ಕೃನಾಲ್ ಪಾಂಡ್ಯಗೆ ಜಾಕ್ ಪಾಟ್ – T-20I ತಂಡಕ್ಕೆ RCB ಆಲ್ ರೌಂಡರ್?
ಅಕ್ಷರ್ ಕೈ ಬಿಡೋದು ಸುಲಭನಾ?

ಕೃನಾಲ್ ಪಾಂಡ್ಯಗೆ ಜಾಕ್ ಪಾಟ್ – T-20I ತಂಡಕ್ಕೆ RCB ಆಲ್ ರೌಂಡರ್?ಅಕ್ಷರ್ ಕೈ ಬಿಡೋದು ಸುಲಭನಾ?

ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್​ ಯಾವುದೇ ಕ್ಷಣದಲ್ಲೂ ಅನೌನ್ಸ್ ಆಗ್ಬೋದು. ಆದ್ರೆ ಈ ತಂಡದ ಸೆಲೆಕ್ಷನ್​ನಲ್ಲಿ ಮೇಜರ್ ಸರ್ಜರಿಯಾಗುತ್ತೆ ಎನ್ನುವ ಸುದ್ದಿ ಹಲ್​ಚಲ್ ಎಬ್ಬಿಸಿದೆ. ಅದೂ ಕೂಡ ಸ್ಟಾರ್ ಆಲ್​ರೌಂಡರ್​ಗೆ ಗೇಟ್​ಪಾಸ್ ಕೊಟ್ಟು ಆರ್​ಸಿಬಿಯ ಗೇಮ್​ಚೇಂಜರ್​ಗೆ ಅವಕಾಶ ಸಿಗುತ್ತೆ ಅನ್ನೋದೇ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ : ಪಡಿಕ್ಕಲ್ ಗೆ NZ ಸರಣಿ ವಾರ್ನಿಂಗ್ – ಕಿವೀಸ್ ವಿರುದ್ಧ ಬ್ಯಾಟಿಂಗ್ ಕಷ್ಟನಾ?

ಸೆಪ್ಟೆಂಬರ್ 13ರಿಂದ ಆಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗಲಿದೆ. ಸದ್ಯ ಈ ಸರಣಿಗೆ ಟೈಮ್ಸ್ ಆಫ್ ಇಂಡಿಯಾ ರಿಪೋರ್ಟ್ ಪ್ರಕಾರ ಅಕ್ಷರ್​ಪಟೇಲ್​ರನ್ನ ತಂಡದಿಂದ ಕೈಬಿಟ್ಟು ಆರ್​ಸಿಬಿಯ ಆಲ್​ರೌಂಡರ್ ಕೃನಾಲ್ ಪಾಂಡ್ಯ ಅವ್ರಿಗೆ ಅವಕಾಶ ನೀಡ್ತಾರೆ ಎನ್ನಲಾಗಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಟೂರ್​ನಲ್ಲಿ ಅಕ್ಷರ್ ಪಟೇಲ್ ಪ್ರದರ್ಶನ ಅಷ್ಟಕ್ಕಷ್ಟೇ ಇತ್ತು. ಹೀಗಾಗಿ ಆಫ್ಘನ್ ಸರಣಿಗೆ ಕೃನಾಲ್ ಪಾಂಡ್ಯರನ್ನ ಪಿಕ್ ಮಾಡಬಹುದು ಅನ್ನೋ ಸುದ್ದಿ ಸಂಚಲನ ಮೂಡಿಸಿದೆ.

ಬ್ಯಾಟಿಂಗ್ & ಬೌಲಿಂಗ್ ಬ್ಯಾಲೆನ್ಸ್.. ಕೃನಾಲ್ ಮೇಲೆ ಬಿಸಿಸಿಐ ಕಣ್ಣು

ಟೀಂ ಇಂಡಿಯಾದಲ್ಲಿ ಅಕ್ಷರ್ ಪಟೇಲ್ ಸ್ಟಾರ್ ಆಲ್​ರೌಂಡರ್. ಐಸಿಸಿ ಟೂರ್ನಮೆಂಟ್​ಗಳಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಅದ್ರಲ್ಲೂ ನಾಕೌಟ್ಸ್, ಫೈನಲ್ಸ್ ಅಂತಾ ಬಂದಾಗ ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡದಲ್ಲೂ ಬಿಗ್ ಇಂಪ್ಯಾಕ್ಟ್ ಮಾಡಿರುವ ಆಟಗಾರ. ಆದ್ರೆ ಇತ್ತೀಚೆಗೆ ಅಕ್ಷರ್ ಪಟೇಲ್ ಕಂಪ್ಲೀಟ್ ಡಲ್ ಆಗಿದ್ದಾರೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಕಳೆದ 6 ಟಿ-20ಐ ಪಂದ್ಯಗಳಲ್ಲಿ ಅಕ್ಷರ್ ಕೇವಲ 4 ವಿಕೆಟ್ ಪಡೆಯಲಷ್ಟೇ ಸಾಧ್ಯವಾಗಿದೆ. ಐಪಿಎಲ್​ನಲ್ಲೂ ಕಳಪೆ ಫಾರ್ಮ್​ನಲ್ಲಿದ್ರು. ಹೀಗಾಗಿ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಅಕ್ಷರ್ ಪಟೇಲ್ ಅವ್ರನ್ನ ಕೈಬಿಟ್ಟು ಆರ್​ಸಿಬಿಯ ಸ್ಟಾರ್ ಆಲ್​ರೌಂಡರ್ ಕೃನಾಲ್ ಪಾಂಡ್ಯರನ್ನ ಸೆಲೆಕ್ಟ್ ಮಾಡಬಹುದು ಅನ್ನೋ ಚರ್ಚೆ ನಡೀತಿದೆ.

ಅಕ್ಷರ್ & ಕೃನಾಲ್ ನಡುವೆ ವಾರ್!

2025 ಮತ್ತು 2026ರಲ್ಲಿ ಆರ್ ​ಸಿಬಿ ಪರ ಕೃನಾಲ್ ಬೆಸ್ಟ್ ಪರ್ಫಾಮೆನ್ಸ ್

2026 ರಲ್ಲಿ 16 ಪಂದ್ಯ, 145.81 ಸ್ಟ್ರೈಕ್ ರೇಟ್‌, 226 ರನ್ಸ್, 14 ವಿಕೆಟ್ಸ್​

ಎಡಗೈ ಸ್ಪಿನ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಬ್ಯಾಕಪ್

2022-2026ರವರೆಗಿನ ಐಪಿಎಲ್.. ಅಕ್ಷರ್ 1,136 ರನ್ ಮತ್ತು 44 ವಿಕೆಟ್

ಕೃನಾಲ್ 839 ರನ್ ಹಾಗೂ 56 ವಿಕೆಟ್, ಬೌಲಿಂಗ್‌ ನಲ್ಲಿ ಕೃನಾಲ್‌ ಬೆಸ್ಟ್

ಅಕ್ಷರ್ ಕೃನಾಲ್‌ ಗಿಂತ ರನಸ್ ಜೊತೆಗೆ ದೊಡ್ಡ ಪಂದ್ಯಗಳ ಅನುಭವವೂ ಇದೆ

2026ರ T20 ವಿಶ್ವಕಪ್ ಫೈನಲ್‌ ನಲ್ಲೂ ಅಕ್ಷರ್ ಪ್ಲೇಯಿಂಗ್ 11ನಲ್ಲಿ ಆಟ

ಅಕ್ಷರ್ ಫಿಟ್ ಆಗಿ ಫಾರ್ಮ್‌ ನಲ್ಲಿದ್ದರೆ ಏಕಾಏಕಿ ಕೈಬಿಡುವುದು ಸುಲಭವಿಲ್ಲ

ಕೃನಾಲ್ ಈಗಾಗಲೇ ಭಾರತ ಪರ T20I ಆಡಿರುವ ಅನುಭವ ಹೊಂದಿದ್ದಾರೆ

ಕೊನೆಯದಾಗಿ 2021 ರಲ್ಲಿ ಭಾರತದ ಪರ ಆಟ, 5 ವರ್ಷಗಳ ಬಳಿಕ ಕಂ ಬ್ಯಾಕ್

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ಮೇಲೆ ಸತತ ಎರಡು ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿ ಜಿಂಬಾಬ್ವೆ ವಿರುದ್ಧ ಗೆದ್ದ ಭಾರತ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಹೀಗಾಗಿ ಮುಂದಿನ ಪಂದ್ಯಗಳಿಗೆ ಭಾರತ ತಂಡದಲ್ಲಿ ಬದಲಾವಣೆಗೆ ಬಿಸಿಸಿಐ ಪ್ಲ್ಯಾನ್ ಮಾಡಿದೆ. ಅದ್ರಂತೆ ಈಗ ಕೃನಾಲ್ ಪಾಂಡ್ಯ ಹೆಸರೂ ಚರ್ಚೆಯಲ್ಲಿದೆ. ಹಾಗ್ ನೋಡಿದ್ರೆ ಕೃನಾಲ್ ಒಳ್ಳೆಯ ಆಯ್ಕೆಯೇ. ಅಟ್​ದಿ ಸೇಮ್ ಟೈಂ ಅಕ್ಷರ್ ಪಟೇಲ್ ಕೂಡ ಸಾಕಷ್ಟು ಅನುಭವ ಇರೋ ಆಟಗಾರ. ವೈಸ್ ಕ್ಯಾಪ್ಟನ್ಸಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ.

Shantha Kumari

Leave a Reply

Your email address will not be published. Required fields are marked *