇರ್ ಮಾಡಿದ್ದಾರೆ. ಈಗ ಬದಲಾವಣೆಯ ಚೆಂಡು ಬಿಸಿಸಿಐ ಅಂಗಳಕ್ಕೆ ಬಿದ್ದಿದೆ. ಹಾಗೇ ಬಿಸಿಸಿಐ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದು ಅನ್ನೋ ಕುತೂಹಲವೂ ಹೆಚ್ಚಾಗಿದೆ.
ಇಂಪ್ಯಾಕ್ಟ್ ಪ್ಲೇಯರ್!
ಪ್ಲೇಯಿಂಗ್ 11 ಆಯ್ಕೆ ವೇಳೆಯೇ ಹೆಚ್ಚುವರಿ ಐವರು ಆಟಗಾರರ ಆಯ್ಕೆ
ಐವರಲ್ಲಿ ಒಬ್ಬರನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು
ಇಂಪ್ಯಾಕ್ಟ್ ಪ್ಲೇಯರ್ ಬ್ಯಾಟಿಂಗ್ & ತನ್ನ ಕೋಟಾದ 4 ಓವರ್ ಬೌಲಿಂಗ್
ಮೈದಾನದಿಂದ ಹೊರಹೋಗುವ ಆಟಗಾರ ಮತ್ತೆ ಭಾಗವಹಿಸಲು ಸಾಧ್ಯವಿಲ್ಲ
ಪಂದ್ಯದ ಯಾವುದೇ ನ್ಯೂಟ್ರಲ್ ಬ್ರೇಕ್ಸ್ ವೇಳೆಯೂ ಬದಲಾವಣೆ ಮಾಡಬಹುದು
ವಿದೇಶಿ ಪ್ಲೇಯರ್ಸ್ ಆಲ್ರೆಡಿ 4 ಜನ ಇದ್ರೆ ಇಂಪ್ಯಾಕ್ಟ್ ಪ್ಲೇಯರ್ ಆಗುವುದಿಲ್ಲ
ಪ್ಲೇಯಿಂಗ್ 3ನಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ವಿದೇಶಿಗರಿದ್ರೆ ಅವಕಾಶ
ಈ ಇಂಪ್ಯಾಕ್ಟ್ ನಿಯಮದಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಒಬ್ಬ ಹೆಚ್ಚುವರಿ ಪ್ಲೇಯರ್ ಸಿಕ್ಕಂತಾಗ್ತಿದೆ. ಆದ್ರೆ ಇದನ್ನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಭಾರತೀಯ ದಿಗ್ಗಜ ಕ್ರಿಕೆಟಿಗರೇ ವಿರೋಧಿಸಿದ್ದಾರೆ. ಆಲ್ರೌಂಡರ್ಗಳು ಬೆಳೆಯೋಕೆ ಅವಕಾಶ ಸಿಗ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ದೇ ಟಿ-20 ಕ್ರಿಕೆಟ್ನಲ್ಲಿ 200, 250 ರನ್ಸ್ ದಾಖಲೆಗೂ ಕಾರಣವಾಗ್ತಿದೆ. ಬ್ಯಾಟ್-ವರ್ಸಸ್-ಬಾಲ್ ಬ್ಯಾಲೆನ್ಸ್ ಮಿಸ್ ಆಗ್ತಿದೆ ಅನ್ನೋದು ಅವ್ರ ವಾದ. 2023ರಲ್ಲಿ ಜಾರಿಗೆ ಬಂದ ಈ ನಿಯಮವನ್ನು 4 ವರ್ಷಗಳ ಕಾಲ ಅಂದ್ರೆ 2027ರವರೆಗೆ ಜಾರಿಯಲ್ಲಿರಲಿದೆ ಎನ್ನಲಾಗಿತ್ತು. ಆದ್ರೀಗ ಫ್ರಾಂಚೈಸಿಗಳ ಅಭಿಪ್ರಾಯ ಸಂಗ್ರಹದ ಬಳಿಕ ಒಮ್ಮತ ಮೂಡಿದ್ರೆ ಬಿಸಿಸಿಐ ಈ ನಿಯಮದಿಂದ ಹಿಂದೆ ಸರಿಯೋ ಸಾಧ್ಯತೆಗಳೂ ಇವೆ. ಹಾಗೇನಾದ್ರೂ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ತೆಗೆದ್ರೆ ಎಂಎಸ್ ಧೋನಿ, ರೋಹಿತ್ ಶರ್ಮಾ ನೆಕ್ಸ್ಟ್ ಇಯರ್ನಿಂದ ಆಡಲ್ವಾ ಅನ್ನೋ ಪ್ರಶ್ನೆಗಳೂ ಇವೆ. ಯಾಕಂದ್ರೆ ಇವ್ರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡ್ತಿದ್ದಾರೆ. ಇನ್ನು ಆರ್ಸಿಬಿಗೆ ನಿಯಮ ರದ್ದಾದ್ರೂ ಅಂಥಾ ದೊಡ್ಡ ಹೊಡೆತ ಏನೂ ಬೀಳಲ್ಲ. ಅವಶ್ಯಕತೆಗೆ ತಕ್ಕಂತೆ ಇಂಪ್ಯಾಕ್ಟ್ ಪ್ಲೇಯರ್ ಬದಲಾವಣೆ ಮಾಡಿಕೊಳ್ತಿರೋದ್ರಿಂದ ಬಿಗ್ ಇಂಪ್ಯಾಕ್ಟ್ ಆಗಲ್ಲ. ಹಾಗೇನಾದ್ರೂ ಕಂಪ್ಲೀಟ್ ಆಗಿ ನಿಷೇಧ ಮಾಡದೇ ನಿಯಮದಲ್ಲಿ ಕೆಲ ಬದಲಾವಣೆಗಳನ್ನ ತಂದ್ರೂ ತರಬಹುದು. ಮೇನ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ ಕೆಲ ಸಜೇಷನ್ಸ್ ಕೂಡ ಪರಿಗಣನೆ ಮಾಡ್ಬೋದು.
ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಅವಾರ್ಡ್ ಫಂಕ್ಷನ್ವೊಂದ್ರಲ್ಲಿ ಮಾತನಾಡಿದ್ದ ಸಚಿನ್ ತೆಂಡೂಲ್ಕರ್ ಈ ನಿಯಮದಿಂದ ಆಗ್ತಿರೋ ಸೈಡ್ ಎಫೆಕ್ಟ್ ಬಗ್ಗೆ ಮಾತನಾಡಿದ್ರು. ಹಾಗೇ ಐಪಿಎಲ್ನಲ್ಲಿ ಪ್ರಮುಖವಾಗಿ ಮೂರು ಬದಲಾವಣೆ ತರಬೇಕು ಅಂದಿದ್ರು.
ಸಚಿನ್ 3 ಸಲಹೆಗಳು!
- ಬೌಲರ್ ಗಳಿಗೆ ಹೊರೆ.. ಇಂಪ್ಯಾಕ್ಟ್ ಪ್ಲೇಯರ್ಸ್ ರೂಲ್ಸ್ ಬೇಡ್ವೇ ಬೇಡ
- ಬ್ಯಾಟಿಂಗ್ ಗೆ 4 ಓವರ್ ಪವರ್ ಪ್ಲೇ.. ಬೌಲಿಂಗ್ ಗೆ 2 ಓವರ್ ಪವರ್ ಪ್ಲೇ
- ತಂಡದ ಅತ್ಯುತ್ತಮ ಬೌಲರ್ ಗೆ 5 ಓವರ್ ಗಳನ್ನ ಬೌಲ್ ಮಾಡಲು ಚಾನ್ಸ್
ಸಚಿನ್ ನೀಡಿರುವ ಸಲಹೆಗಳೂ ಚೆನ್ನಾಗಿದೆ. ಯಾಕಂದ್ರೆ ಈಗ ಐಪಿಎಲ್ನಲ್ಲಿ ಬ್ಯಾಟರ್ಗಳಿಗೆ ಹೆಚ್ಚಿನ ಅಡ್ವಾಂಟೇಜಸ್ ಇದೆ. ಆದ್ರೆ ಬೌಲರ್ಗಳಿಗೆ ಹೆಚ್ಚಿನ ಪ್ರೆಶರ್ ಇದೆ. ಒಂದ್ವೇಳೆ ಈ ಬದಲಾವಣೆ ತಂದ್ರೆ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡೂ ಕೂಡ ಬ್ಯಾಲೆನ್ಸ್ ಆಗಬಹುದು.

ನೋಡಿರಿ

