ಗೃಹಜ್ಯೋತಿಗೆ 30 ದಿನ ಗಡುವು – FREEಗೆ ಏನೆಲ್ಲಾ ದಾಖಲೆ ಬೇಕು?

ಗೃಹಜ್ಯೋತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.. ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಆಗಸ್ಟ್ 31ಕೊನೆಯ ದಿನವಾಗಿತ್ತು. ಆದ್ರೆ ಈ ದಿನಾಂಕವನ್ನ ಮತ್ತೆ ವಿಸ್ತರಣೆ ಮಾಡಿದ್ದಾರೆ. ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಗೆ 3 ವರ್ಷದ ಸಂಭ್ರಮ – ಪಿಂಕ್ ಕಲರ್‌ನಲ್ಲಿ ಕಂಗೊಳಿಸಲಿವೆ ಐತಿಹಾಸಿಕ ತಾಣಗಳು!
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೊತಿ ಯೋಜನೆಗಳ ಪರಿಷ್ಕರಣೆ ನಡೆಯುತ್ತಿದೆ. ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ದೂರವಿಡಲು ಸರ್ಕಾರ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತಿದೆ. ಇದರ ನಡುವೆಯೇ ಗೃಹಜ್ಯೋತಿ ಪರಿಷ್ಕರಣೆಗೆ ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಮೀಟರ್ ರೀಡರ್‌ಗಳಿಂದ ಮನೆ-ಮನೆಗೆ ತೆರಳಿ ಸರ್ವೆ ಆರಂಭ ಆಗಿದೆ. ಆಗಸ್ಟ್ 31ಕ್ಕೆ ಲಾಸ್ಟ್ ಡೇಟ್ ನೀಡಿದ್ರೂ ಇದುವರೆಗೆ 71% ಸರ್ವೆ ಪೂರ್ಣವಾಗಿದ್ದು, ಇನ್ನೂ 29% ಮಾಹಿತಿ ಸಂಗ್ರಹ ಬಾಕಿ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾಕಷ್ಟು ಸರ್ವೆ ಕೆಲಸ ಪೆಡಿಂಗ್ ಇದೆ. ಬೆಸ್ಕಾಂ ಸಿಬ್ಬಂದಿ ಮನೆಗೆ ಹೋದಾಗ ಮಾಲೀಕರು ಇಲ್ಲದಿರುವುದು… ಅಪಾರ್ಟ್‌ಮೆಂಟ್‌ಗಳಲ್ಲಿ ಅಗತ್ಯ ಮಾಹಿತಿ ನೀಡದಿರುವುದು.. ಇನ್ನಿತರ ಕಾರಣಗಳಿಂದ ಸರ್ವೆ ಕಾರ್ಯಕ್ಕೆ ಹಿನ್ನಡೆಯಾಗಿದೆ ಹೀಗಾಗಿ ಒಂದು ತಿಂಗಳು ಮುದೂಡಿಕೆ ಆಗಿದೆ.
ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ ನೆಡಸಲು ಬೆಸ್ಕಾಂ ಮೀಟರ್ ರೀಡರ್‌ಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಹಾಗಿದ್ರೆಯಾವೆಲ್ಲಾ ದಾಖಲೆಗಳು ಬೇಕು ಅನ್ನೋದ್ದನ್ನ ನೋಡೋದಾದ್ರೆ.
ಗೃಹಜ್ಯೋತಿಗೆ ಬೇಕಾದ ಅಗತ್ಯ ದಾಖಲೆಗಳು:
ವೋಟರ್ ಐಡಿ
ರೇಷನ್ ಕಾರ್ಡ್
ರೆಂಟ್ ಅಗ್ರಿಮೆಂಟ್
ಪಾನ್ ಕಾರ್ಡ್
ಜಾತಿ ಪ್ರಮಾಣ ಪತ್ರ
ನಿಮ್ಮ ಫೋಟೋ
ಕರ್ನಾಟಕದ ನಿವಾಸಿ ಹೌದಾ ಅಲ್ವಾ ಅನ್ನೋದ್ದಕ್ಕೆ ವೋಟರ್ ಐಡಿ ಕಡ್ಡಾಯ. ರೇಷನ್ ಕಾರ್ಡ್ ಬೇಕು , ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅನ್ನೋದು ತಿಳಿಯೋಕೆ ನೀವು ಬಾಡಿಗೆ ಮನೆಯಲ್ಲಿದ್ದರೆ. ಬಾಡಿಗೆ ಒಪ್ಪಂದ ಪತ್ರ ಬೇಕು. ಆದಾಯ ತೆರಿಗೆ ಪಾವತಿದಾರರೇ ಎಂಬುದನ್ನು ಗುರುತಿಸಲು ಪ್ಯಾನ್ ಕಾರ್ಡ್ ಬೇಕು. ಜಾತಿ ಪ್ರಮಾಣ ಪತ್ರ ಬೇಕು, ಲಾನುಭವಿಗಳ ವರ್ಗೀಕರಣದ ಮಾಹಿತಿಗಾಗಿ. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಬೇಕು
ನಿಮ್ಮ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಅಂದ್ರೆ ಮನೆಗೆ ಬರುವ ಸಿಬ್ಬಂದಿಗಳಿಗೆ ಪರಿಶೀಲನೆಗಾಗಿ ಕೇವಲ ದಾಖಲೆಗಳನ್ನು ತೋರಿಸಿದರೆ ಸಾಕು. ಯಾವುದೇ Original ದಾಖಲೆಗಳನ್ನು ಅವರಿಗೆ ನೀಡಬೇಕಾಗಿಲ್ಲ ಮತ್ತು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
ಇನ್ನೂ ಬೆಸ್ಕಾಂ ತನ್ನ ಗ್ರಹಕರಿಗಾಗಿ ಹೊಸ ಹೆಲ್ಫ್ ಲೈನ್ ಆರಂಭಿಸಿದೆ. ಗೊಂದಲ ಇದ್ರೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ತನಕ ನೀವು ಕೆರೆ ಮಾಡಿ ಮಾಹಿತಿ ಕೇಳಬಹುದು. ನಂಬರ್ ಈ ಸ್ಕೈನ್ ಮೇಲೆ ಹಾಕಿದ್ದೇವೆ ನೀವು ಇದ್ದನ್ನ ನೋಟ್ ಮಾಡಿಕೊಳ್ಳಬಹುದು.. ಒಟ್ಟು ನಾಲ್ಕು ನಂಬರ್ ಇದ್ದು, ಈ ನಂಬರ್ ಕಾಲ ಮಾಡಿ ಗೊಂದಲ ಪರಿಹಾರ ಮಾಡಿಕೊಳ್ಳಿ.
ಸರ್ವೆಯಲ್ಲಿ ವೋಟರ್ ID ನಿರ್ಣಾಯಕ.. ಸರ್ಕಾರದ ಯೋಜನೆಗಳಿಗೆ ವೋಟರ್ ID ಕಡ್ಡಾಯ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಪರಿಷ್ಕರಣೆ ಬಳಿಕ ಅನರ್ಹ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಿಂದ ಕೊಕ್ ಸಿಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಟ್ಟು 1,65,32,652 ಗೃಹಜ್ಯೋತಿ ಫಲಾನುಭವಿಗಳಿದ್ದು, ಇದ್ರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲೇ 68,86,860 ಫಲಾನುಭವಿಗಳು ಇದ್ದಾರೆ.. ಪರಿಷ್ಕರಣೆ ಬಳಿಕ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಸಾಧ್ಯತೆ.

ನೋಡಿರಿ

