ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದೊಂದಿಗೆ 21 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಎಳೆದಿದ್ದಾರೆ. 2022ರ ವಿಶ್ವಕಪ್‌ ಗೆಲುವಿನೊಂದಿಗೆ ತಮ ವೃತ್ತಿಜೀವನವನ್ನು ಅಲಂಕರಿಸಿದ್ದ ಮೆಸ್ಸಿ, ಫುಟ್ಬಾಲ್‌ ಇತಿಹಾಸದ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. 39 ವರ್ಷದ ಮೆಸ್ಸಿ ತಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದು ನನಗೆ ನೋವುಂಟು ಮಾಡಿದ ಮತ್ತು ಈಗಲೂ ಆಳವಾಗಿ ನೋವುಂಟು ಮಾಡುತ್ತಿರುವ ನಿರ್ಧಾರ. ಆದರೆ ಸಮಯ ಬಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 26 ಬಾಲ್.. 77 ರನ್ಸ್.. ಸಿಡಿದ ಅಭಿ – T-20I ಡ್ರಾಪ್ ಭೀತಿಗೆ ಬೆಂಕಿಯಾದ್ರಾ?

ಮೆಸ್ಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, 21 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಫಿಫಾ ವಿಶ್ವಕಪ್ ಫೈನಲ್ ನಂತರ ಸಾಕಷ್ಟು ಯೋಚಿಸಿದ ನಂತರ, ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಇದು ತುಂಬಾ ನೋವುಂಟು ಮಾಡಿದ ನಿರ್ಧಾರವಾಗಿತ್ತು, ಆದರೆ ಆ ಸಮಯ ಬಂದಿದೆ ಎಂದು ನನಗೆ ಅರ್ಥವಾಗಿದೆ. ನಾನು ಯಾವಾಗಲೂ ತಂಡಕ್ಕಾಗಿ 100 ಪ್ರತಿಶತವನ್ನು ನೀಡಿದ್ದೇನೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಗೆದ್ದಾಗ ಮಾತ್ರವಲ್ಲ, ಅದಕ್ಕೂ ಮುಂಚೆಯೂ ಸಹ ನಾನು ಈ ತಂಡಕ್ಕಾಗಿ ಎಲ್ಲವನ್ನು ನೀಡಿದ್ದೇನೆ.ಇದೀಗ ನನ್ನಲ್ಲಿ ನೀಡಲು ಏನೂ ಉಳಿದಿಲ್ಲ. ಇದಲ್ಲದೆ, ಈ ಸ್ಥಾನಕ್ಕೆ ಅರ್ಹರಾದ ಅನೇಕ ಪ್ರತಿಭಾನ್ವಿತ ಯುವ ಆಟಗಾರರು ದೇಶದಲ್ಲಿ ಹೊರಹೊಮ್ಮುತ್ತಿದ್ದಾರೆ ಎಂದಿದ್ದಾರೆ.

ಮೆಸ್ಸಿ ತಮ್ಮ 21 ವರ್ಷಗಳ ವೃತ್ತಿಜೀವನದಲ್ಲಿ 207 ಪಂದ್ಯಗಳನ್ನಾಡಿದ್ದು, 125 ಗೋಲುಗಳನ್ನು ಬಾರಿಸಿದ್ದಾರೆ. ಈ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ಎರಡನೇ ಆಟಗಾರನೆನಿಸಿಕೊಂಡಿದ್ದಾರೆ. 39 ವರ್ಷದ ಮೆಸ್ಸಿ 2022 ರ ವಿಶ್ವಕಪ್, 2026 ಮತ್ತು 2014 ರಲ್ಲಿ ಅರ್ಜೆಂಟೀನಾದ ರನ್ನರ್-ಅಪ್ ತಂಡಗಳ ಭಾಗವಾಗಿದ್ದರು.  ಕ್ಲಬ್ ಫುಟ್‌ಬಾಲ್‌ನಲ್ಲಿ, ಮೆಸ್ಸಿ ಇಂಟರ್ ಮಿಯಾಮಿ ಪರ ಆಡುತ್ತಿದ್ದು, 2028 ರವರೆಗೆ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

Kishor KV

Leave a Reply

Your email address will not be published. Required fields are marked *