26 ಬಾಲ್.. 77 ರನ್ಸ್.. ಸಿಡಿದ ಅಭಿ – T-20I ಡ್ರಾಪ್ ಭೀತಿಗೆ ಬೆಂಕಿಯಾದ್ರಾ?
ಕ್ಯಾಪ್ಟನ್ಸಿಯಲ್ಲಿ ಸೂರ್ಯವಂಶಿ ಕ್ಲಿಕ್!

26 ಬಾಲ್.. 77 ರನ್ಸ್.. ಸಿಡಿದ ಅಭಿ – T-20I ಡ್ರಾಪ್ ಭೀತಿಗೆ ಬೆಂಕಿಯಾದ್ರಾ?ಕ್ಯಾಪ್ಟನ್ಸಿಯಲ್ಲಿ ಸೂರ್ಯವಂಶಿ ಕ್ಲಿಕ್!

ಐಪಿಎಲ್ ಆದ್ಮೇಲೆ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಬ್ಯಾಟ್ ಮಂಕಾಗಿತ್ತು. ಸೋ ನೆಕ್ಸ್​ಟ್ ಸರಣಿಗೆ ಅವ್ರನ್ನ ತಂಡದಿಂದ ಡ್ರಾಪ್ ಮಾಡಿ ಆಗ ಫಾರ್ಮ್​ಗೆ ಬರ್ತಾರೆ ಅಂತಾ ಕೆಲವ್ರು ಸಜೇಷನ್ಸ್ ಕೂಡ ಕೊಟ್ಟಿದ್ರು. ಇನ್ನೇನು ಅಫ್ಘಾನಿಸ್ತಾನ ಸರಣಿಗೆ ಟೀಂ ಅನೌನ್ಸ್ ಆಗೋ ಟೈಮಲ್ಲಿ ಡ್ರಾಪ್ ಸುದ್ದಿ ಹಬ್ಬಿದ್ದೇ ತಡ ಅಭಿಷೇಕ್ ಶರ್ಮಾ ಬೆಂಕಿಯಾಗಿದ್ದಾರೆ. ಬೌಲರ್​ಗಳನ್ನ ಚೆಂಡಾಡಿದ್ದಾರೆ.. ಬ್ಯಾಟಿಂಗ್​ನಲ್ಲಿ ಸುನಾಮಿ ಎಬ್ಬಿಸಿದ್ದಾರೆ.. ಮತ್ತೊಂದ್ಕಡೆ ವಂಡರ್ ಬಾಯ್ ವೈಭವ್ ಸೂರ್ಯವಂಶಿ ಕ್ಯಾಪ್ಟನ್ಸಿಯಲ್ಲಿ ಕ್ಲಿಕ್ ಆಗ್ತಿದ್ದಾರೆ.

ಇದನ್ನೂ ಓದಿ : BCCIಗೆ ಸುಖದ ಸುಪ್ಪತ್ತಿಗೆ ಬೇಕಾ? – ಏಷ್ಯನ್ ಗೇಮ್ಸ್ ಗೆಲ್ಲುತ್ತಾ B ಟೀಂ?

ಸೆಪ್ಟೆಂಬರ್ 13ರಿಂದ ಆಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ-20ಐ ಸರಣಿ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲೇ ಮೂರೂ ಮ್ಯಾಚಸ್ ಇದೆ. ಕಳೆದ ವಾರವೇ ಇಬ್ರಾಹಿಂ ಝದ್ರಾನ್ ಕ್ಯಾಪ್ಟನ್ಸಿಯಲ್ಲಿ 15 ಸದಸ್ಯರ ತಂಡವನ್ನ ಆಫ್ಘನಿಸ್ತಾನ ಅನೌನ್ಸ್ ಮಾಡಿದೆ. ಆದ್ರೆ ಟೀಂ ಇಂಡಿಯಾ ಇನ್ನೂ ಘೋಷಣೆ ಮಾಡಿಲ್ಲ. ಈ ನಡುವೆ ಅಭಿಷೇಕ್ ಶರ್ಮಾ ಪರ್ಫಾಮೆನ್ಸ್ ಚೆನ್ನಾಗಿಲ್ಲ.. ಅವ್ರನ್ನ ಆಫ್ಘನ್ ಸರಣಿಗೆ ಕೈಬಿಡಿ ಅನ್ನೋ ಕೂಗು ಎದ್ದಿತ್ತು. ಆದ್ರೆ ಈಗ ಅದೇ ಅಭಿಷೇಕ್ ಮೈದಾನದಲ್ಲಿ ಧೂಳೆಬ್ಬಿಸಿದ್ದಾರೆ.

ಒಂದೇ ಓವರ್ ನಲ್ಲಿ 6 ಸಿಕ್ಸ್.. 26 ಬಾಲಲ್ಲೇ 77 ರನ್ಸ್!

ಐರ್ಲೆಂಡ್, ಇಂಗ್ಲೆಂಡ್ ಹಾಗೇ ಜಿಂಬಾಬ್ವೆ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅಷ್ಟೇನು ಸದ್ದು ಮಾಡಿರಲಿಲ್ಲ. ಕಳೆದ 10 ಪಂದ್ಯಗಳಲ್ಲಿ ಒಂದು ಅರ್ಧಶತಕ ಅಷ್ಟೇ ಅವ್ರ ಬ್ಯಾಟಿಂದ ಬಂದದ್ದು. ಜಿಂಬಾಬ್ವೆ ವಿರುದ್ಧವಂತೂ ಮೂರೂ ಪಂದ್ಯಗಳಲ್ಲೂ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸಿದ್ರು. ಹೀಗಾಗಿ ಆಫ್ಘನ್​ ವಿರುದ್ಧದ ಸಿರೀಸ್​ಗೆ ಅಭಿಷೇಕ್ ಬದಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಕೊಡಿ ಅಂತಾ ಟ್ರೆಂಡ್ ಶುರುವಾಗಿತ್ತು. ಆದ್ರೀಗ ಅದೇ ಅಭಿಷೇಕ್ ಶರ್ಮಾ ನಾನು ಫಾರ್ಮ್ ಕಳ್ಕೊಂಡಿಲ್ಲ. ಬಿರುಗಾಳಿ ಎಬ್ಬಿಸಬಲ್ಲೇ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ‘ಶೇರ್-ಎ-ಪಂಜಾಬ್’ ಟಿ20 ಲೀಗ್‌ನಲ್ಲಿ ಬೌಲರ್​ಗಳನ್ನ ಚೆಂಡಾಡಿದ್ದಾರೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲೇ ಅಮೃತಸರ್ ಸೂರ್ಮಾಸ್ ತಂಡದ ನಾಯಕರಾಗಿ ಅಭಿಷೇಕ್ ಸುನಾಮಿ ಎಬ್ಬಿಸಿದ್ರು. ಮೊಹಾಲಿ ಕಿಂಗ್ಸ್ ವಿರುದ್ಧ ಕೇವಲ 26 ಎಸೆತಗಳಲ್ಲಿ 77 ರನ್ ಸಿಡಿಸಿದ್ರು. 6 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ ಸೇರಿದಂತೆ 296.15ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ರು. ಅಭಿಷೇಕ್​ರ ಅಬ್ಬರಿದಂದಾಗಿ ಅಮೃತಸರ್ ಸೂರ್ಮಾಸ್ ತಂಡ 258 ರನ್‌ಗಳನ್ನ ಕಲೆ ಹಾಕಿತ್ತು. ಬಟ್ ಬ್ಯಾಡ್​ಲಕ್ ಪಂದ್ಯ ಗೆಲ್ಲೋಕೆ ಆಗ್ಲಿಲ್ಲ. 259 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಮೊಹಾಲಿ ಕಿಂಗ್ಸ್  ತಂಡದ ಪರ ಅನ್​ಮೋಲ್ ಪ್ರೀತ್ ಸಿಂಗ್ ಸೂಪರ್ ಡೂಪರ್ ಪ್ರದರ್ಶನ ನೀಡಿದ್ರು. 51 ಎಸೆತಗಳಲ್ಲಿ 12 ಭರ್ಜರಿ ಸಿಕ್ಸರ್​ನೊಂದಿಗೆ 133 ರನ್ ಬಾರಿಸಿದರು. ಈ ಮೂಲಕ 19.3 ಓವರ್​ಗಳಲ್ಲಿ 259 ರನ್​ಗಳಿಸುವ ಮೂಲಕ ಮೊಹಾಲಿ ಕಿಂಗ್ಸ್​ ತಂಡ ಗೆದ್ದು ಬೀಗಿತು. ಇಲ್ಲಿ ಅಮೃತಸರ್ ಟೀಂ ಸೋತ್ರೂ ಕೂಡ ಅಭಿಷೇಕ್ ಶರ್ಮಾ ಅವ್ರ ಕಂ ಬ್ಯಾಕ್ ಟೀಂ ಇಂಡಿಯಾಗಂತೂ ಖುಷಿ ನೀಡಿದೆ. ಮುಂದಿನ ಸರಣಿಗಳಲ್ಲಿ ಅಭಿಷೇಕ್ ಬ್ಯಾಟಿಂದ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಮತ್ತೊಂದ್ಕಡೆ ವೈಭವ್ ಸೂರ್ಯವಂಶಿ ಮೈದಾನದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ.

ಬೌಲಿಂಗ್, ಬ್ಯಾಟಿಂಗ್, ಕ್ಯಾಪ್ಟನ್ಸಿಯಲ್ಲೂ ಸೂರ್ಯವಂಶಿ ಕಮಾಲ್!

ಕೇವಲ 15 ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನಲ್ ಸ್ಟಾರ್ ಆಗಿರೋ ವೈಭವ್ ಸೂರ್ಯವಂಶಿ ಈಗ ದುಲೀಫ್ ಟ್ರೋಫಿಯಲ್ಲಿ ಅದ್ಭುತಗಳನ್ನೇ ಸೃಷ್ಟಿಸಿದ್ದಾರೆ. ಬ್ಯಾಟ್ ಹಿಡಿದ್ರೂ ಬೊಂಬಾಟ್ ಪ್ರದರ್ಶನ.. ಬೌಲಿಂಗ್ ಮಾಡಿದ್ರೂ ಸೂಪರ್ ಡೂಪರ್.. ಅಷ್ಟೇ ಯಾಕೆ ಕ್ಯಾಪ್ಟನ್ಸಿಯಲ್ಲೂ ಕ್ಲಿಕ್ ಆಗ್ತಿದ್ದಾರೆ. ಇಶಾನ್ ಕಿಶನ್ ಕ್ಯಾಪ್ಟನ್ಸಿಯ ಈಸ್ಟ್ ಝೋನ್​ಗೆ ವೈಸ್ ಕ್ಯಾಪ್ಟನ್ ಆಗಿ ಸೂರ್ಯವಂಶಿಯನ್ನ ಆಯ್ಕೆ ಮಾಡಿದಾಗ ಕೆಲವ್ರು ಆಪೋಸ್ ಮಾಡಿದ್ರು. ಇನ್ನೂ 15 ವರ್ಷ.. ಡಿಸಿಷನ್ಸ್ ತಗೊಳ್ಳೋಕೆ ಆಗಲ್ಲ. ಸೋ ಈಗಲೇ ನಾಯಕತ್ವ ಬೇಡದಿತ್ತು ಅನ್ನೋದು ಅವ್ರ ವಾದ. ಆದ್ರೆ ಸೂರ್ಯವಂಶಿ ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಈಗ ಪ್ರೂವ್ ಮಾಡಿದ್ದಾರೆ. ಕಳೆದ ವಾರ ನಡೆದಿದ್ದ ಪೂರ್ವ ವಲಯ ಮತ್ತು ಈಶಾನ್ಯ ವಲಯ ನಡುವಿನ ರಣಜಿ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್​ನಲ್ಲಿ ಕ್ಲಿಕ್ ಆಗಿರಲಿಲ್ಲ. ಕೇವಲ 8 ರನ್​ಗಳಿಗೆ ಔಟ್ ಆಗಿದ್ರು. ಆದ್ರೆ ಬೌಲಿಂಗ್​ನಲ್ಲಿ ಎಲ್ಲರ ಹುಬ್ಬೇರಿಸಿದ್ರು. ಒಂದೇ ಓವರ್​ನಲ್ಲಿ ಇಬ್ಬರನ್ನ ಔಟ್ ಮಾಡಿದ್ರು. ಹಾಗೇ ಆ ಪಂದ್ಯದಲ್ಲಿ ಒಟ್ಟಾರೆ ಮೂರು ವಿಕೆಟ್ಸ್ ತಗೊಂಡಿದ್ರು. ಈಗ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರೋ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್​ಗೆ ವಿಕೆಟ್ ಕೀಪಿಂಗ್ ವೇಳೆ ಇಂಜುರಿಯಾಗಿದ್ದು ಹೀಗಾಗಿ ಕಿಶನ್  ಆಬ್ಸೆನ್ಸ್​ನಲ್ಲಿ ಸ್ಟ್ಯಾಂಡ್​ ಅಪ್ ಕ್ಯಾಪ್ಟನ್ ಆಗಿ ಸೂರ್ಯವಂಶಿ ಈಸ್ಟ್ ಝೋನ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಌಂಡ್ ತಮ್ಮ ನಿರ್ಧಾರಗಳಲ್ಲೂ ಮ್ಯಾಜಿಕ್ ಮಾಡಿದ್ದಾರೆ. ಸೆಂಟ್ರಲ್ ಜೋನ್ ಬ್ಯಾಟರ್ ಆರ್ಯನ್ ಜುಯೆಲ್ ವಿರುದ್ಧದ ಕ್ಯಾಚ್ ಬಿಹೈಂಡ್ ಅಪೀಲ್ ಅನ್ನು ಆನ್-ಫೀಲ್ಡ್ ಅಂಪೈರ್ ತಿರಸ್ಕರಿಸಿದರು. ಆದ್ರೆ ಕೇವಲ 3 ಸೆಕೆಂಟ್ಸ್ ಬಾಕಿ ಇರುವಾಗ ಸೂರ್ಯವಂಶಿ DRS ರಿವ್ಯೂ ತೆಗೆದುಕೊಂಡರು. ರಿಪ್ಲೇನಲ್ಲಿ ಬ್ಯಾಟ್‌ಗೆ ಚೆಂಡು ತಗುಲಿರುವುದು ಕ್ಲಿಯರ್ ಆಗಿತ್ತು. ಕೊನೆಗೆ ಅಂಪೈರ್ ಔಟ್ ಅಂತಾ ತೀರ್ಪು ಕೊಟ್ರು. ಬ್ಯಾಟರ್ ಔಟ್ ಆದರು. ಈ ವೇಳೆ ಈಸ್ಟ್ ಝೋನ್ ತಂಡದ ಆಟಗಾರರೆಲ್ಲಾ ಕುಣಿದು ಕುಪ್ಪಳಿಸಿದ್ರು. ಇಷ್ಟೇ ಅಲ್ಲದೆ ಈಗ ಬ್ಯಾಟಿಂಗ್​ನಲ್ಲೂ ತಮ್ಮ ಖದರ್ ತೋರಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ಝೋನ್ ತಂಡವು ಮೊದಲ ಇನಿಂಗ್ಸ್​ನಲ್ಲಿ 266 ರನ್​ಗಳಿಸಿ ಆಲೌಟ್ ಆಗಿದೆ. ಈಸ್ಟ್ ಝೋನ್ ಪರ ವೈಭವ್ ಸೂರ್ಯವಂಶಿ ಹಾಗೂ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಕೇವಲ 81 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 7 ಫೋರ್‌ಗಳ ನೆರವಿನಿಂದ 92 ರನ್ ಚಚ್ಚಿದರು. ಕೇವಲ 8 ರನ್‌ಗಳಿಂದ ಚೊಚ್ಚಲ ಸೆಂಚುರಿ ದಾಖಲೆಯನ್ನು ಮಿಸ್ ಮಾಡಿಕೊಂಡರು. ಹೀಗಿದ್ರೂ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಅಭಿಷೇಕ್ ಮತ್ತು ಸೂರ್ಯವಂಶಿ ಡೊಮೆಸ್ಟಿಕ್​ನಲ್ಲಿ ಅಬ್ಬರಿಸ್ತಿರೋದು ಟೀಂ ಇಂಡಿಯಾಗೂ ಬಿಗ್ ರಿಲೀಫ್ ನೀಡಿದೆ.

Shantha Kumari

Leave a Reply

Your email address will not be published. Required fields are marked *